ETV Bharat / sports

Tokyo Olympics: ಟೇಬಲ್ ಟೆನ್ನಿಸ್‌ನಲ್ಲಿ 3ನೇ ಸುತ್ತು ಪ್ರವೇಶಿಸಿದ ಭಾರತದ ಮನಿಕಾ ಬಾತ್ರಾ - ಭಾರತದ ಸ್ಟಾರ್​ ಪ್ಯಾಡ್ಲರ್​ ಮನಿಕಾ ಬಾತ್ರಾ

ಭಾರತದ ಸ್ಟಾರ್​ ಪ್ಯಾಡ್ಲರ್​ ಮನಿಕಾ ಬಾತ್ರಾ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ. 2ನೇ ಸುತ್ತಿನಲ್ಲಿ ಉಕ್ರೇನ್​ ಆಟಗಾರ್ತಿಯ ವಿರುದ್ಧ ಅವರು 4-3ರಲ್ಲಿ ಗೆಲುವು ಸಾಧಿಸಿದರು.

ಮನಿಕಾ ಬಾತ್ರಾ
ಮನಿಕಾ ಬಾತ್ರಾ
author img

By

Published : Jul 25, 2021, 2:40 PM IST

Updated : Jul 25, 2021, 3:09 PM IST

ಟೋಕಿಯೋ: ಭಾರತದ ಟೇಬಲ್ ಟೆನ್ನಿಸ್‌ ಆಟಗಾರ್ತಿ ಮನಿಕಾ ಬಾತ್ರಾ ಉಕ್ರೇನ್​ನ ಮಾರ್ಗರಿಟಾ ಪೆಸೊಟ್ಸ್ಕಾ ವಿರುದ್ಧ ಗೆಲುವು ಸಾಧಿಸುವ ಮೂಲಕ 3ನೇ ಸುತ್ತು ಪ್ರವೇಶಿಸಿದ್ದಾರೆ.

ಭಾನುವಾರ ನಡೆದ ಪಂದ್ಯದಲ್ಲಿ ಮನಿಕಾ ಉಕ್ರೇನ್​ ಆಟಗಾರ್ತಿ ಎದುರು ಮೊದಲೆರಡು ಗೇಮ್​ಗಳಲ್ಲಿ 4-11, 4-11 ರಲ್ಲಿ ಸೋಲು ಕಂಡರು. ಆದರೆ ನಂತರ ಕಮ್​ಬ್ಯಾಕ್ ಮಾಡಿದ್ದು 11-7ರಲ್ಲಿ ಮೂರನೇ ಆಟ ಗೆದ್ದರು.

ನಾಲ್ಕನೇ ಸುತ್ತು ಇಬ್ಬರು ಆಟಗಾರ್ತಿಯರ ನಡುವೆ ಪ್ರಬಲ ಪೈಪೋಟಿ ಕಂಡುಬಂತಾದರೂ ಮನಿಕಾ 12-10ರಲ್ಲಿ ಜಯ ಸಾಧಿಸಿ ಪಂದ್ಯವನ್ನು 2-2ರಲ್ಲಿ ಸಮಬಲಕ್ಕೆ ತಂದರು.

61ನೇ ಶ್ರೇಯಾಂಕದ ಭಾರತೀಯ ಆಟಗಾರ್ತಿ ಮತ್ತೆ 5ನೇ ಗೇಮ್​ನಲ್ಲಿ 8-11ರಿಂದ ಕಳೆದುಕೊಂಡು ಹಿನ್ನಡೆ ಅನುಭವಿಸಿದರು. ಆದರೆ ಸೋಲೊಪ್ಪಿಕೊಳ್ಳದ ಮನಿಕಾ 6 ಮತ್ತು 7ನೇ ಗೇಮ್​ಗಳನ್ನು ಕ್ರಮವಾಗಿ 11-5 ಮತ್ತು 11-7ರಲ್ಲಿ ಗೆದ್ದು ವಿಶ್ವದ 32 ನೇ ಶ್ರೇಯಾಂಕದ ಆಟಗಾರ್ತಿಗೆ ಆಘಾತಕಾರಿ ರೀತಿಯಲ್ಲಿ ಸೋಲುಣಿಸಿ 3ನೇ ಸುತ್ತಿಗೆ ತೇರ್ಗಡೆಯಾದರು.

ಪುರುಷರ 2ನೇ ಸುತ್ತಿನ ಪಂದ್ಯದಲ್ಲಿ ಸತಿಯಾನ್ ಜ್ಞಾನಶೇಖರನ್​ ಸೋಲು ಕಂಡು ಟೂರ್ನಿಯಿಂದ ನಿರ್ಗಮಿಸಿದ್ದಾರೆ.
ಇದನ್ನೂ ಓದಿ: Tokyo Olympics: ಭಾರತದ ಸ್ಟಾರ್​ ಬಾಕ್ಸರ್​ ಮೇರಿ ಕೋಮ್ ಪ್ರಿಕ್ವಾರ್ಟರ್​​ ಪ್ರವೇಶ

Last Updated : Jul 25, 2021, 3:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.