ETV Bharat / state

ಕೋವಿಡ್ ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತನೆಯಾದ ಕೆಎಸ್​ಆರ್​ಟಿಸಿ ಬಸ್ - ಕೆಎಸ್​ಆರ್​ಟಿಸಿ ಬಸ್ ಕೋವಿಡ್ ಮೊಬೈಲ್ ಕ್ಲಿನಿಕ್ ​ಬಸ್​ ಆಗಿ ಪರಿವರ್ತನೆ

ಕೆಎಸ್​ಆರ್​ಟಿಸಿ ಬಸ್ ಕೋವಿಡ್ ಮೊಬೈಲ್ ಫಿವರ್ ಕ್ಲಿನಿಕ್ ಆಗಿ ಬದಲಾವಣೆಯಾಗಿದ್ದು, ಕಂಟೈನ್‌ಮೆಂಟ್ ಹಾಗೂ ಬಫರ್ ಜೋನ್​ನ ಜನರ ತಪಾಸಣೆಗೆ ಈ ಬಸ್ ಬಳಕೆಯಾಗಲಿದೆ.

covid clinic bus
covid clinic bus
author img

By

Published : Apr 30, 2020, 10:21 AM IST

ಬಾಗಲಕೋಟೆ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಕೊವಿಡ್ ಮೊಬೈಲ್ ಕ್ಲಿನಿಕ್ ತೆರೆಯಲಾಗಿದೆ.

ಕೆಎಸ್​ಆರ್​ಟಿಸಿ ಎಮ್​ಡಿ ಶಿವಯೋಗಿ ಕಳಸದ ಕೋವಿಡ್‌ ಮೊಬೈಲ್ ಫಿವರ್ ಕ್ಲಿನಿಕ್​ಗೆ ಚಾಲನೆ ನೀಡಿದರು. ಕೆಎಸ್​ಆರ್​ಟಿಸಿ ಬಸ್ ಕೋವಿಡ್ ಮೊಬೈಲ್ ಫಿವರ್ ಕ್ಲಿನಿಕ್ ಆಗಿ ಬದಲಾವಣೆಯಾಗಿದ್ದು, ಬಾಗಲಕೋಟೆ ಡಿಸಿ ಕಚೇರಿ ಎದುರು ಕ್ಲಿನಿಕ್​ಗೆ ಚಾಲನೆ ನೀಡಿದ ಬಳಿಕ ಶಿವಯೋಗಿ ಕಳಸದ ಸ್ಕ್ರೀನಿಂಗ್ ಮಾಡಿಸಿಕೊಂಡರು.‌

ಕೋವಿಡ್ ಮೊಬೈಲ್ ಕ್ಲಿನಿಕ್​ಗೆ ಚಾಲನೆ

ಕಂಟೈನ್‌ಮೆಂಟ್ ಹಾಗೂ ಬಫರ್ ಜೋನ್​ನ ಜನರ ತಪಾಸಣೆಗೆ ಈ ಬಸ್ ಬಳಕೆಯಾಗಲಿದೆ. ಇದೇ ಬಸ್​ನಲ್ಲೇ ಸ್ಕ್ರೀನಿಂಗ್, ಮಾತ್ರೆ, ಔಷಧ ಸೌಲಭ್ಯ ದೊರೆಯಲಿವೆ. ಬಸ್​ನಲ್ಲಿ ಒಂದು ಬೆಡ್ ಇದ್ದು, ಇಬ್ಬರು ವೈದ್ಯಕೀಯ ಸಿಬ್ಬಂದಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.

ಚಾಲನೆ ಕಾರ್ಯಕ್ರಮದ ವೇಳೆ ಬಾಗಲಕೋಟೆ ಡಿಸಿ ಕ್ಯಾಪ್ಟನ್ ರಾಜೇಂದ್ರ, ಸಿಇಓ ಗಂಗೂಬಾಯಿ ಮಾನಕರ್, ಜಿಲ್ಲಾ ಆರೋಗ್ಯಾಧಿಕಾರಿ ಅನಂತ ದೇಸಾಯಿ, ಜಿಲ್ಲಾಸ್ಪತ್ರೆ ಸರ್ಜನ್ ಪ್ರಕಾಶ್ ಬಿರಾದಾರ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.