ಪ್ಯಾರಿಸ್: ದಾಖಲೆಯ 20 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಪ್ರಸಕ್ತ ಸಾಲಿನ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಪ್ರಸಕ್ತ ಸಾಲಿನ ಪಂದ್ಯಾವಳಿಯಲ್ಲಿ ಅವರು ನಾಲ್ಕನೇ ಸುತ್ತಿಗೆ ಪ್ರವೇಶಿಸಿರುವ ಹೊರತಾಗಿಯೂ ಅಚ್ಚರಿಯ ಬೆಳವಣಿಗೆ ನಡೆದಿದೆ.
-
3️⃣ hours and 3️⃣6️⃣ minutes!
— Roland-Garros (@rolandgarros) June 5, 2021 " class="align-text-top noRightClick twitterSection" data="
At 12:43 am, @rogerfederer slams the door on Koepfer 7-6(5), 6-7(3), 7-6(4), 7-5 to reach the final 16.#RolandGarros pic.twitter.com/bBeZOX3Qgc
">3️⃣ hours and 3️⃣6️⃣ minutes!
— Roland-Garros (@rolandgarros) June 5, 2021
At 12:43 am, @rogerfederer slams the door on Koepfer 7-6(5), 6-7(3), 7-6(4), 7-5 to reach the final 16.#RolandGarros pic.twitter.com/bBeZOX3Qgc3️⃣ hours and 3️⃣6️⃣ minutes!
— Roland-Garros (@rolandgarros) June 5, 2021
At 12:43 am, @rogerfederer slams the door on Koepfer 7-6(5), 6-7(3), 7-6(4), 7-5 to reach the final 16.#RolandGarros pic.twitter.com/bBeZOX3Qgc
ನಿನ್ನೆ ನಡೆದ ಪಂದ್ಯದಲ್ಲಿ ಫೆಡರರ್ ಜರ್ಮನಿಯ ಡೊಮಿನಿಕ್ ಕೂಫರ್ ವಿರುದ್ಧ ಬರೊಬ್ಬರಿ 3 ಗಂಟೆ 36 ನಿಮಿಷ ಸೆಣಸಾಟ ನಡೆಸಿದರು. ಬರೋಬ್ಬರಿ 3 ಗಂಟೆ 36 ನಿಮಿಷ ನಡೆದ ಪಂದ್ಯದಲ್ಲಿ ಫೆಡರರ್, ಕೂಫರ್ ವಿರುದ್ಧ 7-6(5) 6-7(3) 7-6(4) 7-5ರ ಅಂತರದಲ್ಲಿ ಪ್ರಯಾಸದ ಗೆಲುವು ದಾಖಲಿಸಿದ್ದರು. ಈ ಪಂದ್ಯವೂ ಕೂಡ ಫೆಡರರ್ ಅವರ ಕಾಲಿನ ಗಾಯದ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
- — Roger Federer (@rogerfederer) June 6, 2021 " class="align-text-top noRightClick twitterSection" data="
— Roger Federer (@rogerfederer) June 6, 2021
">— Roger Federer (@rogerfederer) June 6, 2021
ಮೊಣಕಾಲಿನ ಶಸ್ತ್ರಚಿಕಿತ್ಸೆಯ ಬಳಿಕ ಕಳೆದ ಮೂರು ವರ್ಷಗಳಲ್ಲಿ ಫೆಡರರ್ ಆರು ಪಂದ್ಯಗಳನ್ನಾಡಿದ್ದಾರೆ.
"ನನ್ನ ತಂಡದೊಂದಿಗೆ ಚರ್ಚಿಸಿದ ನಂತರ ಇಂದು ಫ್ರೆಂಚ್ ಓಪನ್‌ನಿಂದ ಹೊರಬರಲು ನಿರ್ಧರಿಸಿದ್ದೇನೆ. ಎರಡು ಮೊಣಕಾಲು ಶಸ್ತ್ರಚಿಕಿತ್ಸೆಗಳ ಬಳಿಕ ಮತ್ತು ಒಂದು ವರ್ಷದ ರಿ-ಹ್ಯಾಬ್ (ಪುನಶ್ಚೇತನ ಕೇಂದ್ರ) ನಂತರ ನನ್ನ ದೇಹದ ಆರೋಗ್ಯದ ಕಡೆಗೆ ಗಮನ ನೀಡಬೇಕಿದೆ. ಈಗಾಗಲೇ ಬೆಲ್ಟ್ ಧರಿಸಿ 3 ಪಂದ್ಯಗಳನ್ನು ಆಡಿದ್ದು ನನಗೆ ರೋಮಾಂಚನ ಅನುಭವ ನೀಡಿದೆ".
- ರೋಜರ್ ಫೆಡರರ್