ETV Bharat / sports

Tokyo Paralympics: ಫ್ರೀ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟ ಆರ್ಚರ್​ ರಾಕೇಶ್ ಕುಮಾರ್​ - ಆರ್ಚರಿ

ಕುಮಾರ್​ ಹಿಂದಿನ ದಿನವಷ್ಟೇ ಅರ್ಹತಾ ಸುತ್ತಿನಲ್ಲಿ 720 ಅಂಕಗಳಲ್ಲಿ 699 ಪಡೆದಿದ್ದರು. ವೀಲ್​ಚೇರ್​ ವಿಭಾಗದಲ್ಲಿ 36 ವರ್ಷದ ಕುಮಾರ್ ಹಾಂಕಾಂಗ್‌ನ ಕಾ ಚುಯೆನ್ ನ್ಗಾಯ್ ಅವರನ್ನು 13 ಅಂಕಗಳ ಅಂತರದಿಂದ ಸುಲಭವಾಗಿ ಜಯಿಸಿ ಪ್ರೀ ಕ್ವಾರ್ಟರ್​ ಫೈನಲ್ಸ್​ಗೆ ಲಗ್ಗೆಯಿಟ್ಟರು.

Tokyo Paralympics
ಫ್ರೀ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟ ಆರ್ಚರ್​ ರಾಕೇಶ್ ಕುಮಾರ್​
author img

By

Published : Aug 28, 2021, 3:31 PM IST

ಟೋಕಿಯೋ: ಶನಿವಾರ ಭಾರತೀಯ ಆರ್ಚರ್​ಗಳಿಗೆ ಮಿಶ್ರದಿನವಾಗಿದೆ. ಭಾರತದ ಪ್ಯಾರಾ ಆರ್ಚರ್​ ರಾಕೇಶ್​ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದು, ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್​ನಲ್ಲಿ ಪ್ರೀ ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದ್ದಾರೆ. ಆದರೆ ಶ್ಯಾಮ್​ ಸುಂದರ್​​ ಸ್ವಾಮಿ 2ನೇ ಸುತ್ತಿನ ಪಂದ್ಯದಲ್ಲಿ ಸೋಲು ಕಂಡು ನಿರಾಶೆಯನುಭವಿಸಿದ್ದಾರೆ.

ಕುಮಾರ್​ ಹಿಂದಿನ ದಿನವಷ್ಟೇ ಅರ್ಹತಾ ಸುತ್ತಿನಲ್ಲಿ 720 ಅಂಕಗಳಲ್ಲಿ 699 ಪಡೆದಿದ್ದರು. ವೀಲ್​ಚೇರ್​ ವಿಭಾಗದಲ್ಲಿ 36 ವರ್ಷದ ಕುಮಾರ್ ಹಾಂಕಾಂಗ್‌ನ ಕಾ ಚುಯೆನ್ ನ್ಗಾಯ್ ಅವರನ್ನು 13 ಅಂಕಗಳ ಅಂತರದಿಂದ ಸುಲಭವಾಗಿ ಜಯಿಸಿ ಪ್ರೀ ಕ್ವಾರ್ಟರ್​ ಫೈನಲ್ಸ್​ಗೆ ಲಗ್ಗೆಯಿಟ್ಟರು.

ಈ ವರ್ಷದ ಆರಂಭದಲ್ಲಿ ದುಬೈನಲ್ಲಿ ನಡೆದಿದ್ದ 7ನೇ ಫಾಜಾ ಪ್ಯಾರಾ ಆರ್ಚರಿ ವಿಶ್ವ ರ್ಯಾಂಕಿಂಗ್ ಟೂರ್ನಮೆಂಟ್​​ನಲ್ಲಿ ರಾಕೇಶ್​ ಚಿನ್ನದ ಪದಕ ಗೆದ್ದಿದ್ದರು. ಮಂಗಳವಾರ ನಡೆಯುವ 16ರ ಸುತ್ತಿನಲ್ಲಿ 14ನೇ ಶ್ರೇಯಾಂಕದ ಸ್ಲೊವಾಕಿಯಾ 49 ವರ್ಷದ ಆರ್ಚರ್​ ಮರಿಯಾನ್ ಮರೆಕಾಕ್​ ವಿರುದ್ಧ ಸೆಣಸಾಡಲಿದ್ದಾರೆ.

ಇದಕ್ಕು ಮುನ್ನ ಬೈ ಮೂಲಕ 2ನೇ ಸುತ್ತು ಪ್ರವೇಶಿಸಿದ್ದ 21ನೇ ಶ್ರೇಯಾಂಕದ ಸುಂದರ್​ 142-139ರ ಅಂತರದಲ್ಲಿ ಅಮೆರಿಕಾದ 2012ರ ಪ್ಯಾರಾಲಿಂಪಿಕ್ಸ್​​ ಬೆಳ್ಳಿ ಪದಕ ವಿಜೇತ ಮಟ್​ ಸ್ಟಟ್ಜ್​ಮನ್​ ವಿರುದ್ಧ ಸೋಲು ಕಂಡರು.

ಇದನ್ನು ಓದಿ:ಇತಿಹಾಸ ಬರೆದ ಭಾವಿನಾ ಪಟೇಲ್​.. ಪ್ಯಾರಾಲಿಂಪಿಕ್ಸ್​​ನಲ್ಲಿ ಭಾರತಕ್ಕೆ ಮೊದಲ ಪದಕ ಖಚಿತ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.