ಬಾಗಲಕೋಟೆ: ನಗರ ಸಭೆಯ ವತಿಯಿಂದ ವಿದ್ಯಾಗಿರಿ, ನವನಗರದ ಪ್ರದೇಶದಲ್ಲಿ ಫುಟ್‌ಪಾತ್ ಮೇಲಿದ್ದ ಡಬ್ಬಿ ಅಂಗಡಿಗಳು, ತಗಡಿನ ಶೆಡ್ ಹಾಗೂ ನಾಮಫಲಕಗಳ ತೆರವು ಕಾರ್ಯಚರಣೆ ನಡೆಸಲಾಯಿತು.
ನಗರ ಸಭೆ ಆಯುಕ್ತ ಗಣಪತಿ ಪಾಟೀಲ ನೇತೃತ್ವದಲ್ಲಿ ವಿದ್ಯಾಗಿರಿಯ ಇಂಜಿನಿಯರಿಂಗ್ ಕಾಲೇಜ್ ಬಳಿಯ ಫುಟ್‌ಪಾತ್ ಮೇಲೆ ತಗಡಿನ ಶೆಡ್ ಹಾಕಿ ಅಂಗಡಿ ನಿರ್ಮಿಸಲಾಗಿದೆ. ಇದ್ರಿಂದಾಗಿ ಪಾದಚಾರಿ ಮಾರ್ಗದಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾಗಿರಿ ಸೇರಿದಂತೆ ನವನಗರದ ಹಾಗೂ ಹಳೆಯ ಬಾಗಲಕೋಟೆ ನಗರದಲ್ಲಿ ಫುಟ್ ಪಾತ್ ಮೇಲಿನ ಶೆಡ್ಗಳ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ನಗರ ಸಭೆ ಹೇಳಿದೆ.
ನಗರಸಭೆ ಆಯುಕ್ತರು, ಯಾವುದೇ ನೋಟಿಸ್ ನೀಡದೆ ಏಕಾಏಕಿಯಾಗಿ ಫುಟ್‌ಪಾತ್ ಮೇಲಿನ ಶೆಡ್ಗಳನ್ನು ತೆರವುಗೊಳಿಸುತ್ತಿದ್ದಾರೆ. ಬೀದಿ ಬದಿ ವ್ಯಾಪಾರಿಗಳು, ಬಡವರು ನಗರಸಭೆಯ ಈ ಕ್ರಮದಿಂದ ತೊಂದರೆಗೆೊಳಗಾಗಿದ್ದಾರೆ. ತೆರವು ಕಾರ್ಯಾಚರಣೆ ಹಿಂದೆ ರಾಜಕೀಯ ಇದೆ ಎಂದು ನಗರಸಭೆಯ ಮಾಜಿ ಸದಸ್ಯ ಗೋವಿಂದ ಬಳ್ಳಾರಿ ಆರೋಪಿಸಿದ್ರು.