ETV Bharat / sports

ಆಸ್ಟ್ರೇಲಿಯನ್ ಓಪನ್​ ಬಹುಮಾನ ಮೊತ್ತದಲ್ಲಿ ಭಾರಿ ಏರಿಕೆ - 2020ರ ಆಸ್ಟ್ರೇಲಿಯನ್​ ಓಪನ್​ ಚಾಂಪಿಯನ್​ಶಿಪ್

2020ರ ಆಸ್ಟ್ರೇಲಿಯನ್​ ಓಪನ್​ನ ಮೊದಲ ಸುತ್ತಿಗೆ ಅರ್ಹತೆ ಪಡೆದವರು 20,000 ಆಸ್ಟ್ರೇಲಿಯನ್​ ಡಾಲರ್​ ಪಡೆಯಲಿದ್ದಾರೆ. ಇನ್ನು ನೇರ ಅರ್ಹತೆ ಪಡೆದಿದ್ದವರೂ ಮೊದಲ ಸುತ್ತಿನಲ್ಲಿ ಸೋತರೆ 90,000 ಆಸ್ಟ್ರೇಲಿಯನ್​ ಡಾಲರ್​  ಪಡೆಯಲಿದ್ದಾರೆ. ಚಾಂಪಿಯನ್​ಗಳು 4.1 ಮಿಲಿಯನ್ ಆಸ್ಟ್ರೇಲಿಯನ್​ ಡಾಲರ್​ ಪಡೆಯಲಿದ್ದಾರೆ.

Australian Open 2020
Australian Open 2020
author img

By

Published : Dec 24, 2019, 4:46 PM IST

Updated : Dec 24, 2019, 6:04 PM IST

ಮೆಲ್ಬೋರ್ನ್​: 2020ರ ಆಸ್ಟ್ರೇಲಿಯನ್​ ಓಪನ್​ ಚಾಂಪಿಯನ್​ಶಿಪ್​ನ ಬಹುಮಾನ ಮೊತ್ತವಾಗಿ 71 ಮಿಲಿಯನ್ ಆಸ್ಟ್ರೇಲಿಯನ್​ ಡಾಲರ್ (49.1 ಮಿಲಿಯಯನ್​ ಅಮೆರಿಕನ್​) ಡಾಲರ್​ ಮೀಸಲಿಡಲಾಗಿದೆ.

ಆಸ್ಟ್ರೇಲಿಯನ್​ ಓಪನ್​ನ ಪುರುಷರ ಮತ್ತು ಮಹಿಳೆಯರ ಸಿಂಗಲ್​ ವಿಭಾಗದ ವಿಜೇತರು 4.1 ಮಿಲಿಯನ್ ಆಸ್ಟ್ರೇಲಿಯನ್​ ಡಾಲರ್​ ಮೊತ್ತವನ್ನು ಪಡೆಯಲಿದ್ದಾರೆ. ಇದು ಕಳೆದ ಬಾರಿಯ ಮೊತ್ತಕ್ಕಿಂತ ಶೇ 13.6ರಷ್ಟು ಹೆಚ್ಚಾಗಿದೆ. 2010ರ ಬಹುಮಾನದ ಮೊತ್ತದ ಎರಡು ಪಟ್ಟು ಮೊತ್ತವನ್ನು 2020ರ ಚಾಂಪಿಯನ್​ಗಳು ಪಡೆಯಲಿದ್ದಾರೆ.

ಮೊದಲ ಸುತ್ತಿಗೆ ಅರ್ಹತೆ ಪಡೆದವರು 20,000 ಆಸ್ಟ್ರೇಲಿಯನ್​ ಡಾಲರ್​ ಪಡೆಯಲಿದ್ದಾರೆ. ಇನ್ನು ನೇರ ಅರ್ಹತೆ ಪಡೆದಿದ್ದವರೂ ಮೊದಲ ಸುತ್ತಿನಲ್ಲಿ ಸೋತರೆ 90,000 ಅಸ್ಟ್ರೇಲಿಯನ್​ ಡಾಲರ್​ ಪಡೆಯಲಿದ್ದಾರೆ.

ಆಸ್ಟ್ರೇಲಿಯನ್​ ಓಪನ್​ ಟೂರ್ನಮೆಂಟ್​ನ ಡೈರೆಕ್ಟರ್ ಕ್ರೈಗ್​ ಟೈಲಿ​ ಮಾತನಾಡಿ, ಅಂತಾರಾಷ್ಟ್ರೀಯ ಆಟಗಾರರು ಹೆಚ್ಚು ಟೂರ್ನಿಯಲ್ಲಿ ಭಾಗವಹಿಸುವಂತೆ ಮಾಡಲು ಬಹುಮಾನ ಹೆಚ್ಚಳವೂ ಒಂದು ಭಾಗವಾಗಿದೆ. 2007ರಲ್ಲಿ 20 ಮಿಲಿಯನ್​ ಆಸ್ಟ್ರೇಲಿಯನ್​ ಡಾಲರ್​ ಇದ್ದ ಬಹುಮಾನ ಮೊತ್ತ 71 ಮಿಲಿಯನ್ ಡಾಲರ್​ಗೆ ಹೆಚ್ಚಳವಾಗಿದೆ. ಅಂದರೆ ಸುಮಾರು 3 ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

Intro:Body:Conclusion:
Last Updated : Dec 24, 2019, 6:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.