ಬಾಗಲಕೋಟೆ: ಜಿಲ್ಲೆಯ ಪೊಲೀಸ್ ಪೇದೆಯೋರ್ವರಿಗೆ ಕೊರೊನಾ ವೈರಸ್ ಸೋಂಕು ತಗುಲಿದ ಪರಿಣಾಮ ಜಮಖಂಡಿ, ಮುಧೋಳ ಪೊಲೀಸ್ ಸಿಬ್ಬಂದಿಗೆ ಕ್ವಾರಂಟೈನ್ನಲ್ಲಿ ಇಟ್ಟು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದೀಗ ಅವರ ವರದಿ ನೆಗೆಟಿವ್ ಬಂದಿದೆ.
ಇದರಲ್ಲಿ ಪಿಎಸ್ಐ, ಸಿಪಿಐ ಸೇರಿದಂತೆ ಒಟ್ಟು 80ಕ್ಕೂ ಹೆಚ್ಚು ಸಿಬ್ಬಂದಿಯನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಎಲ್ಲಾ ಸಿಬ್ಬಂದಿಯ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಪೊಲೀಸ್ ಇಲಾಖೆ ನಿಟ್ಟುಸಿರು ಬಿಡುವಂತಾಗಿದೆ. ಎಲ್ಲರನ್ನೂ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ಇನ್ನು ಎರಡು ದಿನಗಳ ನಂತರ ಎಲ್ಲರೂ ಬಿಡುಗಡೆ ಆಗಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಸಾರ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಇನ್ನು ಇದರಿಂದ ಪೊಲೀಸ್ ಇಲಾಖೆಗೆ ನೆಮ್ಮದಿ ಸಿಕ್ಕಿದೆ. 80 ಜನ ಸಿಬ್ಬಂದಿ ಕಚೇರಿಗೆ ಬಾರದೆ ಕ್ವಾರಂಟೈನ್ನಲ್ಲಿ ಇದ್ದರು. ಈಗ ಎಲ್ಲರ ವರದಿ ನೆಗೆಟಿವ್ ಬಂದಿರುವುದು ಸಂತಸ ತಂದಿದೆ ಎಂದರು.