ETV Bharat / state

ಪುರಸಭೆ ಸದಸ್ಯೆಯರ ತಳ್ಳಾಟ-ನೂಕಾಟ ಪ್ರಕರಣ: 31 ಜನರ ವಿರುದ್ಧ ಕೇಸ್ ದಾಖಲು

ಪುರಸಭೆ ಸದಸ್ಯೆಯರ ತಳ್ಳಾಟ ನೂಕಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೇರದಾಳ ಶಾಸಕ ಸಿದ್ದು ಸವದಿ ಸೇರಿದಂತೆ 31 ಜನರ‌ ವಿರುದ್ಧ ಕೇಸ್ ದಾಖಲಾಗಿದೆ.

ಪುರಸಭೆ ಸದಸ್ಯೆಯರ ತಳ್ಳಾಟ ನೂಕಾಟ ಪ್ರಕರಣ:
ಪುರಸಭೆ ಸದಸ್ಯೆಯರ ತಳ್ಳಾಟ ನೂಕಾಟ ಪ್ರಕರಣ:
author img

By

Published : Jan 5, 2021, 6:39 PM IST

ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪುರಸಭೆ ಸದಸ್ಯೆಯರ ತಳ್ಳಾಟ ನೂಕಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೇರದಾಳ ಶಾಸಕ ಸಿದ್ದು ಸವದಿ ಸೇರಿದಂತೆ 31 ಜನರ‌ ವಿರುದ್ಧ ಕೇಸ್ ದಾಖಲಾಗಿದೆ.

ಬಾಗಲಕೋಟೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೊದಲು ಕೇಸ್ ಆಗಿತ್ತು. ಕೋರ್ಟ್ ನಿರ್ದೇಶನದ ಮೇರೆಗೆ ಮಹಾಲಿಂಗಪುರ ಠಾಣೆಯಲ್ಲಿ ತೇರದಾಳ ಶಾಸಕ ಸಿದ್ದು ಸವದಿ, ಬೆಂಬಲಿಗರಾದ ರವಿ ಜವಳಗಿ, ಪ್ರಹ್ಲಾದ್ ಸಣ್ಣಕ್ಕಿ, ರಾಜು ಚಮಕೇರ, ಸ್ನೇಹಲ್ ಅಂಗಡಿ ಸೇರಿದಂತೆ 31 ಜನರ ವಿರುದ್ಧ ದೂರು ದಾಖಲಾಗಿದೆ.

31 ಜನರ ವಿರುದ್ಧ ಕೇಸ್ ದಾಖಲು
31 ಜನರ ವಿರುದ್ಧ ಕೇಸ್ ದಾಖಲು

ಗೌರವಕ್ಕೆ ಧಕ್ಕೆ, ಕಿಡ್ನಾಪ್, ಜೀವಬೆದರಿಕೆ, ಜಾತಿ ನಿಂದನೆ ಕೇಸ್ ದಾಖಲಿಸಿ ಸೆಕ್ಷನ್ 120/a 141, 143, 147, 148, 319, 321, 323, ಜಾತಿ ನಿಂದನೆ ಸೇರಿದಂತೆ 19 ಸೆಕ್ಷನ್ ಅಡಿ ಕೇಸ್ ದಾಖಲಾಗಿದೆ.

ಕೋರ್ಟ್ ನಿರ್ದೇಶನದ ಮೇರೆಗೆ ಮಹಾಲಿಂಗಪುರ ಠಾಣೆಯಲ್ಲಿ ಜನವರಿ 31ರಂದು ಎಫ್ಐಆರ್ ಆಗಿದ್ದು, ಜಮಖಂಡಿ ಪೊಲೀಸ್ ಉಪವಿಭಾಗದಿಂದ ದೂರುದಾರೆ ಚಾಂದಿನಿ ನಾಯಕ್​ಗೆ ನೋಟಿಸ್ ನೀಡಿ ಅವರ ಸಮ್ಮುಖದಲ್ಲಿ ನಿನ್ನೆ ಘಟನೆ ನಡೆದ ಸ್ಥಳ ಮಹಜರು ಮಾಡಲಾಗಿದೆ.

ಘಟನೆ ಬಗ್ಗೆ ಚಾಂದಿನಿ ನಾಯಕ್ ಅವರಿಂದ ವಿವರಣೆ ಪಡೆಯಲಾಗಿದೆ. ನವೆಂಬರ್ 9, 2020ರಂದು ಮಹಾಲಿಂಗಪುರ, ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ವೇಳೆ ಗಲಾಟೆ‌ ನಡೆದಿತ್ತು. ವೋಟ್ ಮಾಡಲು ಪುರಸಭೆ ಒಳ ಬಾರದಂತೆ ಹೊರಗಡೆ ಕಳಿಸಲು ತಳ್ಳಾಡಿ ನೂಕಾಡಿದ ಪ್ರಕರಣ ಇದಾಗಿದೆ. ಅಂದು ಪುರಸಭೆ ಸದಸ್ಯೆ ಚಾಂದಿನಿ ನಾಯಕ್, ಸವಿತಾ ಹುರಕಡ್ಲಿ, ಗೋದಾವರಿ ಬಾಟ್ ಅವರನ್ನು ತಳ್ಳಾಡಿ ನೂಕಾಡಿದ ಸಂಬಂಧ ಚಾಂದಿನಿ ನಾಯಕ್ ಅವರಿಂದ ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.