ETV Bharat / sports

ವಿಂಬಲ್ಡನ್​: ಸೆರೆನಾಗೆ ಸುಲಭ ತುತ್ತಾದ ಸ್ಟ್ರಿಕೋವಾ; ಹಾಲೆಪ್​ ವಿರುದ್ಧ ಫೈನಲ್​ನಲ್ಲಿ ಪೈಪೋಟಿ

author img

By

Published : Jul 11, 2019, 9:36 PM IST

ಇಂದು ನಡೆದ ಸೆಮಿಫೈನಲ್​ನಲ್ಲಿ ಸೆರೆನಾ ವಿಲಿಯಮ್ಸ್,​ ಸ್ಟ್ರಿಕೋವಾ ವಿರುದ್ಧ ಯಾವುದೇ ಪ್ರತಿರೋಧ ತೋರದೆ 6-1,6-2 ರಲ್ಲಿ ಸುಲಭ ಜಯ ಸಾಧಿಸಿ ಫೈನಲ್​ಗೆ ಎಂಟ್ರಿ ಕೊಟ್ಟಿದ್ದಾರೆ.

Serena Williams

ವಿಂಬಲ್ಡನ್​(ಇಂಗ್ಲೆಂಡ್): 23 ಗ್ರ್ಯಾಂಡ್​ಸ್ಲಾಮ್​ ವಿಜೇತೆ ಸೆರೆನಾ ವಿಲಿಯಮ್ಸ್​ ವಿಂಬಲ್ಡನ್​ನ ಸೆಮಿಫೈನಲ್​ನಲ್ಲಿ ಜೆಕ್​ ಗಣರಾಜ್ಯದ ಬಾರ್ಬೊರಾ ಸ್ಟ್ರಿಕೋವಾ ವಿರುದ್ಧ ಗೆಲುವು ಸಾಧಿಸಿ 11ನೇ ಬಾರಿ ಫೈನಲ್​ ಪ್ರವೇಶಿಸಿದ್ದಾರೆ.

ಇಂದು ನಡೆದ ಸೆಮಿಫೈನಲ್​ನಲ್ಲಿ ಸೆರೆನಾ ವಿಲಿಯಮ್ಸ್,​ ಸ್ಟ್ರಿಕೋವಾ ವಿರುದ್ಧ ನಿರಾಯಾಸವಾಗಿ 6-1,6-2 ರಲ್ಲಿ ಸುಲಭ ಜಯ ಸಾಧಿಸಿ ಫೈನಲ್​ಗೆ ಎಂಟ್ರಿಕೊಟ್ಟಿದ್ದಾರೆ.

ಈಗಾಗಲೇ 23 ಗ್ರಾಂಡ್​ಸ್ಲಾಮ್​ ಗೆದ್ದರುವ ಸೆರೆನಾ ಅತಿ ಹೆಚ್ಚು ಗ್ರ್ಯಾಂಡ್​ಸ್ಲಾಮ್​ ಗೆದ್ದ ಮಹಿಳಾ ಟೆನ್ನಿಸ್​ ಆಟಗಾರ್ತಿ ಎನ್ನಿಸಿಕೊಳ್ಳಲು ಒಂದು ಗೆಲುವು ಬೇಕಾಗಿದೆ. 24 ಪ್ರಶಸ್ತಿ ಪಡೆದಿರುವ ಆಸ್ಟ್ರೇಲಿಯಾದ ಮಾರ್ಗರೇಟ್​ ಕೋರ್ಟ್​ ಅತಿ ಹೆಚ್ಚು ಗ್ರ್ಯಾಂಡ್​ಸ್ಲಾಮ್​ ಪ್ರಶಸ್ತಿ ಪಡೆದಿದ್ದಾರೆ.

ಮತ್ತೊಂದು ಸೆಮಿಫೈನಲ್​ನಲ್ಲಿ ರೊಮೇನಿಯಾದ ಆಟಗಾರ್ತಿ ಸಿಮೋನ್​ ಹಾಲೆಪ್​ ಉಕ್ರೇನ್​ನ ಎಲಿನಾ ಸ್ವಿಟೊಲಿನಾ ಅವರನ್ನು 6-1, 6-3 ರಲ್ಲಿ ಮಣಿಸುವ ಮೂಲಕ ಫೈನಲ್​ಗೆ ಎಂಟ್ರಿ ಕೊಟ್ಟಿದ್ದಾರೆ.

ಹಾಲೆಪ್​ ಜುಲೈ 13 ರಂದು ನಡೆಯುವ ಫೈನಲ್​ನಲ್ಲಿ ಅಮೆರಿಕಾದ ಸೆರೆನಾ ವಿಲಿಯಮ್ಸ್​ ಎದುರು ಸೆಣಸಾಡಲಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.