ETV Bharat / sports

ಇತಿಹಾಸ ರಚಿಸುವತ್ತ ಲವ್ಲಿನಾ ಚಿತ್ತ.. ವಿಶ್ವ ಚಾಂಪಿಯನ್ ಬಾಕ್ಸರ್​​ ವಿರುದ್ಧ ನಾಳೆ ಮಹತ್ವದ ಫೈಟ್​! - ಲವ್ಲಿನಾ ಸೆಮಿಫೈನಲ್​

ಈಗಾಗಲೇ ಭಾರತಕ್ಕೆ ಪದಕ ಖಚಿತಪಡಿಸಿರುವ ಬಾಕ್ಸರ್​ ಲವ್ಲಿನಾ ನಾಳೆ ಸೆಮಿಫೈನಲ್​​ ಪಂದ್ಯದಲ್ಲಿ ಹೋರಾಟ ನಡೆಸಲಿದ್ದಾರೆ.

Indian Boxer Lovlina
Indian Boxer Lovlina
author img

By

Published : Aug 3, 2021, 4:32 PM IST

ಟೋಕಿಯೋ: ಒಲಿಂಪಿಕ್ಸ್​​ನಲ್ಲಿ ಈಗಾಗಲೇ ಭಾರತಕ್ಕೆ ಇನ್ನೊಂದು ಪದಕ ಖಚಿತ ಪಡಿಸಿರುವ ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ನಾಳೆ ಮಹತ್ವದ ಸೆಮಿಫೈನಲ್​​ ಪಂದ್ಯದಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ, ವಿಶ್ವ ಚಾಂಪಿಯನ್​ ಬಾಕ್ಸರ್​ ಟರ್ಕಿಯ ಬುಸೆನಾಜ್ ಸುರಮೆನೆಲ್ಲಿ ವಿರುದ್ಧ ಸೆಣಸಾಟ ನಡೆಸಲಿದ್ದಾರೆ.

69 ಕೆಜಿ ವಿಭಾಗದ ಪಂದ್ಯದಲ್ಲಿ ಈಗಾಗಲೇ ಸಮಿಫೈನಲ್​ಗೆ ಲಗ್ಗೆ ಹಾಕಿರುವ ಲವ್ಲಿನಾ ಗೆಲುವು ದಾಖಲೆ ಮಾಡಿದರೆ ಹೊಸ ಇತಿಹಾಸ ರಚನೆಯಾಗಲಿದ್ದು, ಅದಕ್ಕಾಗಿ ಬಾಕ್ಸರ್​​ ಪ್ರಯತ್ನ ಮಾಡಲಿದ್ದಾರೆ. 23 ವರ್ಷದ ಲವ್ಲಿನಾಗೂ ಮೊದಲು 2008ರಲ್ಲಿ ವಿಜೇಂದರ್​ ಸಿಂಗ್​ ಹಾಗೂ 2012ರಲ್ಲಿ ಮೇರಿಕೋಮ್​​ ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದಾರೆ. ಆದರೆ, ಇದೀಗ ಸೆಮಿಫೈನಲ್​​ನಲ್ಲಿ ಗೆಲ್ಲುವ ಮೂಲಕ ಭಾರತಕ್ಕೆ ಬೆಳ್ಳಿ ಅಥವಾ ಚಿನ್ನದ ಪದಕ ತಂದುಕೊಡುವ ಇರಾದೆ ಇಟ್ಟುಕೊಂಡಿದ್ದಾರೆ. ಬೆಳ್ಳಿ ಅಥವಾ ಚಿನ್ನದ ಪದಕ ಗೆದ್ದರೆ ಈ ಸಾಧನೆ ಮಾಡುವ ಮೊದಲ ಭಾರತದ ಬಾಕ್ಸರ್ ಎಂಬ ಸಾಧನೆ ಕೂಡ ಮಾಡಲಿದ್ದಾರೆ.

ಇದನ್ನೂ ಓದಿರಿ: 6ನೇ ಮದುವೆಯಾದ ಆರೋಪ.. ಮಾಜಿ ಸಚಿವನ ವಿರುದ್ಧ ದೂರು ನೀಡಿದ ಮೂರನೇ ಪತ್ನಿ!

ಈ ಹಿಂದೆ ಕ್ವಾರ್ಟರ್​ ಫೈನಲ್​​ನಲ್ಲಿ 4-1 ಅಂತರದಲ್ಲಿ ಎದುರಾಳಿ ಚಿನ್‌-ಚೆನ್‌ ವಿರುದ್ಧ ಗೆಲುವು ದಾಖಲು ಮಾಡಿದ್ದರು. ನಾಳೆ ಸೆಮಿಫೈನಲ್​ ಪಂದ್ಯ ನಡೆಯಲಿದ್ದು, ಎಲ್ಲರ ಚಿತ್ತ ಅವರ ಮೇಲಿದೆ. ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತದ 120ಕ್ಕೂ ಅಧಿಕ ಅಥ್ಲೀಟ್ಸ್​ಗಳು ಭಾಗಿಯಾಗಿದ್ದು, ಇಲ್ಲಿಯವರೆಗೆ ಎರಡು ಪದಕ ಗೆಲ್ಲುವಲ್ಲಿ ಭಾರತ ಯಶಸ್ವಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.