ಬಾಗಲಕೋಟೆ: ಕುಬ್ಜ ಯುವಕನೊಂದಿಗೆ ಯುವತಿಯೋರ್ವಳು ಮದುವೆಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ಈ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದಲ್ಲಿ ನಡೆದಿದೆ.
ಕುಬ್ಜ ಯುವಕನಾದ ಬಸವರಾಜ ಅವರು ರುಕ್ಮಿಣಿ ಎಂಬ ಯುವತಿ ಜೊತೆ ಮದುವೆಯಾಗಿದ್ದಾರೆ. ಬಸವರಾಜ ಅವರಿಗೆ 30 ವರ್ಷ ವಯಸ್ಸಾಗಿದ್ದು, 3 ಅಡಿ 8 ಇಂಚು ಎತ್ತರವಿದ್ದಾರೆ. ಯುವತಿ ರುಕ್ಮಿಣಿಗೆ 22 ವರ್ಷ ವಯಸ್ಸಾಗಿದ್ದು, 5 ಅಡಿ 3 ಇಂಚು ಎತ್ತರವಿದ್ದಾರೆ.
ಬಸವರಾಜ್ ಕುಬ್ಜನಾಗಿದ್ದರಿಂದ ಕನ್ಯೆಗಾಗಿ ಮನೆಯವರು ಸಾಕಷ್ಟು ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಹಿರಿಯರ ಆಶಯದಂತೆ ಮನಸಾರೆ ಒಪ್ಪಿ ಯುವಕನನ್ನು ವರಿಸಲು ಯುವತಿ ಮುಂದಾಗಿದ್ದಾಳೆ.
ಇದನ್ನೂ ಓದಿ:ಲೀಟರ್ ಪೆಟ್ರೋಲ್ಗೆ 35 ಕಿ.ಮೀ. ಮೈಲೇಜ್.. ಯೂಟ್ಯೂಬ್ ನೋಡಿ ಸ್ಪೋರ್ಟ್ಸ್ ಕಾರ್ ತಯಾರಿಸಿದ ಬಾಲಕ!
ಬಸವರಾಜ್ ಜೊತೆ ಮದುವೆಯಾಗಿ ಹೊಂದಾಣಿಕೆಯಿಂದ ಜೀವನ ನಡೆಸುತ್ತೇನೆ. ಯಾರ ಒತ್ತಡವೂ ಇಲ್ಲ, ಪ್ರೇಮದಿಂದಲೇ ಮದುವೆಯಾಗಿದ್ದೇನೆ ಎಂದು ರುಕ್ಮಿಣಿ ತಿಳಿಸಿದ್ದಾರೆ.
ಐದು ವರ್ಷದಿಂದ ಕನ್ಯೆಗಾಗಿ ಹುಡುಕಾಡುತ್ತಿದ್ವಿ, ಆದ್ರೆ ಸಿಕ್ಕಿರಲಿಲ್ಲ. ಈಗ ನನ್ನ ಮಗನಿಗೆ ಹುಡುಗಿ ಸಿಕ್ಕಿ, ಮದುವೆಯಾಗಿದೆ. ಇದರಿಂದ ತುಂಬಾ ಖುಷಿಯಾಗಿದೆ ಎಂದು ಬಸವರಾಜ್ ತಾಯಿ ಸಂತಸವಾಗಿದೆ ಎಂದು ಹೇಳಿದ್ದಾರೆ.