ETV Bharat / state

ಮುಂದುವರೆದ ವರುಣನ ಅಬ್ಬರ: ಕೃಷ್ಣಾ, ಘಟಪ್ರಭಾ-ಮಲಪ್ರಭಾ ನದಿ ಪಾತ್ರದ ಜನರಿಗೆ ಆತಂಕ

author img

By

Published : Aug 17, 2020, 12:18 PM IST

ಪ್ರವಾಹದ ಆತಂಕದ ನಡುವೆಯೂ ತುಂಬಿದ ಘಟಪ್ರಭಾ ನದಿಯಲ್ಲಿ ದೇವಿಯ ಮೂರ್ತಿಯ ಮೆರವಣಿಗೆ ಮಾಡಿ ಜನ ಭಕ್ತಿಯ ಪರಾಕಾಷ್ಠೆ ಮೆರೆದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕೆ.ಡಿ.ಜಂಬಗಿ ಗ್ರಾಮದಲ್ಲಿ ನಡೆದಿದೆ.

Anxiety for people on the river bank
ಬಾಗಲಕೋಟೆ: ನದಿ ಪಾತ್ರದಲ್ಲಿ ಪ್ರವಾಹದ ಭೀತಿ

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಜಿಲ್ಲೆಯ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು‌ ತುಂಬಿ ಹರಿಯುತ್ತಿವೆ. ಇದರಿಂದ ಮೂರು‌ ನದಿಗಳ ಪಾತ್ರದಲ್ಲಿ ಪ್ರವಾಹದ ಭೀತಿ ಉಂಟಾಗಿದ್ದು, ಜನರು ಆತಂಕಗೊಂಡಿದ್ದಾರೆ.

ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿ ಪಾತ್ರದ ಜನರಿಗೆ ಆತಂಕ

ಪ್ರವಾಹದ ಆತಂಕದ ನಡುವೆಯೂ ತುಂಬಿದ ಘಟಪ್ರಭಾ ನದಿಯಲ್ಲಿ ದೇವಿಯ ಮೂರ್ತಿಯ ಮೆರವಣಿಗೆ ಮಾಡಿ ಜನ ಭಕ್ತಿಯ ಪರಾಕಾಷ್ಠೆ ಮೆರೆದ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಕೆ.ಡಿ.ಜಂಬಗಿ ಗ್ರಾಮದಲ್ಲಿ ನಡೆದಿದೆ. ಪ್ರತೀ ವರ್ಷ ನಡೆಯುವ ದೇವಿ ಮೂರ್ತಿಯ ಮೆರವಣಿಗೆಗೆ ಈಗ ವರುಣನ ಅಬ್ಬರದಿಂದ ಘಟಪ್ರಭಾ ನದಿ ತುಂಬಿದ್ದರಿಂದ ಅಡ್ಡಿಯುಂಟಾಗಿದ್ದರೂ ಲೆಕ್ಕಿಸದ ಗ್ರಾಮಸ್ಥರು ಸಂಪ್ರದಾಯವನ್ನು ಪೂರ್ಣಗೊಳಿಸಿದ್ದಾರೆ.

ಪ್ರತೀ ವರ್ಷ ದೇವಿಯ ಮೂರ್ತಿಯನ್ನ ಕೆ.ಡಿ.ಜಂಬಗಿ ಗ್ರಾಮದಿಂದ ಗಲಗಲಿ ಗ್ರಾಮದವರೆಗೆ ಮೆರವಣಿಗೆ ಮೂಲಕ ತಂದು ನಂತರ ವಾಪಸ್ ತರುವ ಪದ್ಧತಿ ಇದೆ. ಹೀಗಾಗಿ‌ ಘಟಪ್ರಭಾ ತುಂಬಿದ್ದರೂ ತೆಪ್ಪದಲ್ಲಿ ದೇವಿಯ ಮೂರ್ತಿಯನ್ನ ಮೆರವಣಿಗೆ ಮಾಡಿ ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ. ಇನ್ನು ಜಮಖಂಡಿ ತಾಲೂಕಿನ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹದ ಆತಂಕವಿದ್ದು, ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬ್ಯಾರೇಜ್​​ಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.

ಸುರಕ್ಷಿತ ಸ್ಥಳಗಳಿಗೆ ಜಾನುವಾರುಗಳ ಸಹಿತ ಜನರು ಸ್ಥಳಾಂತರವಾಗುತ್ತಿದ್ದಾರೆ. ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್​​ಗೆ 1,19,000 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರು ಹೊರಕ್ಕೆ ಬಿಡಲಾಗಿದೆ. 1,19,000 ಕ್ಯೂಸೆಕ್ ನೀರು ಬರುತ್ತಿರುವ ಪರಿಣಾಮ ನದಿ ಪಾತ್ರದಲ್ಲಿ ಆತಂಕ ಹೆಚ್ಚಾಗಿದೆ.

ಮಲಪ್ರಭಾ ನದಿ ಪಾತ್ರದಲ್ಲಿ 24 ಸಾವಿರ ಕ್ಯೂಸೆಕ್​ ನೀರನ್ನು ನವಿಲು ತೀರ್ಥ ಜಲಾಶಯದಿಂದ ಬಿಡುಗಡೆ ಮಾಡುತ್ತಿರುವ ಪರಿಣಾಮ ಬಾದಾಮಿ ತಾಲೂಕಿನ 30ಕ್ಕೂ ಹೆಚ್ಚು ಗ್ರಾಮಗಳಿಗೆ ಪ್ರವಾಹ ಭೀತಿ‌ ಎದುರಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.