ETV Bharat / state

ಆಸ್ಕರ್ ಅವಾರ್ಡ್‌ಗಾಗಿ ಬೇಡಿಕೆ: ವಿನ್ ಎಟ್ ಆಸ್ಕರ್​ ಕಾಂತಾರ ಎಂದು ಸೀರೆಯಲ್ಲಿ ನೇಯ್ದ ನೇಕಾರ - bagalkote ilkal special saree for kantara

ಕಾಂತಾರ ಸಿನಿಮಾಕ್ಕೆ ಆಸ್ಕರ್ ಸಿಗಬೇಕು ಎಂದು ಮೇಘರಾಜ ಉದಗಟ್ಟಿ ಎಂಬ ಯುವ ನೇಕಾರರ ವಿನ್ ಎಟ್ ಆಸ್ಕರ್​ ಕಾಂತಾರ ಎಂದು ಅಕ್ಷರ ಕಾಣುವಂತೆ ನೇಯುವ ಮೂಲಕ ಗಮನ ಸೆಳೆದಿದ್ದಾರೆ.

ವಿನ್ ಎಟ್ ಆಸ್ಕರ್​ ಕಾಂತಾರ ಎಂದು ಸೀರೆಯಲ್ಲಿ ನೇಯ್ದ ನೇಕಾರ

author img

By

Published : Nov 30, 2022, 8:20 PM IST

ಬಾಗಲಕೋಟೆ: ಕಾಂತಾರ ಸಿನಿಮಾ ದೇಶದಲ್ಲಿ ಹವಾ ಮಾಡಿದ ಬೆನ್ನಲ್ಲೆ ಈಗ ಆಸ್ಕರ್​ ಪ್ರಶಸ್ತಿ ಸಿಗುವಂತಾಗಬೇಕು ಎಂದು ಅಭಿಮಾನಿಗಳ ಒತ್ತಾಯ ಸಹ ಹೆಚ್ಚಾಗಿದೆ. ಇಂತಹ ಅಭಿಮಾನಿಯೊಬ್ಬರು ಇದೀಗ ತಾವು ಮಾಡುವ ನೇಕಾರಿಕೆ ಕೆಲಸದಲ್ಲಿ ತಮ್ಮದೇ ಆದ ಶೈಲಿಯಲ್ಲಿ ನೇಯುವ ಮೂಲಕ ಕಾಂತಾರ ಸಿನಿಮಾಕ್ಕೆ ಆಸ್ಕರ್ ಸಿಗಬೇಕು ಎಂದು ಒತ್ತಾಯಿಸಿದ್ದಾರೆ. ಇಳಕಲ್​ ಕಾಟನ್​ ಸೀರೆಯು ಸಹ ದೇಶದಲ್ಲಿ ಹೆಸರು ವಾಸಿ ಮಾಡಿದೆ.

ವಿನ್ ಎಟ್ ಆಸ್ಕರ್​ ಕಾಂತಾರ ಎಂದು ಸೀರೆಯಲ್ಲಿ ನೇಯ್ದ ನೇಕಾರ

ಇಂತಹ ಸೀರೆಯಲ್ಲಿ ಮೇಘರಾಜ ಉದಗಟ್ಟಿ ಎಂಬ ಯುವ ನೇಕಾರ ವಿನ್ ಎಟ್ ಆಸ್ಕರ್​ ಕಾಂತಾರ ಎಂದು ಅಕ್ಷರ ಕಾಣುವಂತೆ ನೇಯುವ ಮೂಲಕ ಗಮನ ಸೆಳೆದಿದ್ದಾರೆ. ಮೇಘರಾಜ ಈ ಹಿಂದೆ ಶ್ರೀರಾಮ ಮಂದಿರ, ಅಪ್ಪು ಚಿತ್ರ ಸೇರಿದಂತೆ ಇತರ ಬಗೆಯ ಚಿತ್ರಗಳನ್ನು ಸೀರೆಯಲ್ಲಿ ಕಾಣುವಂತೆ ನೇಯ್ದು,ಇಳಕಲ್​ ಸೀರೆ ಪ್ರಸಿದ್ಧಿ ಆಗುವಂತೆ ಮಾಡುತ್ತಿದ್ದಾರೆ.

ಈಗ ಪ್ರಸಕ್ತವಾಗಿ ಕಾಂತಾರ ಸಿನೆಮಾ ಹೆಚ್ಚು ಹವಾ ಮಾಡಿದ್ದು, ಅದರ ಬಗ್ಗೆ ಚರ್ಚೆ ಆಗುತ್ತಿದೆ. ಈ ಹಿನ್ನಲೆ ಹೊಸ ಹೊಸ ಯೋಚನೆ ಮಾಡುತ್ತಿರುವ ಮೇಘರಾಜ ಈಗ ಕಾಂತಾರ ಸಿನೆಮಾಗೆ ಆಸ್ಕರ್ ಎಂಬ ಅಕ್ಷರ ಕಾಣುವಂತೆ ಮಾಡುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಈ ಸೀರೆಯು ಕಾಂತಾರ ಚಿತ್ರ ನಿರ್ಮಾಣ ಮಾಡಿರುವ ರಿಷಬ್ ಶೆಟ್ಟಿ ಅವರಿಗೆ ಕಾಣಿಕೆ ನೀಡಬೇಕು ಎಂಬ ಆಸೆ ಇಟ್ಟುಕೊಂಡು ಹೀಗೆ ತನ್ನ ಕಾಯಕದಲ್ಲಿಯೂ ಸಹ ಹೊಸತನ ಕಾಣುವಂತೆ ಮಾಡಿದ್ದಾನೆ.

ಇದನ್ನೂ ಓದಿ: ಉಡುಪಿ: ರಂಗೋಲಿಯಲ್ಲಿ ಮೂಡಿದ ಕಾಂತಾರ

ಇವರ ಪ್ರೋತ್ಸಾಹಕ್ಕೆ ಸ್ಥಳೀಯರು ಸಹ ಮೆಚ್ಚುಗೆ ವ್ಯಕ್ಯ ಪಡಿಸಿದ್ದಾರೆ. ಇಂದಿನ ಆಧುನಿಕ ಯುಗದ ಭರಾಟೆಯಿಂದಾಗಿ ನಶಿಸಿ ಹೋಗುತ್ತಿರುವ ಇಳಕಲ್​ ಸೀರೆಗೆ ಫ್ಯಾಷನ್ ಟಚ್ ಹಾಗೂ ಈ ರೀತಿಯಾಗಿ ಏನಾದರೂ ಆಲೋಚನೆ ಮಾಡುವ ಮೂಲಕ ಸೀರೆಗೆ ಕಳೆ ಬರುವಂತೆ ಮಾಡಲಾಗಿದೆ. ಕಾಂತಾರ ಸಿನೆಮಾ ಹವಾ ದಿಂದ ಅದಕ್ಕೆ ಆಸ್ಕರ್ ಸಿಗುವಂತಾಗಬೇಕು ಹಾಗೂ ಈ ಸೀರೆಯನ್ನು ರಿಷಬ್ ಶೆಟ್ಟಿಗೆ ಕಾಣಿಕೆಯಾಗಿ ನೀಡಬೇಕು ಎಂದು ಅಭಿಲಾಷೆ ಹೊಂದಿರುವ ಈ ಯುವಕನ ಆಸೆಯು ಶೀಘ್ರವಾಗಿ ಇಡೇರಲಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.