ETV Bharat / sports

Tokyo Olympics: ಶೂಟರ್​ ಸೌರಭ್​ ಚೌಧರಿ 7ನೇ ಸ್ಥಾನ - ಟೋಕಿಯೋ ಒಲಿಂಪಿಕ್ಸ್​ 2020 ಲೈವ್​

ಭಾರತದ ಪುರುಷರ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್​ನಲ್ಲಿ ಗೆಲುವಿನೊಂದಿಗೆ ಉತ್ತಮ ಆರಂಭ ಕಂಡಿದೆ. ವೇಟ್​ ಲಿಫ್ಟಿಂಗ್​ನಲ್ಲಿ ಮೀರಾಬಾಯಿ ಚಾನು ದಾಖಲೆ ಸೃಷ್ಟಿಸಿ, ಬೆಳ್ಳಿ ಗೆದ್ದಿದ್ದು, 10 ಮೀಟರ್​ ಏರ್​ ಪಿಸ್ತೂಲ್ ವಿಭಾಗದಲ್ಲಿ ಸೌರಭ್ ಚೌಧರಿ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.

Tokyo Olympics, Day 2 (Shooting): Saurabh Chaudhary through to finals, Abhishek out
Tokyo Olympics: ಶೂಟರ್​ ಸೌರಭ್​ ಚೌಧರಿ ಫೈನಲ್​ಗೆ, ಅಭಿಷೇಕ್​ಗೆ ನಿರಾಸೆ
author img

By

Published : Jul 24, 2021, 1:38 PM IST

Updated : Jul 24, 2021, 2:33 PM IST

ಟೋಕಿಯೋ, ಜಪಾನ್: ಭಾರತದ ಅತ್ಯಂತ ಭರವಸೆಯ ಆಟಗಾರ, ಶೂಟಿಂಗ್ ಸ್ಪರ್ಧಿ ಸೌರಭ್ ಚೌಧರಿ ಪುರುಷರ 10 ಮೀಟರ್ ಏರ್ ಪಿಸ್ತೂಲ್​ ಪಂದ್ಯದಲ್ಲಿ ಏಳನೇ ಸ್ಥಾನ ಪಡೆದಿದ್ದಾರೆ.

ಸೌರಭ್ ಚೌಧರಿ ಕ್ವಾಲಿಫೈಯರ್​ನಲ್ಲಿ ಮೊದಲಿಗರಾಗಿ ಫೈನಲ್ ತಲುಪಿದ್ದರು. ಅವರು ಸಿರೀಸ್ ಸಿಕ್ಸ್ ವಿಭಾಗದಲ್ಲಿ ಗಳಿಸಿದ 586 ಸ್ಕೋರ್​ ಒಲಿಂಪಿಕ್ ರೆಕಾರ್ಡ್​​ಗೆ ಸನಿಹದಲ್ಲಿತ್ತು. ಹೀಗಾಗಿ ಪದಕ ಪಡೆಯುವ ಭರವಸೆಯ ಕ್ರೀಡಾಪಟುಗಳ ಪಟ್ಟಿಯಲ್ಲಿ ಸೌರಭ್ ಚೌಧರಿ ಕೂಡಾ ಇದ್ದರು. ಆದರೆ ಫೈನಲ್ ಪಂದ್ಯದಲ್ಲಿ ಅವರು ಏಳನೇ ಸ್ಥಾನ ಪಡೆದಿದ್ದಾರೆ.

ಮತ್ತೊಂದೆಡೆ, ಮತ್ತೊಬ್ಬ ಶೂಟರ್ ಅಭಿಷೇಕ್ ವರ್ಮಾ ಸ್ವಲ್ಪ ಮಟ್ಟಿಗೆ ತಮ್ಮ ಗುರಿಯನ್ನು ಮೊನಚುಗೊಳಿಸಿಕೊಂಡರಾದರೂ, ಕೇವಲ 575 ಸ್ಕೋರ್​ ಗಳಿಸಿ, ಫೈನಲ್​ಗೆ ಅರ್ಹತೆ ಪಡೆಯಲು ವಿಫಲರಾದರು.

ಇದನ್ನೂ ಓದಿ: Tokyo Olympics- ಭಾರತಕ್ಕೆ ಮೊದಲ ಪದಕ : ಬೆಳ್ಳಿ Medal​​ ಗೆದ್ದ ವೇಟ್​ ಲಿಫ್ಟರ್​ ಮೀರಾಬಾಯಿ ಚಾನು

Last Updated : Jul 24, 2021, 2:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.