ಟೋಕಿಯೋ: ಭಾರತ ತಾಜಿಂದರ್ಪಾಲ್ ಸಿಂಗ್ ಥೋರ್ ಶಾಟ್ಪುಟ್ ವಿಭಾಗದಲ್ಲಿ ಫೈನಲ್ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಮಂಗಳವಾರ ನಡೆದ ಮೊಲದ ಗುಂಪಿನ ಅರ್ಹತಾ ಸುತ್ತಿನ 16 ಮಂದಿಯ ಸ್ಪರ್ಧೆಯಲ್ಲಿ ಭಾರತದ ಗುಂಡು ಎಸೆತಗಾರ ತನ್ನ ಮೂರು ಅವಕಾಶಗಳಲ್ಲಿ ಒಮ್ಮೆಯೂ 20 ಮೀಟರ್ ಗಡಿದಾಟಲಿಲ್ಲ. ಮೊದಲ ಅವಕಾಶದಲ್ಲಿ 19.99 ಮೀಟರ್ ಎಸೆದರೆ, ಉಳಿದ ಎರಡು ಅವಕಾಶಗಳಲ್ಲಿ ಪೋಲ್ ಮಾಡಿಕೊಂಡರು. ಒಟ್ಟಾರೆ 13 ಮಂದಿಯ ಪೈಪೋಟಿಯಲ್ಲಿ ಅವರು 13ನೇ ಸ್ಥಾನ ಪಡೆದರು.
ಫೈನಲ್ ಪ್ರವೇಶಿಸಲು 21.20 ಮೀಟರ್ ದೂರ ಎಸೆಯಬೇಕಿತ್ತು ಅಥವಾ 32 ಎಸೆತಗಾರರ ಪೈಕಿ ಮೊದಲ 12 ಮಂದಿಗೆ ಮಾತ್ರ ಫೈನಲ್ ಪ್ರವೇಶಿಸಲು ಅವಕಾಶವಿತ್ತು. ಎ ಗುಂಪಿನಲ್ಲಿ ಬ್ರೆಜಿಲ್ನ ರೊಮಾನಿ ಡಾರ್ಲನ್ ಮಾತ್ರ 21.31 ದೂರ ಎಸೆದು ನೇರ ಅರ್ಹತೆ ಪಡೆದಿದ್ದಾರೆ.
ತಾಜಿಂದರ್ ಅವರ ವೈಯಕ್ತಿಕ ದಾಖಲೆ 21.49 ಇದ್ದು, ಇಷ್ಟು ದೂರ ಎಸೆದಿದ್ದರೆ ಫೈನಲ್ಗೆ ಅರ್ಹತೆ ಪಡೆಯುತ್ತಿದ್ದರು.
ಇದನ್ನೂ ಓದಿ: ಒಲಿಂಪಿಕ್ಸ್ ಫೈನಲ್ನಲ್ಲಿ ನಿರಾಸೆ: ರಾಜ್ಯದ ಫೌವಾದ್ಗೆ 23ನೇ ಸ್ಥಾನ, 6ನೇ ಸ್ಥಾನಕ್ಕೆ ತೃಪ್ತಿಪಟ್ಟ ಕಮಲ್ಪ್ರೀತ್ ಕೌರ್