ಮ್ಯಾಂಚೆಸ್ಟರ್: ವಿಶ್ವಕಪ್ ಹೈ ವೋಲ್ಟೇಜ್ ಮ್ಯಾಚ್ ಆಗಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ನಾಯಕ ಕೊಹ್ಲಿ ಬಾಲ್ ಬ್ಯಾಟ್ಗೆ ತಾಗದಿದ್ದರೂ ಕ್ಯಾಚ್ ಎಂದು ಭಾವಿಸಿ ತಾವಾಗಿಯೇ ಕ್ರೀಸ್ ತೊರೆಯುವ ಮೂಲಕ ಯಡವಟ್ಟು ಮಾಡಿಕೊಂಡಿದ್ದಾರೆ.
65 ಎಸೆತಗಳಲ್ಲಿ 77 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ 48ನೇ ಓವರ್ನ 4ನೇ ಎಸೆತದಲ್ಲಿ ಅಮೀರ್ ಎಸೆದ ಚೆಂಡನ್ನು ಬಾರಿಸಲೆತ್ನಿಸಿ ವಿಫಲರಾದರು. ಆ ಎಸೆತ ಬೌನ್ಸರ್ ಆಗಿದ್ದರಿಂದ ಪಾಕಿಸ್ತಾನ ಕೀಪರ್ ಕ್ಯಾಚ್ಗಾಗಿ ಅಪೀಲ್ ಮಾಡಿದರು. ಆದರೆ ಅಂಪೈರ್ ಔಟ್ ಎಂದು ತೀರ್ಪು ನೀಡುವ ಮುನ್ನವೇ ಕೊಹ್ಲಿ ಹೊರ ನಡೆದಿದ್ದರು.
-
Kohli whyyy did you walk away??? #INDvPAK #ICCWorldCup2019 pic.twitter.com/vEfybHqPcI
— Rahul (@Legendelof) June 16, 2019 " class="align-text-top noRightClick twitterSection" data="
">Kohli whyyy did you walk away??? #INDvPAK #ICCWorldCup2019 pic.twitter.com/vEfybHqPcI
— Rahul (@Legendelof) June 16, 2019Kohli whyyy did you walk away??? #INDvPAK #ICCWorldCup2019 pic.twitter.com/vEfybHqPcI
— Rahul (@Legendelof) June 16, 2019
ಆದರೆ ಟಿವಿ ರೀಪ್ಲೇಯಲ್ಲಿ ಅಲ್ಟ್ರಾ ಎಡ್ಜ್ ನೋಡಿದಾಗ ಬಾಲ್ ಬ್ಯಾಟಿಗೆ ತಾಗದಿರುವುದು ತಿಳಿದುಬಂದಿದೆ. ಬಾಲ್ ಕೀಪರ್ ಕೈಗೆ ತಲುಪುವ ವೇಳೆ ಏನೋ ಶಬ್ಧ ಕೇಳಿ ಬಂದಿದ್ದರಿಂದ ಕೊಹ್ಲಿ ಅಂಪೈರ್ ತೀರ್ಪಿಗೆ ಕಾಯದೆ ಪೆವಿಲಿಯನ್ನತ್ತ ನಡೆದಿದ್ದರು. ಟಿವಿ ರೀಪ್ಲೇ ಗಮನಿಸಿದ ಕೊಹ್ಲಿ ತಮ್ಮ ತಪ್ಪಿಗೆ ತಮ್ಮ ಮೇಲೆಯೇ ಕುಪಿತಗೊಂಡಿದ್ದ ಡ್ರೆಸ್ಸಿಂಗ್ ರೂಮ್ ಬಳಿ ಕಾಣಿಸುತ್ತಿತ್ತು.
ಇನ್ನು 8 ಎಸೆತಗಳಿದ್ದರಿಂದ ಕೊಹ್ಲಿ ಕ್ರೀಸ್ನಲ್ಲಿದ್ದಿದ್ದರೆ ಇನ್ನಷ್ಟು ರನ್ ಹರಿದುಬರುತ್ತಿದ್ದವು. ಆದರೂ 337 ರನ್ ಗಳಿಸಿದ್ದರಿಂದ ಕೊಹ್ಲಿಯ ತಪ್ಪು ದೊಡ್ಡದಾಗಿ ಕಾಣಲಿಲ್ಲ. ಕೊನೆಗೆ ಭಾರತ ತಂಡ ತನ್ನ ಬೌಲಿಂಗ್ ಅಸ್ತ್ರದಿಂದ ಪಾಕಿಸ್ತಾನಕ್ಕೆ 89 ರನ್ಗಳ ಸೋಲುಣಿಸಿದೆ.
-
#Kohli is Not out 😡😡 pic.twitter.com/AQaMTeFpm6
— Bullet Pravin (@BulletPravin) June 16, 2019 " class="align-text-top noRightClick twitterSection" data="
">#Kohli is Not out 😡😡 pic.twitter.com/AQaMTeFpm6
— Bullet Pravin (@BulletPravin) June 16, 2019#Kohli is Not out 😡😡 pic.twitter.com/AQaMTeFpm6
— Bullet Pravin (@BulletPravin) June 16, 2019