ಟೋಕಿಯೋ(ಜಪಾನ್): ಭಾರತದ ಪ್ಯಾರಾಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್ ಟೋಕಿಯೋ ಪ್ಯಾರಾಲಿಂಪಿಕ್ಸ್ನ ಪಂದ್ಯದಲ್ಲಿ ಉಕ್ರೇನ್ನ ಒಲೆಕ್ಸಾಂಡರ್ ಚೈರ್ಕೋವ್ ಅವರನ್ನು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಮಣಿಸುವ ಮೂಲಕ ಸೆಮಿಫೈನಲ್ಗೆ ಪ್ರವೇಶಿಸಿದ್ದಾರೆ.
ಹಾಲಿ ವಿಶ್ವ ಚಾಂಪಿಯನ್ ಆಗಿರುವ ಪ್ರಮೋದ್ ಭಗತ್ 26 ನಿಮಿಷಗಳಲ್ಲಿ 21-12 21-9 ಸೆಟ್ಗಳ ಅಂತರದಿಂದ ಒಲೆಕ್ಸಾಂಡರ್ ಚೈರ್ಕೋವ್ ಅವರನ್ನು ಸೋಲಿಸಿದರು. ಈ ಮೂಲಕ ಕೊನೆಯ ನಾಲ್ಕರ ಹಂತ ತಲುಪಿದರು.
ಪಂದ್ಯದ ನಂತರ ಪ್ರತಿಕ್ರಿಯೆ ನೀಡಿದ ಪ್ರಮೋದ್ ಭಗತ್, ನಾನು ಚೆನ್ನಾಗಿ ಆಡಿದ್ದೇನೆ. ಒಲೆಕ್ಸಾಂಡರ್ ಚೈರ್ಕೋವ್ ಉತ್ತಮ ಆಟಗಾರ ಮತ್ತು ಈ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದಾರೆ. ಸೆಮಿಫೈನಲ್ ತಲುಪಿದ್ದಕ್ಕೆ ತುಂಬಾ ಸಂತೋಷವಾಗಿದೆ. ನಾಕೌಟ್ ಪಂದ್ಯಗಳು ಆರಂಭವಾಗುತ್ತಿದ್ದಂತೆ ಸ್ಪರ್ಧೆ ಕಠಿಣವಾಗಲಿದೆ. ಈ ಪಂದ್ಯದ ಮೇಲೆ ನನ್ನ ಗಮನವಿದೆ. ಮಿಶ್ರ ಡಬಲ್ಸ್ ಕೊನೆಯ ಲೀಗ್ ಪಂದ್ಯ ಆಡುತ್ತಿದ್ದು, ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿ ಉಂಟಾಗಿದೆ ಎಂದಿದ್ದಾರೆ.
ಪ್ರಮೋದ್ ಭಗತ್ ಜೊತೆಗೆ ಪಲಕ್ ಕೊಹ್ಲಿ ಮಿಶ್ರ ಡಬಲ್ನ SL3-SU5 ಹಂತದ ಪಂದ್ಯದಲ್ಲಿ ಥಾಯ್ಲೆಂಡ್ನ ಸಿರಿಪಾಂಗ್ ಟೀಮಾರ್ಮ್ ಮತ್ತು ನಿಪಾಡಾ ಸೇನ್ಸುಪಾ ಅವರ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನು ಶುಕ್ರವಾರ ಆಡಲಿದ್ದಾರೆ.
ಇತರ ಭಾರತೀಯ ಶಟ್ಲರ್ಗಳಾದ ಸುಹಾಸ್ ಯತಿರಾಜ್, ತರುಣ್ ಧಿಲ್ಲೋನ್ ಮತ್ತು ಕೃಷ್ಣಾ ನಗರ್ (Krishna Nagar) ಪುರುಷರ ಸಿಂಗಲ್ಸ್ನಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಸುಹಾಸ್ ಮತ್ತು ತರುಣ್ ಎಸ್ಎಲ್-4 ಹಂತದ ಪಂದ್ಯದಲ್ಲಿ ಕ್ರಮವಾಗಿ ಜರ್ಮನಿಯ ಜಾನ್ ನಿಕ್ಲಾಸ್ ಪಾಟ್ ಮತ್ತು ಥೈಲ್ಯಾಂಡ್ನ ಸಿರಿಪಾಂಗ್ ಟೀಮಾರ್ಮ್ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಬಹುತೇಕ ಬ್ಯಾಡ್ಮಿಂಟನ್ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಿದ್ದು, ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಪದಕದ ಭರವಸೆಯನ್ನು ಮೂಡಿಸುತ್ತಿದ್ದಾರೆ.
ಇದನ್ನೂ ಓದಿ: Tokyo Paralympics: ಕ್ವಾರ್ಟರ್ ಫೈನಲ್ನಿಂದ ಹೊರಬಿದ್ದ ಟೇಕ್ವಾಂಡೋ ಪಟು ಅರುಣಾ ತನ್ವಾರ್