ನವದಹಲಿ: ತಮಿಳುನಾಡಿನ ಇಳವೆನಿಲ್ ವಲೆರಿವನ್ ಬ್ರೆಜಿಲ್ನಲ್ಲಿ ನಡೆಯುತ್ತಿರುವ ಸೀನಿಯರ್ ಶೂಟಿಂಗ್ ವಿಶ್ವಕಪ್ನ 10 ಮೀಟರ್ ಏರ್ರೈಫಲ್ನಲ್ಲಿ ಚಿನ್ನದ ಪದಕಕ್ಕೆ ಗುರಿಯಿಟ್ಟಿದ್ದಾರೆ.
20 ವರ್ಷದ ಇಳವೆನಿಲ್ ಬುಧವಾರ ನಡೆದ ಫೈನಲ್ ಸುತ್ತಿನಲ್ಲಿ 251.7 ಅಂಕ ಪಡೆಯುವ ಮೂಲಕ ಮೊದಲ ಸ್ಥಾನಪಡೆದು ಚಿನ್ನದ ಪದಕ ಪಡೆದರು. ಫೈನಲ್ ಪ್ರವೇಶಿಸಿದ್ದ ಮತ್ತೊಬ್ಬ ಭಾರತೀಯ ಶೂಟರ್ ಅಂಜುಮ್ ಮೌದ್ಗಿಲ್ 166.8 ಅಂಕ ಪಡೆಯುವ ಮೂಲಕ 6ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಎರಡು ಬಾರಿಯ ವಿಶ್ವ ಚಾಂಪಿಯನ್ ಅಪೂರ್ವಿ ಚಂಡೇಲಾ 11ನೇ ಸ್ಥಾನಪಡೆದರು.
-
The first Gold at the Rio de Janeiro World Cup goes to India https://t.co/nwrcu3CGNS pic.twitter.com/pTks3kNNp5
— ISSF (@ISSF_Shooting) August 28, 2019 " class="align-text-top noRightClick twitterSection" data="
">The first Gold at the Rio de Janeiro World Cup goes to India https://t.co/nwrcu3CGNS pic.twitter.com/pTks3kNNp5
— ISSF (@ISSF_Shooting) August 28, 2019The first Gold at the Rio de Janeiro World Cup goes to India https://t.co/nwrcu3CGNS pic.twitter.com/pTks3kNNp5
— ISSF (@ISSF_Shooting) August 28, 2019
ಇಂಗ್ಲೆಂಡ್ನ ಸಿಯೋನೈಡ್ ಮಕಿನ್ಂಟೋಶ್ ಬೆಳ್ಳಿ ಹಾಗೂ ತೈವಾನ್ನಲಿನ್ ಯಿಂಗ್ - ಶಿನ್ ಕಂಚಿನ ಪದಕ ಪಡೆದರು.
ಇಳವೆನಿಲ್ ಜುಲೈನಲ್ಲಿ ಜರ್ಮನಿಯಲ್ಲಿ ನಡೆದಿದ್ದ ಜೂನಿಯರ್ ವಿಶ್ವಕಪ್ನ 10 ಮೀಟರ್ ಏರ್ರೈಫಲ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದೀಗ ಸೀನಿಯರ್ ವಿಭಾಗದಲ್ಲೂ ತಮಗಮ ಮೊದಲ ಪದಕ ಪಡೆದಿದ್ದಾರೆ.