ETV Bharat / state

ಸಂಗಮನಾಥನಿಗೆ ಜಲ ದಿಗ್ಬಂಧನ : ಕೂಡಲಸಂಗಮದಲ್ಲಿ ದರುಶನಕ್ಕಿಲ್ಲ ಭಾಗ್ಯ!

ಕೃಷ್ಣ, ಮಲ್ಲಪ್ರಭಾ ನದಿಯ ಪ್ರವಾಹ ಹೆಚ್ಚಿರುವುದರಿಂದ ಬಸವಣ್ಣನವರ ಐಕ್ಯ ಸ್ಥಳ ಹಾಗೂ ಧಾರ್ಮಿಕ ಸ್ಥಳವಾಗಿರುವ ಕೂಡಲಸಂಗಮಕ್ಕೆ ಪ್ರವಾಹ ಇಳಿಯುವವರೆಗೂ ಭಕ್ತರು ಬರಬಾರದೆಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಪ್ರಾಧಿಕಾರದ ಆಯುಕ್ತರಾದ ಶ್ರೀಮತಿ ರಾಜಶ್ರೀ ಅಗಸರ ಮನವಿ ಮಾಡಿಕೊಂಡಿದ್ದಾರೆ.

ಸಂಗಮನಾಥನಿಗೆ ಜಲ ದಿಗ್ಬಂಧನ
author img

By

Published : Aug 12, 2019, 4:47 AM IST

ಬಾಗಲಕೋಟೆ : ಕೃಷ್ಣ, ಮಲ್ಲಪ್ರಭಾ ನದಿಯ ಪ್ರವಾಹ ಹೆಚ್ಚಿರುವುದರಿಂದ ಬಸವಣ್ಣನವರ ಐಕ್ಯ ಸ್ಥಳ ಹಾಗೂ ಧಾರ್ಮಿಕ ಸ್ಥಳವಾಗಿರುವ ಕೂಡಲಸಂಗಮಕ್ಕೆ ಪ್ರವಾಹ ಇಳಿಯುವವರೆಗೂ ಭಕ್ತರು ಬರಬಾರದೆಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಪ್ರಾಧಿಕಾರದ ಆಯುಕ್ತರಾದ ಶ್ರೀಮತಿ ರಾಜಶ್ರೀ ಅಗಸರ ಮನವಿ ಮಾಡಿಕೊಂಡಿದ್ದಾರೆ.

ಸಂಗಮನಾಥನಿಗೆ ಜಲ ದಿಗ್ಬಂಧನ

ಕೂಡಲಸಂಗಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬಂದು ಪೂಜೆ ಪುರಸ್ಕಾರ ಮಾಡುತ್ತಿದ್ದರು. ಆದರೆ ಈಬಾರಿ ಶ್ರಾವಣ ಮಾಸ ಮುಗಿಯುವವರೆಗೂ ಸಂಗಮನಾಥ ದರುಶನದ ಭಾಗ್ಯ ಇಲ್ಲದೆ ಭಕ್ತರು ಪರದಾಡುವಂತಾಗಿದೆ.

ಇತಿಹಾಸದಲ್ಲಿಯೇ ಇದೇ ಮೊದಲು ಭಾರಿಗೆ ಕೂಡಲಸಂಗಮದಲ್ಲಿ ಇಷ್ಟೊಂದು ನೀರು ಬರುತ್ತಿರುವುದು. ಸಂಗಮನಾಥ ದೇವಸ್ಥಾನದ ಆವರಣ ಸೇರಿದಂತೆ ಕೆಳ ಭಾಗದಲ್ಲಿ ಇರುವ ಮುಖ್ಯ ರಸ್ತೆಯು ಜಲಾವೃತಗೊಂಡಿದೆ. ಇದರಿಂದ ಅಂಗಡಿ ಮುಗ್ಗಟ್ಟು ಸಂಪೂರ್ಣ ಜಲಾವೃತ್ತಗೊಂಡು ಲಕ್ಷಾಂತರ ರೂಪಾಯಿಗಳ ಹಾನಿ ಆಗಿದೆ ಎಂದು ಸಂತ್ರಸ್ಥರು ತಮ್ಮ ಗೋಳು ತೋರ್ಪಡಿಸಿಕೊಂಡಿದ್ದಾರೆ.

ಸಂಗಮನಾಥ ದೇವಾಲಯ ಅಲ್ಲದೇ ಇಡೀ ಊರಿಗೆ ಊರೇ ಜಲಾವೃತಗೊಂಡಿದೆ. ಗ್ರಾಮದ ಜನರಿಗೆ ಮಾತೆ ಮಹಾದೇವಿ ಅವರ ಮಠದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಎಲ್ಲರನ್ನು ಕಾಪಾಡುವ ಸಂಗಮನಾಥನಿಗೆ ಜಲ ದಿಗ್ಬಂಧನ ಆಗಿರುವುದರಿಂದ ಇನ್ನು ಕಾಪಾಡುವವರು ಯಾರೂ ಎಂದು ಭಕ್ತರು ಕೇಳಿಕೊಳ್ಳುವಂತಾಗಿದೆ. ದೇವಾಲಯದ ಮುಂದೆ ಯಾರನ್ನೂ ಬಿಡದೇ ಒಂದು ಕೀಲೋ ಮೀಟರ್​​ ದೂರದಲ್ಲಿಯೇ ಭಕ್ತರನ್ನು ತಡೆಯಲಾಗಿದೆ.

Intro:Anchor

Body:ಶ್ರಾವಣ ಮಾಸ ದಲ್ಲಿ ಪೂಜೆ,ಪುರಸ್ಕಾರ ಮಾಡಿದರೆ ಒಳ್ಳೆಯದು ಆಗುತ್ತದೆ ಎಂಬ ನಂಬಿಕೆ ಇರುತ್ತದೆ.ಈ ಹಿನ್ನೆಲೆಯಲ್ಲಿ ವಿಶ್ವಗುರು ಬಸವಣ್ಣನವರ ಐಕ್ಯ ಸ್ಥಳ ಹಾಗೂ ಧಾರ್ಮಿಕ ಸ್ಥಳವಾಗಿರುವ ಕೂಡಲಸಂಗಮ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬಂದು ಪೂಜೆ ಪುರಸ್ಕಾರ ಮಾಡುತ್ತಿದ್ದರು.ಆದರೆ ಈ ಭಾರಿ ಶ್ರಾವಣ ಮಾಸ ಮುಗಿಯುವವರೆಗೂ ಸಂಗಮನಾಥ ದರುಶದ ಭಾಗ್ಯ ಇಲ್ಲದೆ ಭಕ್ತರು ಪರದಾಡುವಂತಾಗಿದೆ.ಏಕೆಂದರೆ ಕೃಷ್ಣ, ಮಲ್ಲಪ್ರಭಾ ನದಿಯ ಪ್ರವಾಹ ದಿಂದ ಭಕ್ತರಿಗೆ ನಿಷೇಧ ಮಾಡಲಾಗಿದ್ದು,ಪ್ರವಾಹ ಇಳಿಯುವವರೆಗೂ ಕೂಡಲಸಂಗಮ ಕ್ಕೆ ಬರಬಾರದು ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಪ್ರಾಧಿಕಾರದ ಆಯುಕ್ತ ರಾದ ಶ್ರೀಮತಿ ರಾಜಶ್ರೀ ಅಗಸರ ಮನವಿ ಮಾಡಿಕೊಂಡಿದ್ದಾರೆ.
ಇತಿಹಾಸ ದಲ್ಲಿಯೇ ಇದೇ ಮೊದಲು ಭಾರಿಗೆ ಕೂಡಲಸಂಗಮ ದಲ್ಲಿ ಇಷ್ಟೊಂದು ನೀರು ಬರುತ್ತಿದ್ದು,ಸಂಗಮನಾಥ ದೇವಸ್ಥಾನದ ಆವರಣ ಸೇರಿದಂತೆ ಕೆಳ ಭಾಗದಲ್ಲಿ ಇರುವ ಮುಖ್ಯ ರಸ್ತೆಯು ಜಲಾವೃತಗೊಂಡಿದೆ. ಇದರಿಂದ ಅಂಗಡಿ ಮುಗ್ಗಟ್ಟು ಸಂಪೂರ್ಣ ಜಲಾವೃತ್ತಗೊಂಡು ಲಕ್ಷಾಂತರ ರೂಪಾಯಿಗಳ ಹಾನಿ ಆಗಿದೆ ಎಂದು ಸಂತ್ರಸ್ಥರು ತಮ್ಮ ಗೋಳು ತೋರ್ಪಡಿಸಿಕೊಂಡಿದ್ದಾರೆ.ಸಂಗಮನಾಥ ದೇವಾಲಯ ಅಲ್ಲದೇ ಇಡೀ ಊರಿಗೆ ಊರೇ ಜಲಾವೃತಗೊಂಡಿದೆ.ಗ್ರಾಮದ ಜನರಿಗೆ ಸ್ಥಳೀಯ ಮಾತೆ ಮಹಾದೇವಿ ಅವರ ಮಠದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.ಎಲ್ಲರನ್ನು ಕಾಪಾಡುವ ಸಂಗಮನಾಥನಿಗೆ ಜಲ ದಿಗ್ಬಂಧನ ಆಗಿರುವುದರಿಂದ ಇನ್ನು ಕಾಪಾಡುವವರು ಯಾರೂ ಎಂದು ಭಕ್ತರು ಕೇಳಿಕೊಳ್ಳುವಂತಾಗಿದೆ.ದೇವಾಲಯದ ಮುಂದೆ ಯಾರೂ ಬಿಡದೇ ಒಂದು ಕೀಲೋ ಮೀಟರ ದೂರದಲ್ಲಿಯೇ ಭಕ್ತರನ್ನು ತಡೆಯಲಾಗಿದೆ.ದೂರ ದಲ್ಲಿಯೇ ನೀರಿನಲ್ಲಿ ಸ್ಥಾನ ಮಾಡಿ ದೇವರಿಗೆ ಕೈ ಮುಗಿದು ಭಕ್ತರು ವಾಪಸ್ಸು ಆಗುತ್ತಿದ್ದಾರೆ.

Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.