ETV Bharat / state

ಬಾಗಲಕೋಟೆಯಲ್ಲಿ ಕೊರೊನಾ ಗೆದ್ದ 17 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್​!

ಬಾಗಲಕೋಟೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದು, ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮರಳುತ್ತಿದ್ದಾರೆ. ಇಂದು ಜಿಲ್ಲೆಯಲ್ಲಿ ಒಂದೂ ಕೊರೊನಾ ಪ್ರಕರಣ ದಾಖಲಾಗದೆ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಈ ನಡುವೆ ಇಲ್ಲಿನ ಕೋವಿಡ್ ಜಿಲ್ಲಾಸ್ಪತ್ರೆಯಿಂದ 17 ಮಂದಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದು, ಜನರಲ್ಲಿದ್ದ ಕೊರೊನಾ ಭೀತಿ ಕೊಂಚ ಮಟ್ಟಿಗೆ ದೂರಾದಂತಾಗಿದೆ.

17 coronavirus infected people recovered in Bagalkot and Discharged from hospital
ಬಾಗಲಕೋಟೆಯಲ್ಲಿ ಕೊರೊನಾ ಗೆದ್ದ 17 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್
author img

By

Published : May 26, 2020, 4:58 PM IST

ಬಾಗಲಕೋಟೆ: ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕು ವರದಿಯಾಗಿಲ್ಲ. ಇದರ ಜೊತೆಗೆ 17 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಇದರಿಂದ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ಢಾಣಕಶಿರೂರ ಗ್ರಾಮದ 19 ವರ್ಷದ ಯುವತಿ ಪಿ-704, ಜಮಖಂಡಿಯ 17 ವರ್ಷದ ಬಾಲಕ ಪಿ-894, 22 ವರ್ಷದ ಯುವಕ ಪಿ-893, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸರಿತ್ತಿ ಗ್ರಾಮದ 32 ವರ್ಷದ ಪಿ-892 ಗುಣಮುಖರಾದವರು.

ಬಾಗಲಕೋಟೆಯಲ್ಲಿ ಕೊರೊನಾ ಗೆದ್ದ 17 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ಮುಧೋಳದ ಓರ್ವ ಸೇರಿದಂತೆ ಒಟ್ಟು 13 ಜನರಿಗೆ ತಬ್ಲಿಘಿ ಜಮಾತ್​ನಿಂದ ಬಂದವರಿಂದ ಸೋಂಕು ತಗಲಿದ್ದು, ಈಗ ಎಲ್ಲರೂ ಗುಣಮುಖರಾಗಿದ್ದಾರೆ.

ಪಿ-870, ಪಿ-871, ಪಿ-872, ಪಿ-873, ಪಿ-874, ಪಿ-875, ಪಿ-876, ಪಿ-893, ಪಿ-894, ಪಿ-895, ಪಿ-896, ಪಿ-897, ಪಿ-899 ಇವರು ಕೊರೊನಾದಿಂದ ಮುಕ್ತಿ ಪಡೆದಿದ್ದಾರೆ. ಸೋಂಕಿನಿಂದ ಗುಣಮುಖರಾದವರಿಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ ಪ್ರಮಾಣ ಪತ್ರ ವಿತರಣೆ ಮಾಡಿ, 14 ದಿನ ಮನೆಯಲ್ಲಿ ಇರಬೇಕು. ಹೂರಗೆ ಸಂಚಾರ ಮಾಡದಂತೆ ಸೂಚನೆ ನೀಡಿದರು.

ಬಿಡುಗಡೆಯಾದ ರೋಗಿಗಳಿಗೆ ಜಿಲ್ಲಾ ಸರ್ಜನ್ ಹಾಗೂ ವೈದ್ಯಕೀಯ ಸಿಬ್ಬಂದಿ ಮತ್ತು ನರ್ಸಗಳು ಚಪ್ಪಾಳೆ ತಟ್ಟಿ ಬೀಳ್ಕೊಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.