ನ್ಯೂಯಾರ್ಕ್ : ಭಾರತದ ರೋಹನ್ ಬೋಪಣ್ಣ ಮತ್ತು ಕೆನಡಾದ ಡೆನಿಸ್ ಶಪೊವಾಲೋವ್ ಜೋಡಿ ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್ಸ್ನಲ್ಲಿ ಸೋಲು ಕಾಣುವ ಮೂಲಕ ಟೂರ್ನಿಯಿಂದ ನಿರ್ಗಮಿಸಿದೆ. ಈ ಮೂಲಕ ಭಾರತದ ಸವಾಲು ಕೂಡ ಅಂತ್ಯವಾಗಿದೆ.
ಸೋಮವಾರ ತಡರಾತ್ರಿ(1:30) ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಡೊ-ಕೆನಡಿಯನ್ ಜೋಡಿ 5-7, 5-7 ನೇರ ಸೆಟ್ಗಳಿಂದ ನೆದರ್ಲೆಂಡ್ಸ್ನ ಜೀನ್ ಜಿಲಿಯನ್ ರೋಜರ್ ಮತ್ತು ರೊಮೇನಿಯಾದ ಹೊರಿಯಾ ಟೆಕಾವು ಜೋಡಿ ವಿರುದ್ಧ ಸೋತಿದೆ.
2018ರಲ್ಲಿ ಯುಎಸ್ ಓಪನ್ ಮತ್ತು ಫ್ರೆಂಚ್ ಓಪನ್ ಎರಡರಲ್ಲೂ ಕ್ವಾರ್ಟರ್ ಫೈನಲ್ನಲ್ಲಿ ತಲುಪಿದ್ದೇ ಬೋಪಣ್ಣ-ಶಪೊವಾಲೋವ್ ಜೋಡಿಯ ಈವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ.
ಭಾರತ-ಕೆನಡಾ ಜೋಡಿಯನ್ನು ಮಣಿಸಿರುವ ರೋಜರ್-ಟೆಕಾವು ಜೋಡಿ ಸೆಮಿಫೈನಲ್ನಲ್ಲಿ ಕ್ರೊವೇಷಿಯಾದ ಮೇಟ್ ಪ್ಯಾವಿಕ್ ಮತ್ತು ಬ್ರೆಜಿಲ್ ಬ್ರೂನೋ ಸೋರೆಸ್ ಜೋಡಿಯನ್ನು ಎದುರಿಸಲಿದೆ.