ETV Bharat / state

ಬಾಗಲಕೋಟೆ: ರಾಶಿ ಮಾಡುವಾಗ ಮಷಿನ್​ನಲ್ಲಿ ಸೀರೆ ಸಿಲುಕಿ ಮಹಿಳೆ ಸಾವು - A woman worker dies

ರಾಶಿ ಮಷಿನ್​​ಗೆ ಸಿಲುಕಿ ಮಹಿಳೆ ಮೃತಪಟ್ಟ ಘಟನೆ ಶಿರೂರು ಗ್ರಾಮದಲ್ಲಿ ನಡೆದಿದೆ.

ರಾಶಿ ಮಾಡುವಾಗ ಮಷಿನ್​ನಲ್ಲಿ ಸೀರೆ ಸಿಲುಕಿ ಮಹಿಳೆ ಸಾವು

author img

By

Published : Nov 13, 2022, 9:12 PM IST

ಬಾಗಲಕೋಟೆ: ರಾಶಿ ಮಷಿನ್​​ಗೆ ಸೀರೆ ಸಿಲುಕಿ ಅವಘಡ ಸಂಭವಿಸಿದರಿಂದ ಮಹಿಳೆ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಶಿರೂರ ಗ್ರಾಮದಲ್ಲಿ ನಡೆದಿದೆ. ಮೆಕ್ಕೆ ಜೋಳದ ರಾಶಿ ಮಾಡುವ ವೇಳೆ ಭಾನುವಾರ ಈ ಘಟನೆ ನಡೆದಿದೆ.

ರೇಣುಕಾ ಮಾದರ ಮೃತ ಮಹಿಳೆ. ರಾಶಿ ಮಾಡುವಾಗ ಮಷಿನ್​ನಲ್ಲಿ ಮೆಕ್ಕೆ ಜೋಳ ಹಾಕುವ ಸಮಯದಲ್ಲಿ ಸೀರೆ ಸಿಲುಕಿದೆ. ಇದರಿಂದ ಮಷಿನ್​ನಲ್ಲಿ ದೇಹ ಸಿಲುಕಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ತೋಗುಣಸಿ ಗ್ರಾಮದ ರೇಣುಕಾ ಎರಡು ದಿನಗಳ ಹಿಂದೆ ಶಿರೂರಗೆ ಬಂದಿದ್ದರು. ಇಂದು ಹೊಲದಲ್ಲಿ ಕೆಲಸ ಮಾಡಲು ಬಂದಾಗ ಈ ಘಟನೆ ನಡೆದಿದೆ.

ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

(ಓದಿ: ಕೆಲಸದ ವೇಳೆ ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಪ್ರಾಣ ಬಿಟ್ಟ ಇಬ್ಬರು ಕಾರ್ಮಿಕರು)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.