ನ್ಯೂಯಾರ್ಕ್: ಇಪ್ಪತ್ತು ಬಾರಿ ಗ್ರ್ಯಾಂಡ್ಸ್ಲಾಮ್ ವಿಜೇತ ವಿಶ್ವವಿಖ್ಯಾತ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಯುಎಸ್ ಓಪನ್ ಟೂರ್ನಿಯಲ್ಲಿ ತನಗಿಂತ ಕೆಳ ಶ್ರೇಯಾಂಕದ ಆಟಗಾರನ ವಿರುದ್ಧ ಅಚ್ಚರಿಯ ಸೋಲು ಅನುಭವಿಸಿ ಅಭಿಯಾನ ಕೊನೆಗೊಳಿಸಿದ್ದಾರೆ.
78ನೇ ಶ್ರೇಯಾಂಕದ ಬಲ್ಗೇರಿಯನ್ ಆಟಗಾರ ಗ್ರಿಗರ್ ಡಿಮಿಟ್ರೋವ್ ಈ ಹಿಂದೆ ಏಳು ಬಾರಿ ರೋಜರ್ ಫೆಡರರ್ ಎದುರು ಮುಖಾಮುಖಿಯಾಗಿದ್ದರು. ಅಚ್ಚರಿಯ ಅಂಶವೆಂದರೆ ಈ ಏಳೂ ಪಂದ್ಯಗಳಲ್ಲೂ ಫೆಡರರ್ ಸುಲಭ ಗೆಲುವು ದಾಖಲಿಸಿದ್ದರು. ಆದರೆ ಈ ಬಾರಿ ಅಚ್ಚರಿಯ ಫಲಿತಾಂಶದ ಪರಿಣಾಮ ಫೆಡರರ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
-
The first men's semifinal is set...
— US Open Tennis (@usopen) September 4, 2019 " class="align-text-top noRightClick twitterSection" data="
Who's your pick? 🤔#USOpen | @DaniilMedwed | @GrigorDimitrov pic.twitter.com/bndL7iM3CT
">The first men's semifinal is set...
— US Open Tennis (@usopen) September 4, 2019
Who's your pick? 🤔#USOpen | @DaniilMedwed | @GrigorDimitrov pic.twitter.com/bndL7iM3CTThe first men's semifinal is set...
— US Open Tennis (@usopen) September 4, 2019
Who's your pick? 🤔#USOpen | @DaniilMedwed | @GrigorDimitrov pic.twitter.com/bndL7iM3CT
3-6, 6-4, 3-6, 6-4, 6-2 ಸೆಟ್ಗಳ ಮೂಲಕ ಸ್ವಿಸ್ ಆಟಗಾರನನ್ನು ಸೋಲಿಸಿರುವ ಗ್ರಿಗರ್ ಡಿಮಿಟ್ರೋವ್ ಇದೇ ಮೊದಲ ಬಾರಿಗೆ ಯುಎಸ್ ಓಪನ್ನಲ್ಲಿ ಸೆಮಿಫೈನಲ್ಗೆ ಎಂಟ್ರಿ ಕೊಟ್ಟಿದ್ದಾರೆ. ಶುಕ್ರವಾರ ನಡೆಯಲಿರುವ ಸೆಮೀಸ್ನಲ್ಲಿ ರಷ್ಯಾದ ಐದನೇ ಶ್ರೇಯಾಂಕಿತ ಆಟಗಾರ ಡ್ಯಾನಿಲ್ ಮೆಡ್ವೆಡ್ರನ್ನು ಎದುರಿಸಲಿದ್ದಾರೆ.