ETV Bharat / sports

Tokyo Paralympics: ಟೇಬಲ್ ಟೆನ್ನಿಸ್​ನಲ್ಲಿ ಚೀನಾ ವಿರುದ್ಧ ಭಾರತದ ಭಾವಿನಾ ಪಟೇಲ್​​ಗೆ ಸೋಲು

ಟೋಕಿಯೋ ಪ್ಯಾರಾಲಿಂಪಿಕ್ಸ್‌ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಭಾರತದ ಆಟಗಾರ್ತಿ ಭಾವಿನಾಬೆನ್​​ ಪಟೇಲ್​ ಚೀನಾದ ಝೌ ಯಿಂಗ್ ಅವರ ವಿರುದ್ಧ ಪರಾಭವಗೊಂಡಿದ್ದಾರೆ.

tokyo-paralympics-2020-zhou-ying-beat-bhavina-by-3-0-in-table-tennis
Tokyo Paralympics: ಟೇಬಲ್ ಟೆನ್ನಿಸ್​ನಲ್ಲಿ ಚೀನಾ ವಿರುದ್ಧ ಪರಾಭವಗೊಂಡ ಭಾವಿನಾ ಪಟೇಲ್​​
author img

By

Published : Aug 25, 2021, 2:18 PM IST

ಟೋಕಿಯೋ(ಜಪಾನ್): ಭಾರತ ಪ್ಯಾರಾ ಟೇಬಲ್ ಟೆನ್ನಿಸ್ ಆಟಗಾರ್ತಿ ಭಾವಿನಾಬೆನ್ ಪಟೇಲ್ ಚೀನಾದ ಝೌ ಯಿಂಗ್ ವಿರುದ್ಧ 3-0 ಅಂತರದಲ್ಲಿ ಸೋಲು ಅನುಭವಿಸಿದರು. ಮಹಿಳಾ ಸಿಂಗಲ್ಸ್​ನ A ಗುಂಪಿನ ಮೊದಲ ಪಂದ್ಯದಲ್ಲಿ ಭಾವಿನಾಬೆನ್ ನೇರ ಸೆಟ್​​ಗಳಿಂದ ಸೋಲೊಪ್ಪಿಕೊಂಡರು.

2008 ಮತ್ತು 2012ರ ಒಲಿಂಪಿಕ್ ಚಾಂಪಿಯನ್ ಝೌ ಯಿಂಗ್ ಕೇವಲ 18 ನಿಮಿಷಗಳಲ್ಲಿ ಭಾವಿನಾ ಪಟೇಲ್ ಅವರನ್ನು 3-0 (11-3, 11-9, 11-2) ನೇರ ಸೆಟ್‌ಗಳಿಂದ ಸೋಲಿಸಿದ್ದು, ಗುರುವಾರ ಗ್ರೇಟ್​ ಬ್ರಿಟನ್​ನ ಮೇಗನ್ ಶಾಕ್ಲೆಟನ್​​ ವಿರುದ್ಧ ಸ್ಪರ್ಧಿಸಲಿದ್ದಾರೆ.

ಇಂದು ಬೆಳಗ್ಗೆ ಪ್ಯಾರಾ ಟೇಬಲ್ ಟೆನ್ನಿಸ್​ ಆಟಗಾರ್ತಿ ಸೋನಾಲ್​ಬೆನ್ ಪಟೇಲ್ ವಿಶ್ವದ 4ನೇ ಶ್ರೇಯಾಂಕದಲ್ಲಿರುವ ಕಿಯಾನ್ ಲಿ ಅವರ ವಿರುದ್ಧ ನಿರಾಶೆ ಅನುಭವಿಸಿದ್ದರು. 3-2 ಸೆಟ್​ಗಳ ಅಂತರದಿಂದ ಪಟೇಲ್ ಸೋತಿದ್ದು, ಎರಡನೇ ಗುಂಪಿನ ಡಿ ಪಂದ್ಯದಲ್ಲಿ ಗುರುವಾರ ದಕ್ಷಿಣ ಕೊರಿಯಾದ ಮಿ ಗಿಯು ಲೀ ವಿರುದ್ಧ ಸೆಣಸಲಿದ್ದಾರೆ.

ಇದನ್ನೂ ಓದಿ: Tokyo Paralympics: ಟೇಬಲ್ ಟೆನ್ನಿಸ್​​ನಲ್ಲಿ ಪರಾಭವಗೊಂಡ ಸೋನಾಲ್​ಬೆನ್​ ಪಟೇಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.