ETV Bharat / state

ಬಾಳೆ ಬೆಳೆದು ಬಂಗಾರದ ಬದುಕು ಕಟ್ಟಿಕೊಂಡ ಪದವೀಧರ - ಡಿ. ದೇವರಾಜ ಅರಸು ನಿಗಮದ ಗಂಗಾ ಕಲ್ಯಾಣ ಯೋಜನೆ

ಆಧುನಿಕ ದಿನಗಳಲ್ಲಿ ಉದ್ಯೋಗ ಎಂಬುದು ಮರಿಚಿಕೆಯಾಗಿದ್ದು, ಯುವ ಜನತೆ ಸ್ವಯಂ ಉದ್ಯೋಗದಲ್ಲಿ ತೊಡಗಿದ್ದಾರೆ. ಅದೇ ರೀತಿ ಇಲ್ಲೊಬ್ಬ ಯುವಕ, ಬಾಳೆ ಬೆಳೆದು ಬಂಗಾರದ ಬದುಕು ಕಟ್ಟಿಕೊಂಡಿದ್ದಾನೆ.

author img

By

Published : Jan 27, 2020, 8:04 PM IST

ಬಾಗಲಕೋಟೆ: ಆಧುನಿಕ ದಿನಗಳಲ್ಲಿ ಉದ್ಯೋಗ ಎಂಬುದು ಮರೀಚಿಕೆಯಾಗಿದ್ದು, ಯುವ ಜನತೆ ಸ್ವಯಂ ಉದ್ಯೋಗದಲ್ಲಿ ತೊಡಗಿದ್ದಾರೆ. ಬೀಳಗಿ ತಾಲೂಕಿನ ಸುನಗ ಗ್ರಾಮದ ಚಂದ್ರಶೇಖರ್​​ ಸಾಬಣ್ಣ ಪಂಡರಿ ಎಂಬ ಯುವಕ, ಬಾಳೆ ಬೆಳೆದು ಬಂಗಾರದ ಬದುಕನ್ನು ಕಟ್ಟಿಕೊಂಡು ಯುವಕರಿಗೆ ಮಾದರಿಯಾಗಿದ್ದಾನೆ.

ಚಂದ್ರಶೇಖರ್ ಬಿ.ಎ ಎಂಪಿಎಡ್​​​ ಪದವೀಧರರಾಗಿದ್ದು, ಡಿ. ದೇವರಾಜ ಅರಸು ನಿಗಮದ ಗಂಗಾ ಕಲ್ಯಾಣ ಯೋಜನೆಯ ಸಹಾಯದಡಿ, ಒಂದು ಬೋರವೆಲ್ ಹಾಕಿಸಿಕೊಂಡು ತಮ್ಮ 3 ಎಕರೆ 10 ಗುಂಟೆ ಜಮೀನಿನಲ್ಲಿ ಬಾಳೆ ಬೆಳೆದು ಲಕ್ಷಾಂತರ ರೂ. ಆದಾಯ ಪಡೆಯುತ್ತಿದ್ದಾರೆ. ಈ ಮೊದಲು ಚಂದ್ರಶೇಖರ್ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಅಲ್ಲಿಯೂ ಸರಿಯಾದ ವೇತನ ದೊರೆಯದ ಕಾರಣ, ಕೃಷಿ ಆರಂಭಿಸಿ ಆರಾಮಾಗಿ ಜೀವನ ನಡೆಸುತ್ತಿದ್ದಾರೆ.

ಮೊದಲ ಬೆಳೆಯಾಗಿ ಚೆಂಡು ಹೂ ಬೆಳೆಯನ್ನು ಬೆಳೆದು, ಉತ್ತಮ ಆದಾಯ ಬಂದ ನಂತರ ತೋಟಗಾರಿಗೆ ವಿಶ್ವವಿದ್ಯಾಲಯ ಬಾಗಲಕೋಟೆ ಅವರಿಂದ ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಿಸಿ ಬಾಳೆ ಬೆಳೆ ಬೆಳೆಯಲು ಪ್ರಾರಂಭಿಸಿದರು. ತೋಟಗಾರಿಕೆ ಇಲಾಖೆಯ ವಿಜ್ಞಾನಿಗಳ ಮಾರ್ಗದರ್ಶನದೊಂದಿಗೆ ಭೂಮಿಯನ್ನು ತಯಾರು ಮಾಡಿಸಿ, ಮಹಾರಾಷ್ಟ್ರದ ಜಲಗಾಂವದಿಂದ ಬಾಳೆ ಸಸಿಗಳನ್ನು ತಂದು ನಾಟಿ ಮಾಡಿದ್ದಾರೆ. 11 ತಿಂಗಳಲ್ಲಿ ಬೆಳೆಯನ್ನು ಸಂಪೂರ್ಣವಾಗಿ ಬೆಳೆದು ಕಟಾವು ಮಾಡಿ, ಸುಮಾರು ₹ 8 ಲಕ್ಷ ಆದಾಯ ಪಡೆದಿದ್ದಾರೆ. ಈ ಬೆಳೆ ಬೆಳೆಯಲು ₹ 2 ಲಕ್ಷ ಖರ್ಚಾಗಿದೆ.

ಇದರ ಜೊತೆಗೆ ಉಪ ಕಸಬುಗಳಾದ ಕುರಿ ಸಾಕಣೆ ಮಾಡುತ್ತಿದ್ದು, ಇದರಿಂದ ₹ 60 ಸಾವಿರ ಆದಾಯ ಪಡೆಯುತ್ತಿದ್ದಾರೆ. ಈ ಮೂಲಕ ಕುಟುಂಬ ನಿರ್ವಹಣೆ ಜೊತೆಗೆ ಕೃಷಿ ಮತ್ತು ಹೈನುಗಾರಿಕೆಯಲ್ಲಿ ತಮ್ಮದೇ ಆದ ಹೆಸರು ಮಾಡಲು ಪ್ರಯತ್ನಿಸುತ್ತಿದ್ದಾರೆ. ಇವರ ಈ ಪಯತ್ನಕ್ಕೆ ಇಲಾಖೆಯಿಂದ ಅಭಿನಂದಿಸಲಾಗಿದ್ದು, ಇಲಾಖೆಯ ಸಹಾಯಕ್ಕೆ ತಮ್ಮ ಅಭಿನಂದನೆಗಳನ್ನು ತಿಳಿಸಿದ್ದಾರೆ.

Intro:AnchorBody:ಬಾಗಲಕೋಟೆ--ಆಧುನಿಕ ದಿನಮಾನಗಳಲ್ಲಿ ಉದ್ಯೋಗ ಎಂಬುವದು ಮರಿಚಿಕೆಯಾಗಿದ್ದು ನಿರೂದ್ಯೋಗಿ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ದೃಷ್ಠಿಯಿಂದ ಡಿ ದೇವರಾಜ ಅರಸು ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಯಡಿ ಕೃಷಿಯಲ್ಲಿ ಆಸಕ್ತಿ ಹೊಂದಿದ ರೈತರ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸುವದರÀ ಜೊತೆಗೆ ಯುವಕರಿಗೆ ಕೃಷಿಯತ್ತ ಗಮನಸೆಳೆಯುವ ಕಾರ್ಯ ಮಾಡುತ್ತಿದೆ ಇವರಲ್ಲಿ ಒಬ್ಬರಾದ ನಮ್ಮ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಗ್ರಾಮದ ಚಂದ್ರಶೇಖರ ಸಾಬಣ್ಣ ಪಂಡರಿ ಎನ್ನುವವರು ಇಲಾಖೆಯ ಸಹಾಯದಿಂದ ಬಾಳೆ ಬೆಳೆದು ಬದುಕನ್ನು ಬಂಗಾರವನ್ನಾಗಿ ಮಾಡಿಕೊಂಡು ಯುವಕರಿಗೆ ಮಾರ್ಗದರ್ಶಕರಗಿದ್ದಾರೆ.
ಇಂದಿನ ಯುವಕರು ಕೃಷಿ ವ್ಯವಸಾಯದಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಬದಲಾಗಿ ವಿದೇಶಿ ಕಂಪನಿಗಳಿಗೆ ಮಾರು ಹೋಗಿ ಹಗಲು ರಾತ್ರಿ ದುಡಿಯುತ ಸಮಯ ಮತ್ತು ಆರೋಗ್ಯ ಎರಡನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದರೆ ಚಂದ್ರಶೇಖರ ಅವರು . ಬಿ.ಎ ಎಮ್‍ಪಿಎಡ್ ಪದÀವಿಧರರಾಗಿದ್ದರೂ, ಡಿ. ದೇವರಾಜ ಅರಸು ನಿಗಮದಿಂದ ತೋಟದಲ್ಲಿ ಒಂದು ಬೊರವೆಲ್ ಹಾಕಿಸಿಕೊಂಡು ತಮ್ಮ 3 ಎಕರೆ 10 ಗುಂಟೆ ಜಮೀನಿನಲ್ಲಿ ಬಾಳೆ ಬೆಳೆದು ಇಂದು 8 ಲಕ್ಷ ರೂಗಳಷ್ಟು ಆದಾಯ ಪಡೆಯುತ್ತಿದ್ದಾರೆ.
ಮೊದಲು ಇವರ ಜಮೀನಿನಲ್ಲಿ ನೀರಿನ ಸೌಲಭ್ಯ ಇಲ್ಲದೆ ಇರುವದರಿಂದ ಒಂದು ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಚಂದ್ರಶೇಖರವರಿಗೆ ಅಲ್ಲಿಯೂ ಸರಿಯಾದ ವೇತನ ದೊರೆಯುತ್ತಿರಲ್ಲಿ ಅದಕ್ಕಾಗಿ ಜೀವನ ನಡೆಸುವದು ಕಷ್ಟವಾಗಿದ್ದ ಸಂದರ್ಭದಲ್ಲಿ ಇವರಿಗೆ ಸಹಕಾರಿ ಯಾಗಿದ್ದು ಗಂಗಾ ಕಲ್ಯಾಣ ಯೋಜನೆ ಈ ಮೂಲಕ ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆದು ವಿದ್ಯುತ್ ಸಂಪರ್ಕ ಕಲ್ಪಿಸುವದರ ಜೊತೆಗೆ ಪಂಪ್‍ಸೆಟ್ ಮೂಲಕ ನೀರಾವರಿ ಸೌಲಭ್ಯ ಮಾಡಿಕೊಂಡು ಕೃಷಿ ಆರಂಭಿಸಿದರು.
ಈ ಸೌಲಭ್ಯದ ಮೊದಲ ಬೆಳೆಯಾಗಿ ಚೆಂಡು ಹೂ ಬೆಳೆಯನ್ನು ಬೆಳೆದು ಉತ್ತಮ ಆದಾಯ ಬಂದ ನಂತರ ತೋಟಗಾರಿಗೆ ವಿಶ್ವವಿದ್ಯಾಲಯ ಬಾಗಲಕೋಟೆ ಅವರಿಂದ ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಿಸಿ ಬಾಳೆ ಹಣ್ಣಿನ ಬೆಳೆಯನ್ನು ಬೆಳೆಯಲು ಪ್ರಾರಂಭಿಸಿದರು. ತೋಟಗಾರಿಗೆ ಇಲಾಖೆಯ ವಿಜ್ಞಾನಿಗಳ ಮಾರ್ಗದರ್ಶನದೊಂದಿಗೆ ಭೂಮಿಯನ್ನು ತಯಾರು ಮಾಡಿಸಿದರು. ನಂತರ ಮಹಾರಾಷ್ಟ್ರದ ಜಲಗಾಂವದಿಂದ ಬಾಳೆಹಣ್ಣಿನ ಸಸಿಗಳನ್ನು ತಂದು ನಾಟಿ ಮಾಡಿ 11 ತಿಂಗಳಲ್ಲಿ ಬೆಳೆಯನ್ನು ಸಂಪೂರ್ಣವಾಗಿ ಬೆಳೆದು ಕಟಾವು ಮಾಡಿ 7.80.000 ಆದಾಯ ಪಡೆದಿದ್ದಾರೆ. ಈ ಬೆಳೆ ಬೆಳೆಯಲು 2 ಲಕ್ಷ ರೂ. ಖರ್ಚಾಗಿದ್ದು 8 ಲಕ್ಷ ರೂ ಲಾಭ ಪಡೆದುಕೊಂಡಿದ್ದಾರೆ.
ಇದರ ಜೊತೆಗೆ ಉಪ ಕಸಬುಗಳಾದ ಕುರಿ ಸಾಕಾಣಿಕೆ ಮಾಡುತ್ತಿದ್ದು ಇದರಿಂದ 60.000 ರೂ. ಆದಾಯ ಪಡೆಯುತ್ತಿದ್ದಾರೆ. ಈ ಮೂಲಕ ಕುಟುಂಬ ನಿರ್ವಹಣೆ ಜೊತೆಗೆ ಕೃಷಿ ಮತ್ತು ಹೈನುಗಾರಿಕೆಯಲ್ಲಿ ತಮ್ಮದೆಯಾದ ಹೆಸರು ಮಾಡಲು ಪ್ರಯತ್ನಿಸುತ್ತಿದ್ದಾರೆ. ಇವರ ಈ ಪಯತ್ನಕ್ಕೆ ಇಲಾಖೆಯಿಂದ ಅಭಿನಂದಿಸಲಾಗಿದೆ. ಇಲಾಖೆಯ ಸಹಾಯಕ್ಕೆ ತಮ್ಮ ಅಭಿನಂದನೆಗಳನ್ನು ತಿಳಿಸಿದ್ದಾರೆ,
Conclusion:Etv-Bharat-Bagalkote
ETV Bharat Logo

Copyright © 2025 Ushodaya Enterprises Pvt. Ltd., All Rights Reserved.