ETV Bharat / state

ರಾಗಿಣಿ ಯಾರೆಂದು ಗೊತ್ತಿಲ್ಲ, ಯಾರೇ ತಪ್ಪು ಮಾಡಿದ್ರೂ ಕ್ರಮ: ಡಿಸಿಎಂ ಕಾರಜೋಳ - Sandalwood Drug Link

ಡ್ರಗ್ಸ್ ಹಗರಣದಲ್ಲಿ ಭಾಗಿಯಾಗಿರುವವರ ಮೇಲೆ ಕ್ರಮ ಶುರುವಾಗಿದೆ. ತನಿಖೆ ಹಂತದಲ್ಲಿದೆ. ತನಿಖೆ ಮುಗಿಯುವವರೆಗೆ ಏನೂ ಹೇಳಲು ಆಗಲ್ಲ. ವಿಷಯವನ್ನು ಗೌಪ್ಯವಾಗಡಿಬೇಕಾಗುತ್ತೆ. ತನಿಖೆ ಮುಗಿದ ತಕ್ಷಣ ಕೋರ್ಟ್‌ಗೆ ಚಾರ್ಜ್‌‌ಶೀಟ್ ಸಲ್ಲಿಸುವ ಮುಂಚೆ ಮಾಹಿತಿ ನೀಡಲಾಗುತ್ತದೆ..

dcm-govinda-karajola-talks-on-sandalwood-drug-link-case
ರಾಗಿಣಿ ಯಾರು ಅಂತ ಗೊತ್ತಿಲ್ಲಾ, ಯಾರೇ ತಪ್ಪು ಮಾಡಿದರೂ ಕ್ರಮ: ಡಿಸಿಎಂ ಗೋವಿಂದ ಕಾರಜೋಳ
author img

By

Published : Sep 5, 2020, 2:47 PM IST

ಬಾಗಲಕೋಟೆ : ಡಗ್ಸ್ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಬಂಧನಕ್ಕೊಳಗಾಗಿ ವಿಚಾರಣೆ ಎದುರಿಸುತ್ತಿರುವ ನಟಿ ರಾಗಿಣಿ ಯಾರೂ ಅಂತಾನೇ ಗೊತ್ತಿಲ್ಲ. ಯಾರೇ ತಪ್ಪು ಮಾಡಿದ್ದರೂ ಸರ್ಕಾರ ಅಂತವರ ಮೇಲೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಅಂಬೇಡ್ಕರ್ ಭವನದಲ್ಲಿ ಶಿಕ್ಷಕರ ದಿನಾಚರಣೆ ಸಮಾರಂಭದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ರಾಜಕಾರಣಿ, ಸಾಮಾನ್ಯರ ಇಲ್ಲ ಅಧಿಕಾರಿಗಳ ಮಕ್ಕಳೇ ಆಗಿದ್ರೂ ದೇಶದ ಕಾನೂನು ಎಲ್ಲರಿಗೂ ಒಂದೇ ಎಂದರು.

ಸ್ಯಾಂಡಲ್​​​​ವುಡ್​ ಡ್ರಗ್ಸ್‌ ಲಿಂಕ್ ಆರೋಪ ಕುರಿತು ಡಿಸಿಎಂ ಕಾರಜೋಳ ಪ್ರತಿಕ್ರಿಯೆ

ಡ್ರಗ್ಸ್‌ ಹಗರಣದಲ್ಲಿ ಭಾಗಿಯಾಗಿರುವವರ ಮೇಲೆ ಕ್ರಮ ಶುರುವಾಗಿದೆ. ತನಿಖೆ ಹಂತದಲ್ಲಿದೆ. ತನಿಖೆ ಮುಗಿಯುವವರೆಗೆ ಏನೂ ಹೇಳಲು ಆಗಲ್ಲ. ವಿಷಯವನ್ನು ಗೌಪ್ಯವಾಗಡಿಬೇಕಾಗುತ್ತೆ. ತನಿಖೆ ಮುಗಿದ ತಕ್ಷಣ ಕೋರ್ಟ್‌ಗೆ ಚಾರ್ಜ್‌‌ಶೀಟ್ ಸಲ್ಲಿಸುವ ಮುಂಚೆ ಮಾಹಿತಿ ನೀಡಲಾಗುತ್ತದೆ ಎಂದರು. ಇದರಿಂದ ಆರೋಗ್ಯಕ್ಕೆ ಕುತ್ತು ಬರುತ್ತದೆ ಎಂಬ ಅರಿವು ಇರಬೇಕು. ಸಮಾಜದಲ್ಲಿ ಇಂತಹ ಚಟುವಟಿಕೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ.

ಎಲ್ಲವೂ ಪೊಲೀಸರಿಂದ ಸರಿಮಾಡಲು ಸಾಧ್ಯವಿಲ್ಲ. ಯಾರೇ ತಪ್ಪು ಮಾಡಿದರೂ ಶಿಕ್ಷೆ ವಿಧಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು. ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಚಿವ ಸಂಪುಟ ವಿಸ್ತರಣೆ ಮುನ್ನ ನಿಮಗೂ ಆಹ್ವಾನ ನೀಡುತ್ತೇವೆ ಎಂದು ನಗೆ ಚಟಾಕಿ ಹಾರಿಸಿದರು.

ಸಚಿವರ ಬದಲಾವಣೆ ಕುರಿತು ಯಾವುದೇ ಬೆಳವಣಿಗೆ ನಡೆದಿಲ್ಲ ಎಂದರು. ಡ್ರಗ್ಸ್ ದಂಧೆಯಿಂದಲೇ ಬಂದ ಹಣದಿಂದ ಮೈತ್ರಿ ಸರ್ಕಾರ ಕೆಡವಲಾಯ್ತು ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ಕುಮಾರಸ್ವಾಮಿ ಅವರು ರಾಜಕೀಯ ಪ್ರೇರಿತ ಆರೋಪ ಮಾಡುತ್ತಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.