ಲಂಡನ್: ಸರ್ಬಿಯನ್ ಟೆನ್ನಿಸ್ ತಾರೆ ನೊವಾಕ್ ಜೋಕೊವಿಕ್ ಎಟಿಪಿ ರ್ಯಾಂಕಿಂಗ್ನಲ್ಲಿ 311 ವಾರಗಳ ಕಾಲ ನಂ.1 ಸ್ಥಾನ ಪೂರೈಸುವ ಮೂಲಕ ರೋಜರ್ ಫೆಡರರ್ ಹಿಂದಿಕ್ಕಿ ವಿಶ್ವದಾಖಲೆ ಬರೆದಿದ್ದಾರೆ.
ನೂತನ ಎಟಿಪಿ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಉಳಿಸಿಕೊಂಡಿರುವ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಜೋಕೊವಿಕ್ ಇಂದಿಗೆ ಒಟ್ಟು ವೃತ್ತಿ ಜೀವನದಲ್ಲಿ 311 ವಾರಗಳನ್ನು ಅಗ್ರ ಶ್ರೇಯಾಂಕದಲ್ಲಿ ಕಳೆದಿದ್ದಾರೆ. ಇದಕ್ಕೂ ಮುನ್ನ ಸ್ವಿಸ್ ಸ್ಟಾರ್ ರೋಜರ್ ಫೆಡರರ್ 310 ವಾರಗಳ ಕಾಲ ಅಗ್ರ ಸ್ಥಾನದಲ್ಲಿದ್ದರು.
"ದಾಖಲೆ ಮುರಿದುಬಿದ್ದಿದೆ, ನೊವಾಕ್ ಜೋಕೊವಿಕ್ ಎಟಿಪಿ ರ್ಯಾಂಕಿಂಗ್ನಲ್ಲಿ ಅತಿ ಹೆಚ್ಚು ವಾರಗಳ ಕಾಲ ಮೊದಲ ಶ್ರೇಯಾಂಕದಲ್ಲಿದ್ದ ದಾಖಲೆಗೆ ಪಾತ್ರರಾಗಿದ್ದಾರೆ" ಎಂದು ಎಟಿಪಿ ಟೂರ್ ತನ್ನ ಅಧಿಕೃತ ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ.
33 ವರ್ಷದ ಜೋಕೊವಿಕ್ ಮೊದಲ ಬಾರಿಗೆ 2011ರಲ್ಲಿ ಅಗ್ರಶ್ರೇಯಾಂಕ ಪಡೆದಿದ್ದರು. 2020ರ ಕೊನೆಯಲ್ಲಿ ನಂಬರ್ ಒನ್ ಸ್ಥಾನ ಪಡೆಯುವ ಮೂಲಕ 6ನೇ ಬಾರಿ ಅಗ್ರ ಶ್ರೇಯಾಂಕಿತ ಆಟಗಾರನಾಗಿ ಕ್ಯಾಲೆಂಡರ್ ವರ್ಷ ಪೂರ್ಣಗೊಳಿಸಿದ್ದರು.
-
The record is broken!@DjokerNole now holds the record for most weeks at No. 1 in the @fedex ATP Rankings 👏 #Novak311 pic.twitter.com/stV5Hnghdm
— ATP Tour (@atptour) March 8, 2021 " class="align-text-top noRightClick twitterSection" data="
">The record is broken!@DjokerNole now holds the record for most weeks at No. 1 in the @fedex ATP Rankings 👏 #Novak311 pic.twitter.com/stV5Hnghdm
— ATP Tour (@atptour) March 8, 2021The record is broken!@DjokerNole now holds the record for most weeks at No. 1 in the @fedex ATP Rankings 👏 #Novak311 pic.twitter.com/stV5Hnghdm
— ATP Tour (@atptour) March 8, 2021
ಈ ವರ್ಷದ ಆರಂಭದಲ್ಲಿ ಜೋಕೊವಿಕ್ 9ನೇ ಬಾರಿ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಮೂಲಕ ವೃತ್ತಿ ಜೀವನದ 18ನೇ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
ಅತಿ ಹೆಚ್ಚು ವಾರಗಳ ಕಾಲ ನಂಬರ್ 1 ಶ್ರೇಯಾಂಕದಲ್ಲಿದ್ದವರು:
- ನೊವಾಕ್ ಜೊಕೊವಿಕ್ 311
- ರೋಜರ್ ಫೆಡರರ್ 310
- ಪೀಟ್ ಸಂಪ್ರಾಸ್ 286
- ಇವಾನ್ ಲೆಂಡ್ಲ್ 270
- ಜಿಮ್ಮಿ ಕಾನರ್ಸ್ 268
- ರಾಫೆಲ್ ನಡಾಲ್ 209
- ಜಾನ್ ಮೆಕೆನ್ರೋ 170