ಬಾಗಲಕೋಟೆ : ಕೊರೊನಾ ಹಿನ್ನೆಲೆ ಇಷ್ಟು ದಿನಗಳ ಕಾಲ ಮುಚ್ಚಲ್ಪಟ್ಟಿದ್ದ ಐತಿಹಾಸಿಕ ಕೇಂದ್ರ ಬಾದಾಮಿ ಬನಶಂಕರಿ ದೇವಸ್ಥಾನವು ಜೂನ್ 8ರಿಂದ ಭಕ್ತರ ದರುನಶಕ್ಕಾಗಿ ತೆರೆಯಲಿದೆ.
ಸೋಮವಾರದಿಂದ ರಾಜ್ಯದ ಎಲ್ಲಾ ದೇವಾಲಯಗಳ ಬಾಗಿಲು ತೆರೆಯುವಂತೆ ರಾಜ್ಯ ಸರ್ಕಾರ ಅನುಮತಿ ನೀಡಲಿರುವ ಹಿನ್ನೆಲೆ ಬಾದಾಮಿ ಬನಶಂಕರಿ ದೇವಾಲಯ ಸಹ ಭಕ್ತರ ದರ್ಶನಕ್ಕಾಗಿ ಸಿದ್ಧತೆ ನಡೆಸಿದೆ. ಕಳೆದ 70 ದಿನಗಳಿಂದ ಭಕ್ತರಿಗೆ ದೇವಾಲಯದಲ್ಲಿ ನಿಷೇಧ ಹೇರಲಾಗಿತ್ತು. ಸೋಮವಾರದಿಂದ ಕೆಲ ನಿಮಯಗಳ ಮೂಲಕ ಭಕ್ತರಿಗೆ ದೇವಿಯ ದರ್ಶನ ಸಿಗಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಬಾಕ್ಸ್ಗಳನ್ನು ಮಾಡಲಾಗಿದೆ. ದೇವಸ್ಥಾನದ ಆವರಣದಲ್ಲಿ ಸ್ಯಾನಿಟೈಸರ್ ಅವಳಡಿಸಿಲಾಗಿದ್ದು, ಬಂದಿರುವ ಭಕ್ತರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಸ್ಯಾನಿಟೈಸರ್ ಹಾಕಿಕೊಂಡು ಗರ್ಭಗುಡಿ ಪ್ರವೇಶ ಮಾಡುವಂತೆ ಅನುಕೂಲ ಮಾಡಲಾಗಿದೆ. ಕೇವಲ ದೇವಿಯ ದರ್ಶನ ಮಾತ್ರ ಮಾಡಲು ಅನುಮತಿ ನೀಡಲಾಗಿದೆ. ತೀರ್ಥ, ಪ್ರಸಾದ, ಅಭಿಷೇಕ ಹಾಗೂ ಅನ್ನ ಪ್ರಸಾದ ಸೇರಿ ಇತರ ಯಾವುದೇ ಸೇವೆಗಳು ಇರುವುದಿಲ್ಲ. ಸರ್ಕಾರದ ಆದೇಶ ಬರುವವರೆಗೂ ದೇವಾಲಯ ಸಮಿತಿಯಿಂದ ಇದೇ ವ್ಯವಸ್ಥೆ ಮುಂದುವರೆಯಲಿದೆ ಎನ್ನುತ್ತಾರೆ ಅರ್ಚಕ ಮಹೇಶ್.