ETV Bharat / sports

Paralympics: ಭಾರತಕ್ಕೆ ಮತ್ತೊಂದು ಪದಕ ಖಚಿತ.. ಪ್ರಮೋದ್ ಭಗತ್ Badminton ಫೈನಲ್ ಪ್ರವೇಶ - Pramod Bhagat enters final ,

ಪ್ಯಾರಾಲಿಂಪಿಕ್​ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದೆ. ಈಗ ಬ್ಯಾಡ್ಮಿಂಟನ್ ಪುರುಷರ ​ ಸಿಂಗಲ್ಸ್​ ವಿಭಾಗದಲ್ಲಿ ಇನ್ನೊಂದು ಪದಕ ಖಚಿತವಾಗಿದ್ದು, ಫೈನಲ್ ಹಣಾಹಣಿ ಮೇಲೆ ಎಲ್ಲರ ದೃಷ್ಟಿನೆಟ್ಟಿದೆ.

pramod-bhagat
ಪ್ರಮೋದ್ ಭಗತ್
author img

By

Published : Sep 4, 2021, 7:22 AM IST

Updated : Sep 4, 2021, 9:14 AM IST

ಟೋಕಿಯೋ (ಜಪಾನ್): ಪ್ಯಾರಾಲಿಂಪಿಕ್​ನಲ್ಲಿ ಭಾರತದ ಯಶಸ್ಸಿನ ನಾಗಾಲೋಟ ಮುಂದುವರಿದಿದೆ. ಇದೀಗ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಪ್ರಮೋದ್ ಭಗತ್ ಫೈನಲ್ ಪ್ರವೇಶಿಸಿದ್ದಾರೆ.

ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ. ಈಗಾಗಲೇ ಭಾರತ 13 ಪದಕ ಗೆದ್ದುಕೊಂಡು ಪದಕ ಪಟ್ಟಿಯಲ್ಲಿ 37ನೇ ಸ್ಥಾನದಲ್ಲಿದೆ. ಪ್ರಮೋದ್​ ಭಗತ್ ಸೆಮಿ ಫೈನಲ್​ನಲ್ಲಿ ಜಪಾನ್​​​ನ ಡೈಸೂಕ್ ಫುಜಿಹಾರ್ ವಿರುದ್ಧ ಗೆಲುವು ಸಾಧಿಸಿ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ.

21-11, 21-16 ನೇರ ಸೆಟ್​​ಗಳ ಮೂಲಕ ಫೈನಲ್ ಪ್ರವೇಶಿಸಿದ್ದಾರೆ. ಮೊದಲ ಸೆಟ್​​​ನಲ್ಲಿ ಜಪಾನ್​ ಸ್ಪರ್ಧಾಳು 2 ಅಂಕಗಳ ಮುನ್ನಡೆ ಸಾಧಿಸಿದ್ದರು, ಆದರೆ ಕೆಲವೇ ಹೊತ್ತಲ್ಲಿ ಪ್ರಮೋದ್ ಮುನ್ನಡೆ ಕಾಯ್ದಕೊಂಡರು. ಇದಾದ ಬಳಿಕ ಜಪಾನ್​ ಶಟ್ಲರ್​ ಹಿಂದೆಯೇ ಉಳಿದರು. 2ನೇ ಸುತ್ತಿನಲ್ಲಿ ಕೇವಲ 21 ನಿಮಿಷದಲ್ಲಿಯೇ ಸೆಟ್​ ಪಾಯಿಂಟ್ ತಮ್ಮದಾಗಿಸಿಕೊಂಡರು.

ಓದಿ: Tokyo Paralympics: ಆರ್ಚರಿಯಲ್ಲಿ ಮೊದಲ ಕಂಚಿನ ಪದಕ ತಂದುಕೊಟ್ಟ ಹರ್ವಿಂದರ್ ಸಿಂಗ್

Last Updated : Sep 4, 2021, 9:14 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.