ETV Bharat / state

ಬಾಗಲಕೋಟೆ: ಅತ್ಯಾಚಾರಿ ಅಪರಾಧಿಗೆ ಅಜೀವ ಜೀವಾವಧಿ ಶಿಕ್ಷೆ

ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ ಬಾಗಲಕೋಟೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಜೀವ ಜೀವಾವಧಿ ಶಿಕ್ಷೆ ವಿಧಿಸಿದೆ.

crime-life-imprisonment-for-rapist-in-bagalakote
ಬಾಗಲಕೋಟೆ: ಅತ್ಯಾಚಾರಿ ಅಪರಾಧಿಗೆ ಅಜೀವ ಜೀವಾವಧಿ ಶಿಕ್ಷೆ
author img

By

Published : Jul 26, 2023, 10:42 PM IST

Updated : Jul 26, 2023, 11:00 PM IST

ಬಾಗಲಕೋಟೆ: ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಅಪಾರಾಧಿಗೆ ಅಜೀವ ಜೀವಾವಧಿ ಶಿಕ್ಷೆ ಜೊತೆಗ 42 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಹನಮಂತ ಮಾಗುಂಡಪ್ಪ ಹುಲಸಗೇರಿ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ.

ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದವನಾದ ಈತ 2019ರ ಮೇ.17 ರಂದು ಗ್ರಾಮದಲ್ಲಿ ದ್ಯಾಮವ್ವ ದೇವಿಯ ಉಡಿ ತುಂಬುವ ಕಾರ್ಯಕ್ರಮ ಇತ್ತು, ಗ್ರಾಮದ ಮನೆಯೊಂದರಲ್ಲಿ ಬುದ್ಧಿಮಾಂದ್ಯ ಮಹಿಳೆ ಒಬ್ಬಳೇ ಇದ್ದಾಗ ಮಧ್ಯಾಹ್ನ ಸಮಯದಲ್ಲಿ ಅಕ್ರಮವಾಗಿ ಮನೆಯ ಪ್ರವೇಶ ಮಾಡಿ ಅತ್ಯಾಚಾರ ಎಸಗಿದ್ದ. ಅಲ್ಲದೇ ತಪ್ಪಿಸಿಕೊಂಡು ಹೋಗುವಾಗ ಸಂತ್ರಸ್ತ ಮಹಿಳೆಗೆ ತೆಲೆಗೆ ಗಾಯಪಡಿಸಿ ಜೊತೆಗೆ ಮನೆಯಲ್ಲಿದ್ದ ಮೊಬೈಲ್​ ಕಳ್ಳತನ ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳು ಇಲ್ಲದೇ ಇರುವುದರಿಂದ ಬೆರಳಚ್ಚು ತಜ್ಞರು ಪರಿಶೀಲನೆ ವೇಳೆ ಆಕಸ್ಮಿಕವಾಗಿ ಸಿಕ್ಕ ಬೆರಳು ಮುದ್ರೆ ಹಾಗೂ ಅಪರಾಧಿ ಮಹಿಳೆ ದೇಹದ ಮೇಲೆ ಹಲ್ಲಿನಿಂದ ಕಚ್ಚಿದ್ದ ಗುರುತುಗಳನ್ನು ಅಪರಾಧಿ ಹಲ್ಲಿನೊಂದಿಗೆ ಹೋಲಿಕೆ ಮಾಡಿ ನೋಡಿದಾಗ ಇದು ಆತನದ್ದೇ ಎಂದು ಖಚಿತವಾಗಿದೆ. ನಂತರ ಬಾದಾಮಿ ಸಿಪಿಐ ಕೆ.ಎಸ್.ಹಟ್ಟಿ ತನಿಖೆ ನಡೆಸಿದಾಗ, ವೈದ್ಯಕೀಯ ಪರೀಕ್ಷೆಯಲ್ಲಿ ಹನುಮಂತ ಹುಲಸಗೇರಿ ಮಾಡಿರುವ ಕೃತ್ಯ ಬೆಳಕಿಗೆ ಬಂದಿತ್ತು. ನಂತರ ಆತನನ್ನು ಬಂಧಿಸಿ, ಮನೆಯಲ್ಲಿ ಕಳವಾಗಿದ್ದ ಮೊಬೈಲ್​ ಅನ್ನು ಸಹ ವಶ ಪಡಿಸಿಕೊಳ್ಳಲಾಗಿತ್ತು.

ಈ ಪ್ರಕರಣದ ಕೊನೆಯ ಹಂತದ ತನಿಖೆ ನಡೆಸಿದ್ದ ಸಿಪಿಐ ಆರ್.ಎಚ್. ಹಾನಾಪೂರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎನ್​ ವಿ ವಿಜಯ ಅಜೀವ ಜೀವಾವಧಿ ಶಿಕ್ಷೆ ಜೊತೆಗೆ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಇನ್ನು ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ವಿ.ಜಿ.ಹೆಬಸೂರ ಪ್ರಕರಣದ ವಾದ ಮಂಡಿಸಿದ್ದರು.

ಹೆತ್ತ ಮಗಳನ್ನೇ ಅತ್ಯಾಚಾರ ಮಾಡಿದ ತಂದೆಗೇ ಸಾಯುವ ತನಕ ಜೈಲು ಶಿಕ್ಷೆ: ಇತ್ತೀಚಿಗೆ, ಹೆತ್ತ ಮಗಳನ್ನೇ ಅತ್ಯಾಚಾರ ಮಾಡಿ, ಗರ್ಭಿಣಿ ಮಾಡಿದ್ದ ಕಾಮುಕ ತಂದೆಗೆ ಚಾಮರಾಜನಗರ ಜಿಲ್ಲಾ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿತ್ತು. ಚಾಮರಾಜನಗರ ಜಿಲ್ಲೆಯ 48 ವರ್ಷದ ತಂದೆ ಶಿಕ್ಷೆಗೊಳಗಾದ ಅಪರಾಧಿ. ಅಪ್ರಾಪ್ತ ಮಗಳನ್ನು ಈತ ಅತ್ಯಾಚಾರ ಎಸಗಿ, ಗರ್ಭಿಣಿ ಮಾಡಿದ್ದ ಈ ಸಂಬಂಧ ಚಾಮರಾಜನಗರ ಠಾಣೆಯೊಂದರಲ್ಲಿ ಪೊಕ್ಸೋ ಪ್ರಕರಣ ದಾಖಲಾಗಿತ್ತು. ವಾದ - ಪ್ರತಿವಾದ ಆಲಿಸಿ ನ್ಯಾ.ನಿಶಾರಾಣಿ ಅವರು, ವ್ಯಕ್ತಿಯ ಆರೋಪ ಸಾಬೀತಾಗಿದ್ದರಿಂದ 48 ವರ್ಷದ ಅಪರಾಧಿಗೆ ಆತನ ಜೀವಿತಾವಧಿ ತನಕ ಜೈಲುಶಿಕ್ಷೆ ವಿಧಿಸಿದ್ದರು.

ಕೆ.ಯೋಗೇಶ್ ವಾದ ಮಂಡಿಸಿದ್ದರು. ಇನ್ನು, ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರವು 6 ಲಕ್ಷ ರೂ. ಪರಿಹಾರವನ್ನು 30 ದಿನದೊಳಗಾಗಿ ಕೊಡಬೇಕೆಂದು ನ್ಯಾಯಾಧೀಶರು ಸೂಚನೆ ಕೊಟ್ಟಿದ್ದರು.

ಇದನ್ನೂ ಓದಿ: ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಶೇರ್ ಮಾಡಿದ್ದ ಯುವಕನ ಬಂಧನ..

Last Updated : Jul 26, 2023, 11:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.