ಬಾಗಲಕೋಟೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಆಲಮಟ್ಟಿ ಜಲಾಶಯಕ್ಕೆ ಆಗಮಿಸಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದರು. ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಂದ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಜಿಲ್ಲೆಗೆ ಆಗಮಿಸಿ, ಕೃಷ್ಣಾ ನದಿಗೆ ಗಂಗಾ ಪೂಜೆ ಸಲ್ಲಿಸಿ, ನಂತರ ಮೈ ದುಂಬಿ ಹರಿಯುತ್ತಿರುವ ನದಿಗೆ ಬಾಗಿನ ಸಮರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಜಲ ಸಂಪನ್ಮೂಲಗಳ ಸಚಿವರಾದ ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವರಾದ ಸಿ.ಸಿ ಪಾಟೀಲ ಸೇರಿದಂತೆ ಇತರ ಉಪಸ್ಥಿತರಿದ್ದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಈ ವರ್ಷ 10 ಸಾವಿರ ಕೋಟಿ ಖರ್ಚು ಮಾಡುವ ಗುರಿ ಹಾಕಿಕೊಂಡಿದ್ದೇವೆ. ಈಗಾಗಲೇ 13 ಸಭೆಗಳನ್ನ ಮಾಡಿದ್ದು, ಮೊದಲು ಪುನರ್ವಸತಿ ಪುನರ್ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಈಗಾಗಲೇ 4 ಗ್ರಾಮಗಳ ಸ್ಥಳಾಂತರಕ್ಕೆ ಹಣ ಬಿಡುಗಡೆ ಮಾಡಲಾಗಿದೆ.
ಇನ್ನುಳಿದ ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಿದ್ದೇವೆ. ಕೋರ್ಟ್ ಆದೇಶ ಬಂದಮೇಲೆ ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ರಿಂದ 524 ಮೀಟರ್ಗೆ ಎತ್ತರಿಸಿ, ನೀರನ್ನು ಬಳಕೆ ಮಾಡಿಕೊಳ್ಳುವುದಾಗಿ ತಿಳಿಸಿದರು.
ಯುಕೆಪಿ ಮೂರನೇ ಹಂತದ ನೀರು ಕೊಡಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಿದ್ದೇವೆ ಎಂದ ಸಿಎಂ, ಕೆಬಿಜೆ ಎನ್ಎಲ್ ಕಚೇರಿಯು ಶೀಘ್ರವಾಗಿ ಸ್ಥಳಾಂತರ ಮಾಡುತ್ತೇವೆ. ಜನೆವರಿ ಒಳಗೆ ಎಲ್ಲ ಕಚೇರಿ ಸ್ಥಳಾಂತರ ಮಾಡುತ್ತೇವೆ ಎಂದರು. ಇದೇ ಸಮಯದಲ್ಲಿ ಸಚಿವ ಸಂಪುಟದ ಬಗ್ಗೆ ಮಾತನಾಡಿ, ದೆಹಲಿಗೆ ತೆರಳಿ, ಹೈ ಕಮಾಂಡ್ ಜೊತೆ ಚರ್ಚಿ ಮಾಡಿ ಅದಷ್ಟು ಬೇಗ ತಿಳಿಸುತ್ತೇವೆ ಎಂದರು.
ಪಿಎಫ್ಐ ಬ್ಯಾನ್ ವಿಚಾರಕ್ಕೆ ಸಿಎಂ ಪ್ರತಿಕ್ರಿಯೆ ನೀಡಿ, ಈಗಾಗಲೇ ಅದ್ರ ಬಗ್ಗೆ ಸಾರ್ವಜನಿಕವಾಗಿ ವ್ಯಾಖ್ಯಾನ ವಾಗಿದೆ. ಎಲೆಕ್ಷನ್ ಅವಧಿ ಆಗಿದ್ದರಿಂದ ಇನ್ನು ಜಾಸ್ತಿ ಟೀಕೆಗಳು ಬರುತ್ತೀವೆ. ಟೀಕೆ, ಟಿಪ್ಪಣಿಗಳೇ ನನ್ನ ಯಶಸ್ಸಿನ ಮೆಟ್ಟಲು, ಕಾಂಗ್ರೆಸ್ ನಾಯಕರೇ ವಿಧಾನಸಭೆಯಲ್ಲಿ ಪಿಎಫ್ಐ ಬ್ಯಾನ್ ಮಾಡಿ ಅಂತಾ ಆಗ್ರಹಿಸಿದ್ದಾರೆ. ಸದನದ ಒಳಗಡೆ ಹಾಗೂ ಹೊರಗಡೆ, ಬ್ಯಾನ್ ಮಾಡಿ, ಯಾಕೆ ಬ್ಯಾನ್ ಮಾಡ್ತಿಲ್ಲ ಎಂದು ಡಿಮ್ಯಾಂಡ್ ಇಟ್ಟಿದ್ದರು ಎಂದರು.
ಆರ್ಎಸ್ಎಸ್ ಹಾಗೂ ಬಜರಂಗದಳ ಬ್ಯಾನ್ ಯಾಕಿಲ್ಲ ಎಂಬ ಕಾಂಗ್ರೆಸ್ ನಾಯಕರ ಪ್ರಶ್ನೆಗೆ ಉತ್ತರಿಸಿದ ಅವರು, ಆರ್ಎಸ್ಎಸ್ ಬ್ಯಾನ್ ವಿಚಾರ ಮೂರ್ಖತನದ ಪ್ರಶ್ನೆ, ದೇಶ ಭಕ್ತಿಯ ಸಂಘಟನೆಗಳನ್ನ ಪಿಎಫ್ಐಗೆ ಹೋಲಿಕೆ ಸರಿಯಲ್ಲ ಎಂದರು. ಕಾಂಗ್ರೆಸ್ ರಾಜಾಕೀಯ ತುಷ್ಟೀಕರಣ ರಾಜಕಾರಣದ ಫಲವಾಗಿ ಇಂದು ಪಿಎಫ್ಐ ಹುಟ್ಟಿಕೊಂಡಿರೋದು ಈಗ ಅದು ಬ್ಯಾನ್ ಆಗಿದೆ.
ಇದನ್ನೂ ಓದಿ: ಭದ್ರೆಗೆ ಬಾಗಿನ ಅರ್ಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ