ETV Bharat / state

ದಲಿತ ಯುವತಿ ಮೇಲೆ ಅತ್ಯಾಚಾರ, ಹತ್ಯೆ: ಆರ್. ಬಿ. ತಿಮ್ಮಾಪೂರ ಖಂಡನೆ - ncident condemns by R. B. Thimmapura

ದಲಿತ ಸಮುದಾಯದ ಯುವತಿ ಮೇಲೆ ಅತ್ಯಾಚಾರವೆಸಗಿ ಬಳಿಕ ಹತ್ಯೆ ಮಾಡಿ, ಘಟಪ್ರಭಾ ನದಿಗೆ ಎಸೆದಿರುವ ಘಟನೆ ಖಂಡನೀಯ. ಇಂತಹ ಘಟನೆಗಳು ನಮ್ಮ ತಾಲೂಕಿನಲ್ಲಾಗಲಿ ಅಥವಾ ಜಿಲ್ಲೆಯಲ್ಲಿ ಆಗಲಿ ನಡೆಯಬಾರದು. ಈ ಕೃತ್ಯದ ಹಿಂದೆ ಯಾರೇ ಇರಲಿ, ಆದಷ್ಟು ಬೇಗ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಆರ್. ಬಿ. ತಿಮ್ಮಾಪೂರ ಒತ್ತಾಯಿಸಿದ್ದಾರೆ.

ಆರ್. ಬಿ. ತಿಮ್ಮಾಪೂರ
ಆರ್. ಬಿ. ತಿಮ್ಮಾಪೂರ
author img

By

Published : Feb 18, 2021, 7:06 AM IST

Updated : Feb 18, 2021, 7:38 AM IST

ಬಾಗಲಕೋಟೆ: ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದ ದಲಿತ ಸಮುದಾಯದ ಯುವತಿ ಮೇಲೆ ಅತ್ಯಾಚಾರವೆಸಗಿ ಬಳಿಕ ಹತ್ಯೆ ಮಾಡಿ, ಘಟಪ್ರಭಾ ನದಿಗೆ ಎಸೆದಿರುವುದು ಖಂಡನೀಯ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಆರ್. ಬಿ. ತಿಮ್ಮಾಪೂರ ಹೇಳಿದ್ದಾರೆ.

ವಿಧಾನಪರಿಷತ್ ಸದಸ್ಯ ಆರ್. ಬಿ. ತಿಮ್ಮಾಪೂರ

ಮುಧೋಳ ಪಟ್ಟಣದ ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆಗಳು ನಮ್ಮ ತಾಲೂಕಿನಲ್ಲಾಗಲಿ ಅಥವಾ ಜಿಲ್ಲೆಯಲ್ಲಿ ಆಗಲಿ ನಡೆಯಬಾರದು. ಕಡುಬಡತನದ ಕುಟುಂಬದಿಂದ ಬಂದು, ಕಷ್ಟಪಟ್ಟು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಂತಹ ಯುವತಿಯ ಮೇಲೆ ಈ ಕೃತ್ಯ ನಡೆದಿದ್ದು ಖಂಡನಿಯ ಎಂದರು.

ಓದಿ: ಅತ್ಯಾಚಾರ ಎಸಗಿ ಯುವತಿಯ ಕೊಲೆ: ಕಲಾದಗಿ ಠಾಣೆಯಲ್ಲಿ ದೂರು ದಾಖಲು

ಮುಧೋಳ ಮತಕ್ಷೇತ್ರದ ಶಾಸಕರು ಹಾಗೂ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರು, ಈ ಕೃತ್ಯದ ಹಿಂದೆ ಯಾರೇ ಇರಲಿ ಆದಷ್ಟು ಬೇಗ ಅವರ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಘಟನೆಯಿಂದ ಯುವತಿಯ ಕುಟುಂಬದವರಿಗೆ ಆಘಾತವಾಗಿರುತ್ತದೆ. ಇದನ್ನು ತಡೆದುಕೊಳ್ಳುವಂತಹ ಶಕ್ತಿಯನ್ನು ಭಗವಂತ ಅವರ ಕುಟುಂಬದ ಎಲ್ಲಾ ಸದಸ್ಯರಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

Last Updated : Feb 18, 2021, 7:38 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.