ETV Bharat / state

ಬಿಜೆಪಿ ಮಡಿಲಿಗೆ ಬಾಗಲಕೋಟೆ ಟಿಎಪಿಸಿಎಂಎಸ್

ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳು ಮುಂಬರುವ ದಿನಗಳಲ್ಲಿ ಒಕ್ಕುಲತನ ಹುಟ್ಟುವಳಿ ಮಾರಾಟ ಸಹಕಾರ ಸಂಘದಿಂದ ರೈತರಿಗೆ ಏನು ಉಪಯೋಗವಿದೆ ಎಂದು ಮನವರಿಕೆ ಮಾಡಿಕೊಡಬೇಕು. ಇದರ ಬಗ್ಗೆ ರೈತರಿಗೆ ಹೆಚ್ಚು ಜಾಗೃತಿ ಇಲ್ಲ..

TAPCMS election
TAPCMS election
author img

By

Published : Sep 23, 2020, 7:36 PM IST

ಬಾಗಲಕೋಟೆ : ತಾಲೂಕು ಒಕ್ಕುಲತನ ಹುಟ್ಟುವಳಿ ಮಾರಾಟ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗುವ ಮೂಲಕ ಸುಮಾರು 40 ವರ್ಷಗಳ ಬಳಿಕ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣೆ ಹಿಡಿಯಿತು.

ಸೀಮಿಕೇರಿಯ ಮಹಾದೇವಪ್ಪ ತಳವಾರ, ಬೇವೂರಿನ ಸಂಗಪ್ಪ ನೀಲಪ್ಪನವರ, ಸುತಗುಂಡಾರದ ಸುರೇಶ್ ಅಂಗಡಿ, ಖಜ್ಜಿಡೋಣಿ ವೆಂಕಟೇಶ್ ರಂಗನ್ನವರ, ಅಚನೂರಿನ ಬಾಲಪ್ಪ ಶಿರೂರ, ಖಜ್ಜಿಡೋಣಿಯ ಲಕ್ಷ್ಮಣ ಮರೆಗುದ್ದಿ, ಹಂಡರಗಲ್ಲ ಗ್ರಾಮದ ಹನಮಂತ ಬೆಳಗಲ್, ಶಿರೂರಿನ ಶೇಖರಪ್ಪ ಮಾಚಾ, ಅಚನೂರಿನ ವಾರೆಪ್ಪ ದಾಸರ, ತುಳಸಿಗೇರಿಯ ಜ್ಞಾನದೇವ ಗೋವಿಂದಪ್ಪ ಸೊನ್ನದ, ಬೆನಕಟ್ಟಿಯ ವಿಜಯಲಕ್ಷ್ಮಿ ಪಾಟೀಲ, ಬಾಗಲಕೋಟೆಯ ಬಸಮ್ಮ ಗಾಣಿಗೇರ ಬಾಗಲಕೋಟೆ ತಾಲೂಕು ಒಕ್ಕುಲತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದರು.

ಇಂದು ನಡೆದ ತಾಲೂಕು ಒಕ್ಕುಲತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಗಳ ವಿರುದ್ಧ ಯಾರೂ ನಾಮಪತ್ರ ಸಲ್ಲಿಸದೆ ಇರುವುದರಿಂದ 12 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ರು. ಈ ವೇಳೆ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ತಹಶೀಲ್ದಾರ್ ಜಿ ಎಸ್ ಹಿರೇಮಠ ಘೋಷಣೆ ಮಾಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳು ಮುಂಬರುವ ದಿನಗಳಲ್ಲಿ ಒಕ್ಕುಲತನ ಹುಟ್ಟುವಳಿ ಮಾರಾಟ ಸಹಕಾರ ಸಂಘದಿಂದ ರೈತರಿಗೆ ಏನು ಉಪಯೋಗವಿದೆ ಎಂದು ಮನವರಿಕೆ ಮಾಡಿಕೊಡಬೇಕು. ಇದರ ಬಗ್ಗೆ ರೈತರಿಗೆ ಹೆಚ್ಚು ಜಾಗೃತಿ ಇಲ್ಲ. ರೈತರಿಗೆ ಬರುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಕಲ್ಪಿಸುವ ಮೂಲಕ ಶಾಸಕ ವೀರಣ್ಣ ಚರಂತಿಮಠವರ ಹೆಸರನ್ನು ತರಬೇಕು ಎಂದು ಸಲಹೆ ನೀಡಿದರು.

ಎಪಿಎಂಸಿ ಅಧ್ಯಕ್ಷ ಕೃಷ್ಣಾ ಲಮಾಣಿ, ಬಿಜೆಪಿ ಮುಖಂಡರಾದ ಸಂಗಣ್ಣ ಕಲಾದಗಿ, ಆರ್ ಹೆಚ್ ದಿಡ್ಡಿಮನಿ, ರಾಜಶೇಖರ್ ಮುದೇನೂರ, ಸುರೇಶ್ ಕೊಣ್ಣೂರ, ಗುರುರಾಜ ಅನಗವಾಡಿ, ಯಲ್ಲಪ್ಪ ಕ್ಯಾದಿಗೇರಿ, ಶ್ರೀಕರ ದೇಸಾಯಿ, ರವಿ ಗಿರಿಜಾ, ಕೃಷ್ಣಾ ನಾಯಕ, ವೆಂಕಣ್ಣ ಹಲಗಲಿ, ಸಂಗಮೇಶ ಹಿತ್ತಲಮನಿ ಸೇರಿ ಮತ್ತಿತರರು ಈ ಸಂದರ್ಭದಲ್ಲಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.