ETV Bharat / state

ಸಿಎಂ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ, ಕೇವಲ ಮಾಧ್ಯಮಗಳಲ್ಲಿ ವದಂತಿ ಅಷ್ಟೇ: ಸಚಿವ ಆರ್ ಬಿ ತಿಮ್ಮಾಪೂರ

ನಮ್ಮಲ್ಲಿ ಡಿಕೆಶಿ, ಸಿದ್ದರಾಮಯ್ಯ ಎಂಬ ಬಣಗಳಿಲ್ಲ. ಇಬ್ಬರು ನಮ್ಮ ಲೀಡರ್​ಗಳೇ. ಸಿಎಂ ಸಿದ್ದರಾಮಯ್ಯ ಶಾಸಕಾಂಗ‌ ಪಕ್ಷದ ‌ನಾಯಕರಿದ್ದಾರೆ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪೂರ ತಿಳಿಸಿದ್ದಾರೆ.

Minister RB Thimmapura spoke at a press conference.
ಸಚಿವ ಆರ್ ಬಿ ತಿಮ್ಮಾಪೂರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
author img

By ETV Bharat Karnataka Team

Published : Oct 28, 2023, 4:44 PM IST

Updated : Oct 28, 2023, 6:06 PM IST

ಸಚಿವ ಆರ್ ಬಿ ತಿಮ್ಮಾಪೂರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು..

ಬಾಗಲಕೋಟೆ: ಸಿಎಂ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ, ಕೇವಲ ಮಾಧ್ಯಮಗಳಲ್ಲಿ ವದಂತಿ ಹರಡಿದೆ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪೂರ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗೃಹ ಸಚಿವ ಜಿ ಪರಮೇಶ್ವರ್​ ಮನೆಯಲ್ಲಿ‌ ಕಾಂಗ್ರೆಸ್​ ನಾಯಕರ ಡಿನ್ನರ್​ ಪಾರ್ಟಿಯಲ್ಲಿ ನಾನು ಭಾಗಿಯಾಗಿಲ್ಲ. ಆದರೆ ಅದಕ್ಕೆ ಅಂತಹದ್ದೇನು ಮಹತ್ವವೇನಿಲ್ಲ ಎಂದ ಅವರು, ಸಹಜವಾಗಿ ಭೋಜನಕ್ಕೆ ಕರೆದಿದ್ದರು, ಹೋಗಿದ್ದರು. ಅದಕ್ಕೆ ಹೆಚ್ಚು ‌ಮಹತ್ವ ಕೊಡುವ ಅವಶ್ಯಕತೆಯಿಲ್ಲ. ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಲ ಶಾಸಕರು ಎರಡೂವರೆ ವರ್ಷ ನಂತರ‌ ಡಿ ಕೆ ಶಿವಕುಮಾರ್ ಸಿ ಎಂ ಆಗ್ತಾರೆ ಎಂಬ ಹೇಳಿಕೆ‌‌ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಒಬ್ಬರು ಇಬ್ಬರು ಶಾಸಕರು ಮಾಡೋಕೆ ಆಗಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಜಿ, ರಾಹುಲ್ ಗಾಂಧಿ ಗಮನಕ್ಕೆ ಬಂದಾಗ ಈ ಬಗ್ಗೆ ನಿರ್ಧಾರ ಆಗಬೇಕಾಗುತ್ತದೆ. ನಾನೊಬ್ಬನೇ ಮಾಡುವಂತದ್ದಲ್ಲ ಎಂದು ತಿಳಿಸಿದರು.

ನಮ್ಮಲ್ಲಿ ಡಿಕೆಶಿ, ಸಿದ್ದರಾಮಯ್ಯ ಎಂಬ ಬಣಗಳಿಲ್ಲ. ಇಬ್ಬರು ನಮ್ಮ ಲೀಡರ್​ಗಳೇ, ಸಿದ್ದರಾಮಯ್ಯ ಶಾಸಕಾಂಗ‌ ಪಕ್ಷದ ‌ನಾಯಕರಿದ್ದಾರೆ. ತೆಗೆಯುವವರೆಗೆ ಅವರು ಇರ್ತಾರೆ. ಶಾಸಕಾಂಗ ಪಕ್ಷದ ನಾಯಕನನ್ನು ತೆಗೆಯುತ್ತಾರೆ ಎಂಬ ಊಹಾಪೋಹಗಳು ಮಾಧ್ಯಮದಿಂದ ಕೇಳುತ್ತಿದ್ದೇನೆ, ಈ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಜಾರಿ‌ಕೊಂಡರು.

ಸತೀಶ್ ಜಾರಕಿಹೊಳಿ ಟೀಮ್ ದುಬೈ ಟೂರ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ತಿಮ್ಮಾಪೂರ್, ಟೂರ್ ಹೋದ್ರೆ ತಪ್ಪಾ?, ಹೈಕಮಾಂಡ್ ಯಾಕೆ ಬ್ರೇಕ್ ಹಾಕುತ್ತೆ ಎಂಬ ಪ್ರಶ್ನೆಗೆ ಉತ್ತರಿಸಿ, ನಿಮಗೆ ಹೈಕಮಾಂಡ್​ನವರು ನಾವು ಬೇಡ ಅಂತ ಹೇಳಿದಿವಿ ಅಂತ ಹೇಳಿದ್ರಾ? ಟೂರ್ ಹೋದ್ರೆ, ಊಟ ಮಾಡಿದ್ರೆ ಅದೇನು ಗುಂಪುಗಾರಿಕೆ ಆಗಿಬಿಡುತ್ತಾ, ಎಷ್ಟೋ ಜನ ಎಂಎಲ್​ಎಗಳು ನಮ್ ಹತ್ರ ಬಂದು ಊಟ ಮಾಡುತ್ತಾರೆ ಎಂದು ತಿಳಿಸಿದರು.

ಆಪರೇಷನ್ ಕಮಲ ಬಗ್ಗೆ ಮಾತನಾಡಿದ ಅವರು, ಯಾವತ್ತೂ ಕರ್ನಾಟಕ ಜನತೆ ಬಿಜೆಪಿಗೆ ಸಂಪೂರ್ಣ ಅಧಿಕಾರ ಕೊಟ್ಟಿಲ್ಲ. ಬಿಜೆಪಿಯವರು ಅಧಿಕಾರಕ್ಕಾಗಿ ಹೀನಾಯ ಸ್ಥಿತಿಗೆ ಹೋಗಿದ್ದಾರೆ, ನೀನು ಬರ್ತಿಯೇನಪ್ಪ ಎಂಎಲ್​ಎ ಸ್ವಲ್ಪ ಕೊಡ್ತೀನಿ ಅಂತ ಕರೀತಾರೆ. ಬಿಜೆಪಿಯದ್ದು ಅಡ್ಡ ದಾರಿಯಲ್ಲಿ ಅಧಿಕಾರ ಹಿಡಿಯುವ ಪ್ರವೃತ್ತಿ ಎಂದು ಆರೋಪಿಸಿದರು.

ಅವರೇ ಕಿತ್ತಾಡಿಕೊಂಡು ಸರ್ಕಾರ ಬೀಳುತ್ತೆ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಪಾಪ ಭ್ರಮೆಯಲ್ಲಿ ಇದ್ದಾನೆ. ಈಶ್ವರಪ್ಪ ಸೋತಿದಾನಲ್ಲ, ಅದಕ್ಕೆ ಏನಾದ್ರು ಮಾತಾಡಿದರೆ, ಏನಾದ್ರು ಆಗ್ತೀನಿ ಅಂತ ಏನೋ ಮಾತಾಡ್ತಾನೆ ಎಂದು ಈಶ್ವರಪ್ಪ ವಿರುದ್ಧ ಏಕ ವಚನದಲ್ಲೇ ವ್ಯಂಗ್ಯವಾಡಿದರು.

ಇದನ್ನೂಓದಿ:ಬಿಜೆಪಿಯವರು 2500 ಎಂಎಲ್​​​ಎಗಳನ್ನು ಖರೀದಿ ಮಾಡಿದ್ದಾರೆ : ಸಚಿವ ಸಂತೋಷ್​ ಲಾಡ್

Last Updated : Oct 28, 2023, 6:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.