ETV Bharat / sports

ದುಬೈ ಚಾಂಪಿಯನ್​ಶಿಪ್​: ಪ್ರಜ್ನೇಶ್​ಗೆ ಸೋಲುಣಿಸಿದ ಯೂಕಿ ಬಾಂಬ್ರಿ

ರಾಮ್​ಕುಮಾರ್​ ವಿರುದ್ಧ ಈ ಹಿಂದಿನ 5 ಮುಖಾಮುಖಿಯಲ್ಲಿ ಯೂಕಿ 4 ಬಾರಿ ಗೆಲುವು ಸಾಧಿಸಿದ್ದಾರೆ. ಈ ಇಬ್ಬರಲ್ಲಿ ಯಾರೇ ಗೆದ್ದರೂ ಟೂರ್ನಿಯ ಪ್ರಮುಖ ಸುತ್ತಿನಲ್ಲಿ ಏಕೈಕ ಭಾರತೀಯನಾಗಿ ಕಣಕ್ಕಿಳಿಯಲಿದ್ದಾರೆ.

author img

By

Published : Mar 13, 2021, 8:13 PM IST

ಯೂಕಿ ಬಾಂಬ್ರಿ
ಯೂಕಿ ಬಾಂಬ್ರಿ

ದುಬೈ: ಭಾರತದ ನಂಬರ್​ ಒನ್ ಶ್ರೇಯಾಂಕದ ಪ್ರಜ್ನೇಶ್ ಗುಣೇಶ್ವರನ್​ ಅವರನ್ನು ಯೂಕಿ ಬಾಂಬ್ರಿ ದುಬೈ ಡ್ಯೂಟಿ ಫ್ರೀ ಚಾಂಪಿಯನ್​ಶಿಪ್​ ಕ್ವಾಲಿಫೈಯರ್​ ಪಂದ್ಯದಲ್ಲಿ ಸೋಲಿಸಿ ಟೆನ್ನಿಸ್​ಗೆ ಅದ್ಭುತ ಕಮ್​​ಬ್ಯಾಕ್ ಮಾಡಿದ್ದಾರೆ.

28 ವರ್ಷದ ಬಾಂಬ್ರಿ ಪ್ರಜ್ನೇಶ್​ರನ್ನು 6-1, 6-4ರ ನೇರ ಸೆಟ್​ಗಳ ಅಂತರದಿಂದ ಮಣಿಸುವ ಮೂಲಕ ಕ್ವಾಲಿಫೈಯರ್​ನ 2ನೇ ಸುತ್ತು ಪ್ರವೇಶಿಸಿದ್ದಾರೆ. ಜೂನಿಯರ್ ವಿಭಾಗದ ಮಾಜಿ ನಂಬರ್​ 1 ಆಗಿರುವ ಬಾಂಬ್ರಿ ಪ್ರಜ್ನೇಶ್​ ವಿರುದ್ಧ ಸತತ 3ನೇ ಮುಖಾಮುಖಿಯಲ್ಲೂ ಗೆಲುವು ಸಾಧಿಸಿದ್ದಾರೆ. ಈ ಹಿಂದೆ 2017ರಲ್ಲಿ ಬೆಂಗಳೂರು ಮತ್ತು ಕರ್ಶಿಯ ಮುಖಾಮುಖಿಯಲ್ಲಿ ಸೋಲಿಸಿದ್ದರು.

ಗಾಯದ ಕಾರಣ ಟೆನ್ನಿಸ್​ನಿಂದ 2 ವರ್ಷಗಳ ಕಾಲ ದೂರ ಉಳಿದಿದ್ದ ಯೂಕಿ, ಸಿಂಗಾಪುರ್​ ಓಪನ್​ನಲ್ಲಿ ಹಿಂತಿರುಗಿದರಾದರೂ ಮ್ಯಾಥ್ಯೂ ಎಡ್ಬನ್​ ವಿರುದ್ಧ ಸೋಲು ಕಂಡಿದ್ದರು. ಮುಂದಿನ ಸುತ್ತಿನ ಪಂದ್ಯದಲ್ಲಿ ಅವರು ಭಾರತದವರೇ ಆದ ರಾಮ್​ಕುಮಾರ್​ ರಾಮನಾಥನ್​ ಅವರನ್ನು ಎದುರಿಸಲಿದ್ದಾರೆ. ರಾಮನಾಥನ್​ ರಷ್ಯಾದ ಇವ್ಗೆನಿ ಡಾನ್​ಸ್ಕಾಯ್​ ವಿರುದ್ಧ 6-4, 6-4ರಲ್ಲಿ ಗೆಲುವು ಪಡೆದಿದ್ದರು.

​ರಾಮ್​ಕುಮಾರ್​ ವಿರುದ್ಧ ಈ ಹಿಂದಿನ 5 ಮುಖಾಮುಖಿಯಲ್ಲಿ ಯೂಕಿ 4 ಬಾರಿ ಗೆಲುವು ಸಾಧಿಸಿದ್ದಾರೆ. ಈ ಇಬ್ಬರಲ್ಲಿ ಯಾರೇ ಗೆದ್ದರೂ ಟೂರ್ನಿಯ ಪ್ರಮುಖ ಸುತ್ತಿನಲ್ಲಿ ಏಕೈಕ ಭಾರತೀಯನಾಗಿ ಕಣಕ್ಕಿಳಿಯಲಿದ್ದಾರೆ.

ಇದನ್ನು ಓದಿ:ಯಾವುದೇ ಕ್ರಮಾಂಕದಲ್ಲಿ ಆಡಲು ನಾನು ಸಿದ್ಧ.. ಇಶಾನ್ ಕಿಶನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.