ಬಾಗಲಕೋಟೆ: ಸಿಡಿಲು ಬಡಿದು ಬಾಲಕ ಮೃತ ಪಟ್ಟಿದ್ದು, ಕುಟುಂಬದ ಮೂವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಚಿಚಖಂಡಿ ಕೆ.ಡಿ ಗ್ರಾಮದಲ್ಲಿ ನಡೆದಿದೆ.
ದರ್ಶನ್ ಪಕೀರಪ್ಪ ಮಾದರ್ (14) ಮೃತ ದುರ್ದೈವಿಯಾಗಿದ್ದಾನೆ. ಹೊಲಕ್ಕೆ ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರು ದೂರವಾಣಿ ಕರೆ ಮಾಡಿ, ಸಾಂತ್ವಾನ ಹೇಳಿದ್ದು, ಕುಟುಂಬದ ಸದಸ್ಯರಿಗೆ ಪ್ರಕೃತಿ ವಿಕೋಪ ನಿಧಿಯಡಿ 5 ಲಕ್ಷ ರೂಪಾಯಿ ಪರಿಹಾರ ಧನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಶೀಲ್ದಾರ್ಗೆ ಸೂಚನೆ ನೀಡಿದ್ದಾರೆ.