ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಮುರಗಮಲ್ಲಾ ಗ್ರಾಮದ ದರ್ಗಾ ಆವರಣದಲ್ಲಿ ಕೆಂಚಾರ್ಲಹಳ್ಳಿ ಠಾಣೆಯ ಪೊಲೀಸರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸುವಂತೆ ಜಾಗೃತಿ ಸಭೆ ನಡೆಸಿದರು.
ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ನಯಾಜ್ ಬೇಗ್ ಅವರು ಗ್ರಾಮಸ್ಥರೊಡನೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದರು. ಈ ವೇಳೆ ದರ್ಗಾ ಗ್ರಾಮದಲ್ಲಿ ಸಂಶಯಾಸ್ಪದವಾಗಿ ಬಿಡಾರ ಹೂಡಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಅವರು ಕೋರಿದರು. ಅಲ್ಲದೆ ಯಾತ್ರಾ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೋಮು- ಸೌಹಾರ್ಧತೆಯನ್ನು ಕಾಪಾಡಿಕೊಂಡಿರಲು ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಅಲ್ಲದೆ, ಯಾವುದೇ ಧರ್ಮಗ್ರಂಥದಲ್ಲಿ ಹಿಂಸೆ ಮೂಲಕ ಧರ್ಮ ಪ್ರಚಾರ ಅಥವಾ ರಕ್ಷಣೆ ಕುರಿತು ಹೇಳಿಲ್ಲ ಎಂಬುದನ್ನು ಇನ್ಸ್ಪೆಕ್ಟರ್ ನಯಾಜ್ ಮನವರಿಕೆ ಮಾಡಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅನ್ಸರ್ ಖಾನ್, ಆರಿಫ್ ಖಾನ್, ತನ್ವೀರ್ ಪಾಷಾ, ಅಮಾನುಲ್ಲಾ, ಲಕ್ಷ್ಮಿನಾರಾಯಣ ರೆಡ್ಡಿ, ಸಮೀವುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.