ETV Bharat / state

ಶಾಸಕರ ಮುಂದೆ ನಗರಸಭೆ ಸದಸ್ಯ ಹಾಗೂ ಪೌರಾಯುಕ್ತರ ನಡುವೆ ಜಟಾಪಟಿ

ಶಾಸಕರ ಜೊತೆ ಕಾಮಗಾರಿಯ ವಿಷಯದಲ್ಲಿ ಚರ್ಚೆ ನಡೆಸುತ್ತಿರುವ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸದಸ್ಯ ಸುನೀಲ್, ಏಕವಚನದಲ್ಲಿ ಮಾತನಾಡಿದಾಗ ಸರಿಯಾಗಿ ಮಾತನಾಡಿ ಎಂದು ಪೌರಾಯುಕ್ತರು ಹೇಳಿದರು. ಆದರೆ, ವಿಷಯದ ಬಗ್ಗೆ ಲಕ್ಷ್ಯ ಕೊಡದೆ ಇಬ್ಬರು ಜೋರಾಗಿ ಮಾತಿನ ಪ್ರಹಾರ ನಡೆಸಿದರು..

ತ್ರಿಚಕ್ರ ವಾಹನಗಳ ವಿತರಣಾ ಕಾರ್ಯಕ್ರಮದಲ್ಲಿ ಗಲಾಟೆ

author img

By

Published : Oct 7, 2020, 5:48 PM IST

ಬಾಗಲಕೋಟೆ : ಜಮಖಂಡಿ ನಗರದ ಅಂಬೇಡ್ಕರ ಭವನದಲ್ಲಿ ಎಸ್ಎಫ್​ಸಿಯ ಶೇ.5ರಷ್ಟು ಅನುದಾನದಲ್ಲಿ ವಿಶೇಷಚೇತನರಿಗೆ ತ್ರಿಚಕ್ರ ವಾಹನಗಳ ವಿತರಣಾ ಸಮಾರಂಭ ನಡೆಯಿತು. ಈ ವೇಳೆ ಕಾಂಗ್ರೆಸ್ ನಗರಸಭೆ ಸದಸ್ಯ ಸುನೀಲ ಶಿಂಧೆ ಹಾಗೂ ಪೌರಾಯುಕ್ತರ ನಡುವೆ ಜಟಾಪಟಿ ನಡೆಯಿತು. ಆದರೆ, ಇಷ್ಟೆಲ್ಲಾ ಗಲಾಟೆ ನಡಡೆಯುತ್ತಿದ್ದರೂ ಶಾಸಕ ಆನಂದ ನ್ಯಾಮಗೌಡ ಮಾತ್ರ ಮೌನವಾಗಿದ್ದರು.

ತ್ರಿಚಕ್ರ ವಾಹನಗಳ ವಿತರಣಾ ಕಾರ್ಯಕ್ರಮದಲ್ಲಿ ಗಲಾಟೆ

ಶಾಸಕರ ಜೊತೆ ಕಾಮಗಾರಿಯ ವಿಷಯದಲ್ಲಿ ಚರ್ಚೆ ನಡೆಸುತ್ತಿರುವ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸದಸ್ಯ ಸುನೀಲ್, ಏಕವಚನದಲ್ಲಿ ಮಾತನಾಡಿದಾಗ ಸರಿಯಾಗಿ ಮಾತನಾಡಿ ಎಂದು ಪೌರಾಯುಕ್ತರು ಹೇಳಿದರು. ಆದರೆ, ವಿಷಯದ ಬಗ್ಗೆ ಲಕ್ಷ್ಯ ಕೊಡದೆ ಇಬ್ಬರು ಜೋರಾಗಿ ಮಾತಿನ ಪ್ರಹಾರ ನಡೆಸಿದರು.

2016ರಲ್ಲಿ ಹಿಂದಿನ ಶಾಸಕ ದಿ. ಸಿದ್ದು ನ್ಯಾಮಗೌಡ ಅವರ ಅವಧಿಯಲ್ಲಿ ತಂದಿಟ್ಟ ವಾಹನಗಳನ್ನು ಇಂದು ವಿತರಣೆ ಮಾಡಲಾಯಿತು. ಆದರೆ, ತುಕ್ಕು ಹಿಡಿದ ವಾಹನಗಳನ್ನು ಈಗಲಾದ್ರೂ ವಿತರಣೆ ಮಾಡಿದರಲ್ಲ ಎಂಬ ಭಾವನೆ ವಿಶೇಷಚೇತನರಿಗೆ ಮೂಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.