ETV Bharat / state

ಅದ್ದೂರಿಯಾಗಿ ಕೊರೊನಾ ಲಸಿಕೆ ಬರಮಾಡಿಕೊಂಡ ಜಿಲ್ಲಾಡಳಿತ - ಕೊರೊನಾ ಲಸಿಕೆ ಬರಮಾಡಿಕೊಂಡ ಜಿಲ್ಲಾಡಳಿತ

ಲಸಿಕೆ ಸಂಸ್ಕರಣ ಘಟಕಕ್ಕೆ ಬಲೂನ್ ಹಾಗೂ ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಕೊರೊನಾ ಲಸಿಕೆ ಬಾಕ್ಸ್​ಗಳಿಗೆ ಮಹಿಳೆಯರು ಆರತಿ ಮಾಡಿ ಪೂಜೆ ಸಲ್ಲಿಸಿದರು.

vaccine arrived Bagalakot
ಅದ್ದೂರಿಯಾಗಿ ಕೊರೊನಾ ಲಸಿಕೆ ಬರಮಾಡಿಕೊಂಡ ಜಿಲ್ಲಾಡಳಿತ
author img

By

Published : Jan 14, 2021, 2:48 AM IST

ಬಾಗಲಕೋಟೆ : ಕೊರೊನಾ ಲಸಿಕೆ ಹೊತ್ತು ತಂದ ವ್ಯಾನ್​ನ್ನು ಜಿಲ್ಲಾಡಳಿತ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಲಸಿಕೆ ಸಂಸ್ಕರಣ ಘಟಕಕ್ಕೆ ಬಲೂನ್ ಹಾಗೂ ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಕೊರೊನಾ ಲಸಿಕೆ ಬಾಕ್ಸ್​ಗಳಿಗೆ ಮಹಿಳೆಯರು ಆರತಿ ಮಾಡಿ ಪೂಜೆ ಸಲ್ಲಿಸಿದರು.

ಅದ್ದೂರಿಯಾಗಿ ಕೊರೊನಾ ಲಸಿಕೆ ಬರಮಾಡಿಕೊಂಡ ಜಿಲ್ಲಾಡಳಿತ

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಮಾತನಾಡಿ, ಬೆಳಗಾವಿಯಿಂದ‌‌ ಬಂದಿರುವ ಈ ವಾಹನದಲ್ಲಿ 30 ಸಾವಿರ ಲಸಿಕೆಗಳಿವೆ. ಇಲ್ಲಿಂದ ವಿಜಯಪುರ, ಗದಗ ಹಾಗೂ ಕೊಪ್ಪಳಕ್ಕೆ ಕಳುಹಿಸಲಾಗುತ್ತದೆ. ನಮ್ಮ ಜಿಲ್ಲೆಗೆ 8 500 ಲಸಿಕೆ ಮೀಸಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿಗೆ ಬರುತ್ತದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 17,600 ಜನರಿಗೆ ಲಸಿಕೆ ಕೂಡಬೇಕಾಗಿದೆ.ಈಗಾಗಲೇ ಒಂಭತ್ತು ಕಡೆಯಲ್ಲಿ ಲಸಿಕೆ ನೀಡುವ ಬಗ್ಗೆ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.