ಬಾಗಲಕೋಟೆ: ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದು ಸಂಗ್ರಹಿಸಿಟ್ಟ ಮಾಹಿತಿಯ ಮೇರೆಗೆ ಸಾವಳಗಿ ಪೊಲೀಸರು ದಾಳಿ ನಡೆಸಿ 60 ಸಾವಿರ ಮೌಲ್ಯದ ಗಾಂಜಾ ಜಪ್ತಿ ಮಾಡಿದ ಘಟನೆ ನಡೆದಿದೆ.
ಹಿರೇಪಡಸಲಗಿ ಗ್ರಾಮದ ಸದಾಶಿವ ಶಿವಪ್ಪ ಕಲ್ಲೊಳ್ಳಿ ಎಂಬುವವನು ಅಕ್ರಮವಾಗಿ ತನ್ನ ತೋಟದಲ್ಲಿ ಗಾಂಜಾ ಬೆಳೆದು ಶೆಡ್ನಲ್ಲಿ ಸಂಗ್ರಹಿಸಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಅವನನ್ನು ಬಂಧಿಸಿ 60 ಸಾವಿರ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ತಹಶೀಲ್ದಾರ ಸಂಜಯ ಇಂಗಳೆ, ಸಾವಳಗಿ ಠಾಣೆಯ ಪಿ.ಎಸ್.ಐ. ಶೇಖರ ಎಸ್ ಘಾಟಗೆ, ಸಿಬ್ಬಂದಿಗಳಾದ ಎಸ್.ಎಸ್.ಬಿಳಗಿ, ಆರ್.ಎಸ್.ಬಸಣ್ಣವರ, ಎ.ಎ.ಬೈಗನಪಲ್ಲಿ, ಡಿ.ವ್ಹಿ.ಕುಂಬಾರ, ಎಸ್.ಎಸ್.ಹಳ್ಯಾಳ, ಎಮ್.ಎಸ್.ಕಾರಜೋಳ, ಎಮ್.ಸಿ.ಕುಡಗಿ, ಆರ್.ಎಸ್.ತಳವಾರ ಇದ್ದರು.