ETV Bharat / state

ತರಕಾರಿ ಅಲಂಕಾರದಲ್ಲಿ ಶ್ರೀ ಬಾದಾಮಿ ಬನಶಂಕರಿ ದೇವಿ.. ನಾಳೆ ರಥೋತ್ಸವ..

ಕೇವಲ ಆನ್​​​ಲೈನ್ ಮೂಲಕ ದೇವಿಯ ದರ್ಶನಕ್ಕೆ ಸಮಿತಿಯವರು ವ್ಯವಸ್ಥೆ ಮಾಡಿದ್ದಾರೆ. ಬನದ ಹುಣ್ಣಿಮೆ ದಿನದಂದು ಜಾತ್ರೆ ನಡೆಯುತ್ತದೆ. ಆದರೆ, ಕೊರೊನಾ ಹಿನ್ನೆಲೆ ಜಾತ್ರೆಗೆ ವಿಶೇಷವಾಗಿ ಹಾಕಲಾಗುತ್ತಿದ್ದ ಅಂಗಡಿಗಳಿಗೆ ಅವಕಾಶ ನೀಡಲಾಗಿಲ್ಲ..

badami-banashankari-devi-chariot-fest-held-tomorrow
ತರಕಾರಿ ಅಲಂಕಾರದಲ್ಲಿ ಬಾದಾಮಿ ಬನಶಂಕರಿ ದೇವಿ
author img

By

Published : Jan 27, 2021, 5:36 PM IST

ಬಾಗಲಕೋಟೆ : ಉತ್ತರಕರ್ನಾಟಕದ ಧಾರ್ಮಿಕ ಕ್ಷೇತ್ರ ಹಾಗೂ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಶ್ರೀ ಬಾದಾಮಿ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ವಿವಿಧ ತರಕಾರಿಗಳಿಂದ ಅಲಂಕಾರ ಮಾಡಿದ ವಿಶೇಷ ಪೂಜೆ ಸಲ್ಲಿಸಲಾಯಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ ಒಂದು ವಾರದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಬಾರಿ ಕೊರೊನಾದಿಂದ ಜಾತ್ರಾ ಮಹೋತ್ಸವ ನಿಷೇಧ ಮಾಡಿದ್ದರಿಂದ ಸಾರ್ವಜನಿಕವಾಗಿ ದೇವಿಯ ದರ್ಶನಕ್ಕೆ ಅವಕಾಶ ಇರಲ್ಲ.

ಕೇವಲ ಆನ್​​​ಲೈನ್ ಮೂಲಕ ದೇವಿಯ ದರ್ಶನಕ್ಕೆ ಸಮಿತಿಯವರು ವ್ಯವಸ್ಥೆ ಮಾಡಿದ್ದಾರೆ. ಬನದ ಹುಣ್ಣಿಮೆ ದಿನದಂದು ಜಾತ್ರೆ ನಡೆಯುತ್ತದೆ. ಆದರೆ, ಕೊರೊನಾ ಹಿನ್ನೆಲೆ ಜಾತ್ರೆಗೆ ವಿಶೇಷವಾಗಿ ಹಾಕಲಾಗುತ್ತಿದ್ದ ಅಂಗಡಿಗಳಿಗೆ ಅವಕಾಶ ನೀಡಲಾಗಿಲ್ಲ.

ಅಲ್ಲದೆ ನಾಟಕ ಸೇರಿ ಎಲ್ಲಾ ಮನೋರಂಜನಾ ಕಾರ್ಯಕ್ರಮಗಳಿಗೂ ತಡೆ ನೀಡಲಾಗಿದೆ. ನಾಳೆ ರಥೋತ್ಸವ ನಡೆಯಲಿದ್ದು, ಅರ್ಚಕರು, ಕೆಲವೇ ಮಂದಿ ಸೇರಿ ತೇರು ಎಳೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಬಾಗಲಕೋಟೆ: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.