ಟೋಕಿಯೋ(ಜಪಾನ್): 2012ರಲ್ಲಿ ನಡೆದಿದ್ದ ಅಪಘಾತದಲ್ಲಿ ಗಾಯಗೊಂಡಿದ್ದ ಅವಾನಿ ಲೇಖರಾ ಇಂದು ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಜೊತೆಗೆ ಪ್ಯಾರಾಲಿಂಪಿಕ್ಸ್ ಶೂಟಿಂಗ್‌ನಲ್ಲಿ ದೇಶಕ್ಕೆ ಸ್ವರ್ಣ ಪದಕ ತಂದುಕೊಟ್ಟ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವಾನಿ, ನಾನು ಈ ಭಾವನೆಯನ್ನು ವಿವರಿಸಲು ಸಾಧ್ಯವಿಲ್ಲ. ವಿಶ್ವದಲ್ಲೇ ಅಗ್ರಸ್ಥಾನದಲ್ಲಿ ಇದ್ದೇನೆ ಎಂದು ನನಗೆ ಅನಿಸುತ್ತಿದೆ. ಇದು ಅತ್ಯಂತ ವರ್ಣನಾತೀತವಾಗಿದೆ ಎಂದು ಗೆಲುವಿನ ಬಳಿಕ ಸಂತಸವನ್ನು ಹಂಚಿಕೊಂಡಿದ್ದಾರೆ.
ಫೈನಲ್ ಪಂದ್ಯದಲ್ಲಿ ಶಾಂತವಾಗಿ ಆಡಿದ್ದೆ. ಒಂದು ಸಮಯದಲ್ಲಿ ಒಂದೇ ಶಾಟ್ ತೆಗೆದುಕೊಂಡು ಗುರಿ ಮುಟ್ಟಿದ್ದೇನೆ. ಇನ್ನೂ ಕೆಲ ಪ್ರಕ್ರಿಯೆಗಳನ್ನು ಅನುಸರಿಸಬೇಕು ಎಂದು ನಾನು ಭಾವಿಸುತ್ತೇನೆ. ಸ್ಕೋರ್ ಅಥವಾ ಪದಕ ಗಳಿಕೆಯ ಬಗ್ಗೆ ಯೋಚಿಸದಿರಲು ಪ್ರಯತ್ನಿಸುತ್ತೇನೆ ಎಂದು ಮನದ ಮಾತನ್ನು ಹೇಳಿದ್ದಾರೆ.
ಜೈಪುರದ 19 ವರ್ಷದ ಅವಾನಿ ತನ್ನ ತಂದೆಯ ಒತ್ತಾಯದ ಮೇರೆಗೆ 2015 ರಲ್ಲಿ ನಗರದ ಶೂಟಿಂಗ್ ರೇಂಜ್‌ನಲ್ಲಿ ಶೂಟಿಂಗ್ ಆರಂಭಿಸಿದ್ದೆ. ಪ್ಯಾರಾಲಿಂಪಿಕ್ಸ್ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದೇನೆ. ಇದಕ್ಕೆ ನಾನು ನೀಡಿದ ಕೊಡುಗೆಗಾಗಿ ತುಂಬಾ ಸಂತೋಷವಾಗಿದೆ. ಇನ್ನೂ ಹೆಚ್ಚಿನ ಪದಕಗಳು ಬರಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ನಾನು ರೈಫಲ್ ಅನ್ನು ಎತ್ತಿದಾಗ ಅದು ತುಂಬಾ ಸ್ವಾರಸ್ಯಕರವಾಗಿ ಕಾಣುತ್ತದೆ. ಅದರೊಂದಿಗೆ ನನಗೆ ಉತ್ತಮ ಸಂಪರ್ಕವಿದೆ. ಗಮನ ಮತ್ತು ಸ್ಥಿರತೆಯನ್ನು ಹೊಂದಿದಾಗ ಮಾತ್ರ ಸಾಧನೆ ಸಾಧ್ಯವಾಗುತ್ತದೆ. ನಾನು ಶೂಟಿಂಗ್ ಅನ್ನು ಇಷ್ಟಪಡುತ್ತೇನೆ. 2015ರಲ್ಲಿ ನಮ್ಮ ತಂದೆ ಬೇಸಿಗೆ ರಜೆಯಲ್ಲಿ ಶೂಟಿಂಗ್ ರೇಂಜ್‌ಗೆ ಕರೆದೊಯ್ದರು. ನಾನು ಕೆಲವು ಶಾಟ್‌ಗಳನ್ನು ಶೂಟ್ ಮಾಡಿದೆ. ಅವು ಸರಿಯಾಗಿದ್ದವು. ಹಾಗಾಗಿ ನಾನು ಹವ್ಯಾಸವಾಗಿ ಶೂಟಿಂಗ್ ಆರಂಭಿಸಿದೆ. ಹೀಗಾಗಿ ಇಂದು ನಾನು ಇಲ್ಲಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಈಜುಗಾರ ಮುರಳಿಕಾಂತ್ ಪೆಟ್ಕರ್ (1972), ಜಾವೆಲಿನ್ ಥ್ರೋಯರ್ ದೇವೇಂದ್ರ ಜಜಾರಿಯಾ (2004, 2016) ಹಾಗೂ ಹೈಜಂಪರ್ ಮರಿಯಪ್ಪನ್ ತಂಗವೇಲು (2016) ನಂತರ ಪ್ಯಾರಾಲಿಂಪಿಕ್ಸ್ ಚಿನ್ನ ಗೆದ್ದ ಭಾರತದ ನಾಲ್ಕನೇ ಕ್ರೀಡಾಪಟು ಅವಾನಿ ಅವರಾಗಿದ್ದಾರೆ.
ಮಹಿಳಾ ವಿಭಾಗದ ಮಿಶ್ರ 10 ಮೀಟರ್ ಏರ್ ರೈಫಲ್ ಶೂಟಿಂಗ್, ಮಹಿಳೆಯರ 50 ಮೀಟರ್ ರೈಫಲ್ ಶೂಟಿಂಗ್‌ನ 3 ಸ್ಥಾನಕ್ಕಾಗಿ ಹಾಗೂ ಮಿಶ್ರ 50 ಮೀ. ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಅವಿನಾ ಲೇಖರಾ ಸ್ಪರ್ಧಿಸಲಿದ್ದಾರೆ.