ETV Bharat / state

ಮುಧೋಳ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಬೆರಳಚ್ಚು: ಸ್ಥಳೀಯರ ಅಸಮಾಧಾನ - ಮುಧೋಳ ನ್ಯಾಯಬೆಲೆ ಅಂಗಡಿ

ಬಾಗಲಕೋಟೆ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದರೂ ಕೂಡ ಮುಧೋಳ ಪಟ್ಟಣದ ನ್ಯಾಯಬೆಲೆ ಅಂಗಡಿಯಲ್ಲಿ ಬೆರಳಚ್ಚು ಪಡೆಯುವ ಮೂಲಕವೇ ಆಹಾರ ಧಾನ್ಯ ವಿತರಿಸಲಾಗುತ್ತಿದೆ.

Bagalkot
ಮುಧೋಳ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಬೆರಳಚ್ಚು: ಸ್ಥಳೀಯರ ಅಸಮಾಧಾನ
author img

By

Published : May 14, 2021, 8:49 AM IST

ಬಾಗಲಕೋಟೆ: ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್‌ ಪದ್ಧತಿಯನ್ನು ಸರ್ಕಾರ ರದ್ದುಗೊಳಿಸಿದೆ. ಆದರೆ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಕ್ಷೇತ್ರವಾದ ಮುಧೋಳ ಪಟ್ಟಣದಲ್ಲಿ ಬಯೋಮೆಟ್ರಿಕ್‌ ಪದ್ಧತಿ ಇನ್ನೂ ಚಾಲ್ತಿಯಲ್ಲಿದೆ.

ಮುಧೋಳ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಬೆರಳಚ್ಚು: ಸ್ಥಳೀಯರ ಅಸಮಾಧಾನ

ಮುಧೋಳ ಪಟ್ಟಣದ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ತಿಂಗಳಂತೆ ಈ ಬಾರಿಯೂ ಬಯೋಮೆಟ್ರಿಕ್‌ ಪದ್ಧತಿ ಮೂಲಕವೇ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಹೀಗಾಗಿ, ಜನರು ಕೊರೊನಾ ಹರಡುವ ಭೀತಿಯಿಂದಲೇ ಪಡಿತರ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೂ ಕೂಡ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್‌ ಪದ್ಧತಿಯನ್ನು ರದ್ದು ಮಾಡಿಲ್ಲ. ಇದರಿಂದ ನಾವು ಭಯದಿಂದಲೇ ಆಹಾರ ಧಾನ್ಯ ತೆಗೆದುಕೊಂಡು ಹೋಗುವ ಪರಿಸ್ಥಿತಿ ಇದೆ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಓದಿ: ಇಂದು 'ಅಕ್ಷಯ ತೃತೀಯ': ಕೊರೊನಾ ಬಿಕ್ಕಟ್ಟಿನ ಕಾಲದಲ್ಲಿ ಎಲ್ಲರ ಆರೋಗ್ಯ ಅಕ್ಷಯವಾಗಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.