ಬಾಗಲಕೋಟೆ: ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ 8 ದೇವಸ್ಥಾನಗಳು ಹಾಗೂ ಒಂದು ಮಸೀದಿ ಸೇರಿದಂತೆ, ಒಟ್ಟು 9 ಅನಧಿಕೃತ ಕಟ್ಟಡಗಳ ನೆಲಸಮಗೊಳಿಸಲಾಯಿತು. ಸೋಮವಾರ ಪೇಟೆಯ ಮಸೀದಿ ಸೇರಿದಂತೆ ಕೆಲ ದೇವಸ್ಥಾನಗಳನ್ನು ನೆಲಸಮಗೊಳಿಸಲಾಯಿತು. ಸರ್ವೋಚ್ಛ ನ್ಯಾಯಲಯದ ಆದೇಶದಂತೆ ಕ್ರಮ ಜರುಗಿಸುತ್ತಿರುವ ನಗರಸಭೆ, ಕಂದಾಯ ಹಾಗೂ ಪೊಲೀಸ್ ಬಿಗಿ ಬಂದೋಬಸ್ತ್‍ನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಇನ್ನು ಇದಕ್ಕೆ ಸಂಬಂಧಿಸಿದಂತೆ ಪರ್ಯಾಯ ಜಾಗೆ ಕಲ್ಪಿಸಿಕೊಡುವಂತೆ ಕೆಲ ಜನರು ಒತ್ತಾಯಿಸಿದ್ದು, ಇದಕ್ಕೆ ಪೂರಕವಾಗಿ ಅಧಿಕಾರಿಗಳು ಯಾವುದೇ ಸ್ಪಷ್ಟ ಭರವಸೆ ನೀಡಿಲ್ಲ. ಶತಮಾನದಿಂದಲೂ ಆಚರಣೆ ಮಾಡುತ್ತಿರುವ ಹಬ್ಬಗಳಿಗೆ ಚ್ಯುತಿ ಬರದಂತೆ ಅಧಿಕಾರಿಗಳು ಸೂಕ್ತ ಸ್ಥಳಾವಕಾಶ ಕಲ್ಪಿಸಿದ್ದಲ್ಲಿ ಅನುಕೂಲವಾಗುವದೆಂದು ಸಾರ್ವಜನಿಕರು ಒತ್ತಾಸೆಯಾಗಿದೆ.