ಫರೀದ್‌ಕೋಟ್ (ಪಂಜಾಬ್) : ಬರೋಬ್ಬರಿ 41 ವರ್ಷಗಳ ಬಳಿಕ ಭಾರತದ ಪುರುಷರ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್ ಸೆಮಿಫೈನಲ್ನಲ್ಲಿ ಕಂಚಿನ ಪದಕ ಜಯಿಸಿದೆ. ಜರ್ಮನಿ ತಂಡದ ವಿರುದ್ಧ 5-4 ಗೋಲುಗಳ ಅಂತರದಿಂದ ಐತಿಹಾಸಿಕ ಗೆಲುವು ದಾಖಲಿಸಿದೆ.
ಸೆಮಿಫೈನಲ್ನಲ್ಲಿ ಭಾರತ ತಂಡ ಜಯಗಳಿಸುತ್ತಿದ್ದಂತೆ ಪಂಜಾಬ್ನ ಫರೀದ್ ಕೋಟ್ನಲ್ಲಿರುವ ಡ್ರ್ಯಾಗ್-ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಕುಟುಂಬಸ್ಥರೆಲ್ಲ ಒಟ್ಟಾಗಿ ಕುಳಿತು ಟಿವಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದರು. ಈ ವೇಳೆ ಭಾರತ ತಂಡ ಜಯಗಳಿಸುತ್ತಿದ್ದಂತೆ ಕುಟುಂಬ ಸದಸ್ಯರು ಕುಣಿದು ಕುಪ್ಪಳಿಸಿದರು. ಒಬ್ಬರನ್ನೊಬ್ಬರು ಅಪ್ಪಿಕೊಂಡು ಸಂಭ್ರಮಿಸಿದರು.
ಓದಿ : ಒಲಿಂಪಿಕ್ಸ್ನಲ್ಲಿ ಹಾಕಿ ತಂಡಕ್ಕೆ ಗೆಲುವು: ತಂಡದ ಸದಸ್ಯರ ಮನೆಯಲ್ಲಿ ಆನಂದದ ಹೊನಲು
ಈಟಿವಿ ಭಾರತದೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಂಡ ರೂಪಿಂದರ್ ಪಾಲ್ ಸಿಂಗ್ ಅವರ ತಾಯಿ ಮತ್ತು ಸಂಬಂಧಿಕರು ಭಾರತ ತಂಡಕ್ಕೆ ಅಭಿನಂದನೆ ಹೇಳಿದರು. ತಮ್ಮ ಮನೆ ಮಗನ ಸಾಧನೆಯ ಬಗ್ಗೆ ಹೇಳುವಾಗ ಪಾಲ್ ಕುಟುಂಬಸ್ಥರ ಕಣ್ಣಲ್ಲಿ ಆನಂದ ಭಾಷ್ಪ ತುಂಬಿತ್ತು.