ETV Bharat / state

ಪ್ರವಾಹದಿಂದಾಗಿ ಸುಮಾರು ₹1500 ಕೋಟಿ ನಷ್ಟ.. ಡಿಸಿಎಂ ಕಾರಜೋಳ

ಕಳೆದ‌ ಜೂನ್​ನಲ್ಲಿ ಉಂಟಾಗಿರುವ ಪ್ರವಾಹದಿಂದ‌ ₹850 ಕೋಟಿ ನಷ್ಟ ಉಂಟಾಗಿ ಪರಿಹಾರ ಧನ ಕೇಳಲಾಗಿತ್ತು. ಈಗ ಮತ್ತೆ ₹1500 ಕೋಟಿ ನಷ್ಟವಾಗಿದ್ದು,ಪರಿಹಾರ ಧನ ಕೇಳಲಾಗಿದೆ..

Minister Govinda Karajola
ಸಚಿವ ಗೋವಿಂದ ಕಾರಜೋಳ
author img

By

Published : Oct 23, 2020, 8:07 PM IST

ಬಾಗಲಕೋಟೆ: ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಸುಮಾರು ₹1500 ಕೋಟಿ ನಷ್ಟವಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ನಗರದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಅಧಿಕಾರಿಗಳ ಸಭೆಯ ನಂತರ‌ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಳೆಯಿಂದಾಗಿ ಸಾಕಷ್ಟು ಹಾನಿ ಆಗಿದೆ. ಅದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ದೃಷ್ಟಿಯಿಂದ ಎಲ್ಲಾ ವರದಿಯನ್ನು ತಯಾರಿಸಲಾಗುತ್ತಿದೆ. ಇತ್ತೀಚಿನ ಸತತ ಮಳೆಯಿಂದ ಫಲವತ್ತಾದ ಬೆಳೆ,ಗ್ರಾಮೀಣ ಪ್ರದೇಶದ ಮನೆಗಳು ಕುಸಿದು ಬಿದ್ದಿವೆ. ಅಲ್ಲದೇ, ಮುಂದಿನ 15 ದಿನಗಳವರೆಗೆ ಮನೆಗಳು‌ ಬೀಳುವ ಸಾಧ್ಯತೆ ಇದ್ದು, ಸರ್ವೇ ಕಾರ್ಯ ಮುಂದುವರೆಯಲಿದೆ ಎಂದರು.

ಡಿಸಿಎಂ ಗೋವಿಂದ ಕಾರಜೋಳ ಸುದ್ದಿಗೋಷ್ಠಿ

ಮಳೆಯಿಂದಾಗಿ ಈರುಳ್ಳಿ ಬೆಳೆ‌ ಹಾನಿಯಾಗಿದ್ದು, ಈರುಳ್ಳಿ ದರ ಏರುವಂತಾಗಿದೆ. ಆದ್ದರಿಂದ, ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದ ಅವರು, ಕಳೆದ‌ ಜೂನ್​ನಲ್ಲಿ ಉಂಟಾಗಿರುವ ಪ್ರವಾಹದಿಂದ‌ ₹850 ಕೋಟಿ ನಷ್ಟ ಉಂಟಾಗಿ ಪರಿಹಾರ ಧನ ಕೇಳಲಾಗಿತ್ತು.

ಈಗ ಮತ್ತೆ ₹1500 ಕೋಟಿ ನಷ್ಟವಾಗಿದ್ದು,ಪರಿಹಾರ ಧನ ಕೇಳಲಾಗಿದೆ. ಮುಖ್ಯಮಂತ್ರಿಗಳು ಈಗಾಗಲೇ ಸಮೀಕ್ಷೆ ಕಾರ್ಯ ಕೈಕೊಂಡಿದ್ದಾರೆ. ಇನ್ನೊಂದು ಸಾರಿ ಸಮೀಕ್ಷೆ ಮಾಡಲು ಸಿಎಂ‌ ಬರಲಿದ್ದಾರೆ ಎಂದರು.

ಇದೇ ಸಮಯದಲ್ಲಿ ಶಾಸಕ ಯತ್ನಾಳ್​ ಹೇಳಿಕೆ ಕುರಿತು ಮಾಧ್ಯಮದ ಪ್ರಶ್ನೆಗೆ, ಕೈ ಮುಗಿದ ಅವರು, ಅದರ ಬಗ್ಗೆ ಏನನ್ನೂ ಕೇಳಬೇಡಿರಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.