ETV Bharat / sports

2.5 ಕೋಟಿ ರೂ, ಸರ್ಕಾರಿ ಕೆಲಸ & ಪ್ಲಾಟ್​​​​: ಕಂಚು ಗೆದ್ದ ಹರಿಯಾಣ ಹಾಕಿ ಪ್ಲೇಯರ್ಸ್​ಗೆ ಬಂಪರ್​​ - ಹರಿಯಾಣ ಹಾಕಿ ಕ್ರೀಡಾಪಟುಗಳು

41 ವರ್ಷಗಳ ಬಳಿಕ ಭಾರತಕ್ಕೆ ಪದಕ ಗೆದ್ದುಕೊಡುವಲ್ಲಿ ಭಾರತದ ಪುರುಷರ ಹಾಕಿ ತಂಡ ಯಶಸ್ವಿಯಾಗಿದ್ದು, ಇದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

hockey players
hockey players
author img

By

Published : Aug 5, 2021, 5:48 PM IST

Updated : Aug 5, 2021, 6:55 PM IST

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತ ಹಾಕಿ ತಂಡ ಜರ್ಮನಿ ವಿರುದ್ಧ 5-4 ಅಂತರದ ಗೆಲುವು ದಾಖಲು ಮಾಡುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ. ಈ ಮೂಲಕ 41 ವರ್ಷಗಳ ಬಳಿಕ ಇತಿಹಾಸ ಸೃಷ್ಟಿ ಮಾಡಿದ್ದು, ಇದಕ್ಕೆ ಎಲ್ಲೆಡೆಯಿಂದ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪುರುಷರ ಹಾಕಿ ತಂಡದಲ್ಲಿ ಹರಿಯಾಣ, ಪಂಜಾಬ್​​ ಹಾಗೂ ಮಧ್ಯಪ್ರದೇಶದ ಅತಿ ಹೆಚ್ಚಿನ ಹಾಕಿ ಪ್ಲೇಯರ್ಸ್​ ಇದ್ದಾರೆ. ಈಗಾಗಲೇ ಪಂಜಾಬ್, ಮಧ್ಯಪ್ರದೇಶದ ಹಾಕಿ ಪ್ಲೇಯರ್ಸ್​ಗಳಿಗೆ ಅಲ್ಲಿನ ಸರ್ಕಾರ ಬಹುಮಾನ ಘೋಷಣೆ ಮಾಡಿದ್ದು, ಇದರ ಬೆನ್ನಲ್ಲೇ ಇದೀಗ ಮನೋಹರ್​ಲಾಲ್​ ಖಟ್ಟರ್​​ ನೇತೃತ್ವದ ಹರಿಯಾಣ ಸರ್ಕಾರ ಕೂಡ ಬಂಪರ್​ ಬಹುಮಾನ ಘೋಷಿಸಿದೆ. ಒಲಿಂಪಿಕ್ಸ್​ ತಂಡದಲ್ಲಿರುವ ಇಬ್ಬರು ಹರಿಯಾಣ ಆಟಗಾರರಿಗೆ ತಲಾ 2.5 ಕೋಟಿ ರೂ, ಸರ್ಕಾರಿ ನೌಕರಿ ಹಾಗೂ ಪ್ಲಾಟ್​​​​ ನೀಡುವುದಾಗಿ ಮನೋಹರ್​ಲಾಲ್​ ಖಟ್ಟರ್​ ಟ್ವೀಟ್ ಮಾಡಿದ್ದಾರೆ.

  • मैं हरियाणा सरकार की तरफ से भारतीय पुरुष हॉकी टीम में शामिल हरियाणा के दोनों खिलाड़ियों को ढाई-ढाई करोड़ रूपये की इनाम राशि के साथ-साथ खेल विभाग में नौकरी और कंसेशनल रेट पर HSVP के प्लॉट देने की घोषणा करता हूँ। pic.twitter.com/UFT0kkQwfX

    — Manohar Lal (@mlkhattar) August 5, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: ಹಾಕಿ ಸಾಧಕರಿಗೆ ತಲಾ 1 ಕೋಟಿ ರೂ. ನಗದು ಬಹುಮಾನ ಘೋಷಿಸಿದ ಪಂಜಾಬ್, ಮಧ್ಯಪ್ರದೇಶ

ಮಧ್ಯಪ್ರದೇಶದ ಆಟಗಾರರಾಗಿರುವ ವಿವೇಕ್​ ಸಾಗರ್​ ಹಾಗೂ ನೀಲಕಂಠ ಶರ್ಮಾಗೆ 1 ಕೋಟಿ ರೂ. ನೀಡುವುದಾಗಿ ಮಧ್ಯಪ್ರದೇಶ ಸಿಎಂ ಹೇಳಿದ್ದಾರೆ. ಪಂಜಾಬ್ ಸರ್ಕಾರ ಕೂಡ 1 ಕೋಟಿ ರೂ. ಘೋಷಣೆ ಮಾಡಿದೆ. 41 ವರ್ಷಗಳ ಬಳಿಕ ಭಾರತದ ಪುರುಷರ ಹಾಕಿ ತಂಡವು 2020ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಸೆಮಿಪೈನಲ್‌ ಪ್ರವೇಶಿಸಿ ಕಂಚಿನ ಪದಕ ಗೆದ್ದುಕೊಂಡಿದೆ. ಜರ್ಮನಿ ತಂಡದ ವಿರುದ್ಧ 5 - 4 ಗೋಲುಗಳ ಅಂತರದಿಂದ ಸ್ಮರಣೀಯ ಗೆಲುವು ದಾಖಲಿಸಿದೆ.

ಭಾರತದ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಹಾಗೂ ಬಾಲಿವುಡ್​ ಸ್ಟಾರ್ಸ್​​ ಅಭಿನಂದನೆ ಸಲ್ಲಿಸಿದ್ದಾರೆ.

Last Updated : Aug 5, 2021, 6:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.