ಬಾಗಲಕೋಟೆ : ನನ್ನ ಸಂಸ್ಕೃತಿ ಶರಣ ಸಂಸ್ಕತಿ, ಕೆಟ್ಟ ಸಂಸ್ಕೃತಿ ಅಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾತನಾಡಿ, ದ್ವೇಷ ಮಾಡುವವರು ನನ್ನ ಬಂಧುಗಳು ಎಂದು ತಿಳಿದುಕೊಳ್ಳುವ ಸಂಸ್ಕೃತಿ ನನ್ನದು ಎಂದು ಹೇಳಿದರು. ಕ್ಷೇತ್ರದಲ್ಲಿ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ನಾನು ಯಾವ ಅಧಿಕಾರಿಯನ್ನೂ ದುರೋಪಯೋಗ ಮಾಡಿಕೊಂಡಿಲ್ಲ, ಮಾಡಿಕೊಳ್ಳುವುದು ಇಲ್ಲ ಎಂದರು.
ಇದನ್ನೂ ಓದಿ: ಡಿಸಿಎಂ ಕಾರಜೋಳರಿಂದ ಅಧಿಕಾರಿಗಳ ದುರುಪಯೋಗ: ವಿಜಯಾನಂದ ಕಾಶಪ್ಪನವರ
ಡಿಸಿಸಿ ಬ್ಯಾಂಕ್ ಚುನಾವಣೆ ಬಗ್ಗೆ ಮಾತನಾಡಿ, ಡಿಸಿಸಿ ಬ್ಯಾಂಕ್ ಚುನಾವಣೆಗೂ ನನಗೂ ಸಂಬಂಧವಿಲ್ಲ. ವಿನಾಕಾರಣ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದರು.