ETV Bharat / sports

ದಬಾಂಗ್‌​ ಡೆಲ್ಲಿ ಗೆಲುವಿನ ಓಟ, ಗುಜರಾತ್​ ವಿರುದ್ಧ ಗೆದ್ದ ತಲೈವಾಸ್

ಪ್ರೊ ಕಬಡ್ಡಿ ಲೀಗ್​ನ ಅಹ್ಮದಾಬಾದ್ ​ಚರಣದಲ್ಲಿ ತಮಿಳ್‌ ತಲೈವಾಸ್‌, ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ಗೆ 34-28 ಅಂಕಗಳಿಂದ ಸೋಲುಣಿಸಿದ್ರೆ, ಎರಡನೇ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ 32-30 ಅಂತರದಿಂದ ಪುಣೇರಿಗೆ ಸೋಲುಣಿಸಿತು.

PKL 7
author img

By

Published : Aug 11, 2019, 9:53 AM IST

Updated : Aug 11, 2019, 4:10 PM IST

ಅಹ್ಮದಾಬಾದ್‌: ಪ್ರೊ ಕಬಡ್ಡಿ ಲೀಗ್​ನ ಅಹ್ಮದಾಬಾದ್ ​ಚರಣದಲ್ಲಿ ತಮಿಳ್‌ ತಲೈವಾಸ್‌ ತಂಡ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ನ್ನು 34-28 ಅಂಕಗಳಿಂದ ಮಣಿಸಿದೆ. ಎರಡನೇ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ 32-30 ಅಂತರದಿಂದ ಪುಣೇರಿಗೆ ಸೋಲುಣಿಸಿತು.

ಮೊದಲ ಪಂದ್ಯದಲ್ಲಿ ತಲೈವಾಸ್‌ ಸ್ಟಾರ್​ ರೈಡರ್‌ ಅಜಯ್‌ ಠಾಕೂರ್‌ (9) ರಾಹುಲ್‌ ಚೌಧರಿ (4) ಅತ್ಯುತ್ತಮ ರೈಡಿಂಗ್​ ಹಾಗೂ ಮೋಹಿತ್‌ ಚಿಲ್ಲಾರ್‌ (5 ಅಂಕ) ಮಂಜೀತ್‌ ಚಿಲ್ಲಾರ್‌ (4 ಅಂಕ) ಉತ್ತಮ ಟ್ಯಾಕಲ್‌ ನೆರವಿನಿಂದ 34-28 ರಲ್ಲಿ ಗುಜರಾತ್​ಗೆ ಸೋಲುಣಿಸಿತು.

PKL 7
ಅಜಯ್​ ಠಾಕೂರ್​ ರೈಡಿಂಗ್​

ಗುಜರಾತ್​ ರೈಡರ್‌ ರೋಹಿತ್‌ ಗುಲಿಯಾ (9), ಸುನೀಲ್‌ ಕುಮಾರ್‌ (6 ) ಮತ್ತು ಸಚಿನ್‌ (5) ಗುಜರಾತ್‌ ಗೆಲುವಿಗಾಗಿ ಹೋರಾಟ ಮಾಡಿದರೂ ತಲೈವಾಸ್​ ಕೌಶಲ್ಯದ ಮುಂದೆ ಸೋಲೊಪ್ಪಿಕೊಳ್ಳಬೇಕಾಯಿತು.

ದಬಾಂಗ್​ ಡೆಲ್ಲಿಗೆ ಮತ್ತೊಂದು ರೋಚಕ ಜಯ:

ನವೀನ್​ ಕುಮಾರ್​(11) ಚಂದ್ರನ್​ ರಂಜಿತ್​ (8) ಸೂಪರ್​ ರೈಡಿಂಗ್‌ನಲ್ಲೂ, ರವೀಂದ್ರ ಪಹಲ್​(3) ವಿಶಾಲ್ ಮಾನೆ(2) ಹಾಗೂ ವಿಜಯ್​(2) ಅಮೋಘ ಟ್ಯಾಕಲ್‌ ನೆರವಿಂದ ದಬಾಂಗ್​ ಡೆಲ್ಲಿ 32-30 ರಿಂದ ಪಲ್ಟ​ನ್​ಗೆ ಶಾಕ್​ ನೀಡಿತು.

ಕೊನೆಯವೆರೆಗೂ ಗೆಲುವಿಗಾಗಿ ಹೋರಾಡಿದ ಪಲ್ಟನ್​ ಪರ ನಿತಿನ್​ ತೋಮರ್​ 8, ಪಂಕಜ್​ ಮೋಹಿತ್​ 7 ಮಂಜೀತ್​ 6 ಗಿರೀಶ್​ 4 ಅಂಕ ಪಡೆದರೂ 2 ಅಂಕಗಳ ಹಿನ್ನೆಡೆ ಅನುಭವಿಸಿ ತಂಡ ಸೋಲೊಪ್ಪಿಕೊಂಡಿತು.

Intro:Body:Conclusion:
Last Updated : Aug 11, 2019, 4:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.