ಬಾಗಲಕೋಟೆ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಬೀಳಗಿ ತಾಲೂಕಿನ ಎಸ್.ಕೆ.ಕೊಪ್ಪ ಗ್ರಾಮದ ರೈತ ವೆಂಕಟೇಶ್ ಪಾಟೀಲ್ ಎಂಬುವವರ ಜಮೀನಿನ ಬೋರ್ವೆಲ್ನಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತಿದೆ.
ನಿರಂತರ ಮಳೆಯಿಂದಾಗಿ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ಕೊಳವೆ ಬಾಯಿ ಮೂಲಕ ನೀರು ಹೊರ ಹೊಮ್ಮುತ್ತಿದೆ ಎನ್ನುತ್ತಾರೆ ಇಲ್ಲಿನ ಜನರು. ಈ ಬಾರಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.